ಕಾಡಾನೆ ದಾಳಿಗೆ ಬೆಳೆ ನಾಶ
ಕೊಡಗು

ಕಾಡಾನೆ ದಾಳಿಗೆ ಬೆಳೆ ನಾಶ

July 16, 2018

ಸುಂಟಿಕೊಪ್ಪ: ಒಂದೆಡೆ ಭಾರೀ ಗಾಳಿ ಮಳೆಯಿಂದ ಜನತೆಯು ನಲುಗಿದ್ದರೆ, ಮತ್ತೊಂದು ಭಾಗದಿಂದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

ಅಪಾರ ಬೆಳೆ ನಷ್ಟ ಜೊತೆಗೆ ತೋಟದಲ್ಲಿಯೇ ಬೀಡುಬಿಟ್ಟ ಕಾಡಾನೆಗಳಿಂದ ಜನ ಆತಂಕದ ಸ್ಥಿತಿಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ನಿವೃತ್ತ ರೇಂಜರ್ ಅಪ್ಪಯ್ಯ ಅವರ ನೆಲಜಿ ತೋಟಕ್ಕೆ ನುಗ್ಗಿದ್ದ ಮೂರು ಕಾಡಾನೆಗಳು ಬಾಳೆ, ಕಾಫಿ ಇನ್ನಿತರ ಕೃಷಿ ಫಸಲುಗಳನ್ನು ತಿಂದು ತುಳಿದು ಧ್ವಂಸಗೊಳಿಸಿವೆ ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತೋಟದ ಮಾಲೀಕರು ನೋವನ್ನು ತೋಡಿಕೊಂಡಿ ದ್ದಾರೆ.

ವಿಷಯವರಿತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ತೋಟದಿಂದ ಓಡಿಸಲು ನಡೆಸಿದ ಪ್ರಯತ್ನ ವಿಫಲಗೊಂಡಿತು.

Translate »