ದೇವರಕಾಡು ಹಾಡಿ ನಿವಾಸಿಗಳ ಮತದಾನ ಬಹಿಷ್ಕಾರ
ಕೊಡಗು

ದೇವರಕಾಡು ಹಾಡಿ ನಿವಾಸಿಗಳ ಮತದಾನ ಬಹಿಷ್ಕಾರ

April 19, 2019

ಗೋಣಿಕೊಪ್ಪಲು: ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಅರೋಪಿಸಿ ದೇವರ ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರ ಕಾಡು ಹಾಡಿ ನಿವಾಸಿಗಳು ಮತ ಬಹಿಷ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹಾಡಿಯ ಮೈದಾನದಲ್ಲಿ ಕ್ರಿಕೆಟ್ ಆಟ ವಾಡುವ ಮೂಲಕ ಪುರುಷರು ದಿನ ಕಳೆ ದರು. ಹಾಡಿಯಲ್ಲಿ ವಾಸವಿರುವ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳ ಮತದಾ ರರು ಮತಗಟ್ಟೆಯತ್ತ ತೆರಳಲಿಲ್ಲ. ಇದನ್ನು ಅರಿತ ಒಂದು ಪಕ್ಷದ ಪ್ರಮುಖರು ಮತ ಹಾಕುವಂತೆ ಓಲೈಸಲು ಮುಂದಾದರೂ ಸ್ಪಂದಿಸಲಿಲ್ಲ. ಪಕ್ಷದ ಕಾರ್ಯಕರ್ತರ ಎದುರು ಆಕ್ರೋಶ ವ್ಯಕ್ತಪಡಿಸಿ ಮತ ಬಹಿಷ್ಕಾರ ನಮ್ಮ ಇಚ್ಚೆ ಎಂದು ಅವರನ್ನು ಹಾಡಿಯಿಂದ ಹೊರ ಹಾಕಿದರು. ಈ ಸಂದರ್ಭ ಮಾಧ್ಯಮ ದೊಂದಿಗೆ ಮಾತನಾಡಿದ ಹಾಡಿ ನಿವಾಸಿ ರಾಣಿ, ಕಳೆದ 15 ವರ್ಷದಿಂದ ಕುಡಿ ಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ ಕಲ್ಪಿಸದೇ ಕಡೆಗಣಿಸಲಾಗುತ್ತಿದೆ. ಪ್ರತೀ ಚುನಾ ವಣೆ ಸಂದರ್ಭ ಪೊಳ್ಳು ಭರವಸೆ ನೀಡಿ ನಮ್ಮನ್ನು ಓಲೈಸಿಕೊಳ್ಳುತ್ತಾರೆ. ಆದರೆ, ಈ ಬಾರಿ ನಾವು ಎಲ್ಲರೂ ಒಟ್ಟಾಗಿ ಮತದಾನ ಮಾಡದಿರಲು ನಿರ್ಧರಿಸಿದ್ದೇವೆ ಎಂದರು.

Translate »