ಮತದಾರರಿಗೆ ಕಾಡಾನೆ ಭಯ: ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ
ಕೊಡಗು

ಮತದಾರರಿಗೆ ಕಾಡಾನೆ ಭಯ: ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ

April 19, 2019

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಇರುವಿಕೆ ಬಗ್ಗೆ ಮತದಾರರು ಭಯಭೀತರಾಗಿದ್ದರು. ಇದರಿಂದ ಅರಣ್ಯ ಇಲಾಖೆ ವತಿಯಿಂದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ಆರ್‍ಆರ್‍ಟಿ) ತಂಡವನ್ನು ಮತ ಕೇಂದ್ರಗಳಲ್ಲಿ ನಿಯೋಜನೆ ಮಾಡಲಾಗಿತ್ತು.

ಮತದಾನಕ್ಕೆ ಯಾವುದೇ ರೀತಿಯಲ್ಲಿ ಆಡಚಣೆಯಾಗದಂತೆ ಸಿಬ್ಬಂದಿಗಳು ನಿಗಾವಹಿಸಿ ಕಾರ್ಮಿಕರಿಗೆ ರಕ್ಷಣೆ ನೀಡಿದರು. ಕರಡಿಗೊಡು ಗ್ರಾಮದ ಮತ ಕೇಂದ್ರ ವ್ಯಾಪ್ತೀಯ ಕಾಫಿ ತೋಟಗಳಲ್ಲಿ 3 ಕಾಡಾನೆಗಳು ಪ್ರತ್ಯಕ್ಷಗೊಂಡ ಹಿನ್ನಲೆ ಉಪವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದ ತಂಡ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿ ಮತದಾನಕ್ಕೆ ಬರುವ ಕಾರ್ಮಿಕರಿಗೆ ರಕ್ಷಣೆ ನೀಡಿದರು.

Translate »