ಪಾಲಿಬೆಟ್ಟ ಗ್ರಾಪಂಗೆ ಅಂತರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ
ಕೊಡಗು

ಪಾಲಿಬೆಟ್ಟ ಗ್ರಾಪಂಗೆ ಅಂತರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ

December 5, 2018

ಸಿದ್ದಾಪುರ:  ಸಮೀಪದ ಪಾಲಿ ಬೆಟ್ಟ ಗ್ರಾಮ ಪಂಚಾಯಿತಿಗೆ ಅಂತರಾ ಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಅಧ್ಯಯನ ತಂಡ ಭೇಟಿ ನೀಡಿ ಅಭಿವೃದ್ಧಿ ಕಾರ್ಯ ಗಳ ಬಗ್ಗೆ ಮಾಹಿತಿ ಪಡೆದರು.

ಅಂತರಾಷ್ಟ್ರೀಯ ಪ್ರಶಿಕ್ಷಣಾರ್ಥಿಗಳ ಗ್ರಾಮೀ ಣಾಭಿವೃದ್ಧಿ ಕಾರ್ಯಗಳ ಬಗ್ಗೆ ಅಧ್ಯ ಯನ ನಡೆಸಲು ಆಫ್ರಿಕಾ, ಶ್ರೀಲಂಕ, ನೈಜೇರಿಯ, ಕೀನ್ಯ, ಉಗಾಂಡ, ಇರಾಕ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಉಜ್ಜೆಕಿ ಸ್ತಾನ್ ಬೋಟ್ಸ್ವಾನ್, ಈಜಿಪ್ಟ್, ಮಾರಿಷಸ್, ಸೂಡಾನ್ ಕೋಂಗೋ ಅಲ್ಜೀರಿಯ, ತಜಕಿ ಸ್ತಾನ್, ನಮೀಬಿಯ ರಾಷ್ಟ್ರಗಳ 24 ಮಂದಿ ಹಿರಿಯ ಅಧಿಕಾರಿಗಳು ನ್ಯಾಷ ನಲ್ ಇನ್ಸ್ಟಿಟ್ಯೂಟ್ ಆಫ್ ರೂರಲ್ ಡೆವೆಲೆಪ್‍ಮೆಂಟ್ ಹೈದರಾಬಾದ್ ಪ್ರಾಯೋ ಜಿತ ಅಧ್ಯಯನ ತಂಡದ ಮೂಲಕ ಪಾಲಿಬೆಟ್ಟ ಆಗಮಿಸಿದರು. ಪಾಲಿಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಯನ ತಂಡವನ್ನ ಬರ ಮಾಡಿಕೊಂ ಡರು. ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ವೈಜ್ಞಾನಿಕ ತ್ಯಾಜ್ಯ ವಿಲೇ ವಾರಿ, ಶುಧ್ಧ ಕುಡಿಯುವ ನೀರಿನ ಘಟಕ, ಡಿಜಿಟಲ್ ಲೈಬ್ರರಿ, ಇ-ಆಡಳಿತ ಸೇರಿದಂತೆ ಪಂಚಾ ಯಿತಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದು ಕೊಂಡು ಗ್ರಾಮ ಪಂಚಾಯಿತಿ ಸಾಧ ನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅದ್ಯಯನ ತಂಡಕ್ಕೆ ಕರ್ನಾಟಕದ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೇಖಾ ಗಣಪತಿ, ಸದಸ್ಯರು ಗಳಾದ ಲಲಿತ, ಇಂದಿರಾ, ಸುಶೀಲ, ಬಾಬು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

Translate »