ವಿದ್ಯಾರ್ಥಿನಿ ನಾಪತ್ತೆ ಪ್ರಕರಣ; ಸಿದ್ದಾಪುರಕ್ಕೆ ಎಸ್ಪಿ ಸುಮನ್ ಭೇಟಿ
ಕೊಡಗು

ವಿದ್ಯಾರ್ಥಿನಿ ನಾಪತ್ತೆ ಪ್ರಕರಣ; ಸಿದ್ದಾಪುರಕ್ಕೆ ಎಸ್ಪಿ ಸುಮನ್ ಭೇಟಿ

February 12, 2019

ಸಿದ್ದಾಪುರ: ಕಳೆದ 10 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿರುವ ಶಾಲಾ ವಿದ್ಯಾರ್ಥಿನಿಯ ಪತ್ತೆಗಾಗಿ ಪೊಲೀಸ್ ತಂಡವನ್ನು ರಚಿಸ ಲಾಗಿದ್ದು, ಸಿದ್ದಾಪುರ ತೋಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಸುಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಟದ ಲೈನ್ ಮನೆಗಳಲ್ಲಿ ಪೊಲೀಸ್ ತಂಡ ಹಲವರನ್ನು ವಿಚಾರಣೆ ಮಾಡುತ್ತಿದ್ದು ತನಿಖೆ ಚುರುಕುಗೊಳಿಸಿದ್ದಾರೆ ಕಳೆದ ಎರಡು ದಿನಗಳ ಹಿಂದೆ ಕಣ್ಮರೆಯಾಗಿರುವ ಶಾಲಾ ವಿದ್ಯಾರ್ಥಿನಿಯ ಬ್ಯಾಗ್, ಶೂ ತೋಟದ ಕೆ ಬ್ಲಾಕ್‍ನಲ್ಲಿ ಪತ್ತೆಯಾಗಿದೆ.

ತೋಟದಲ್ಲಿ ಕಾಫಿ ಕೊಯ್ಲು ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಮರದ ಪೊದೆಯೊಂದರಲ್ಲಿ ಶಾಲಾ ಬ್ಯಾಗ್, ಶೂ ಗೋಚರಿಸಿದ್ದು ತಕ್ಷಣ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದುವರೆಗೂ ಯುವತಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗುತ್ತಿಲ್ಲ ಎಂಬುದು ಬಲ್ಲ ಮೂಲಗಳಿಂದ ಕೇಳಿ ಬರುತ್ತಿದೆ. ನೆಲ್ಯಹುದಿಕೇರಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ತೋಟದ ಮಾರ್ಗ ಮಧ್ಯೆ ಕಾಣಿಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಕಳೆದ 10 ದಿನಗಳಿಂದ ನಿಗೂಢವಾಗಿ ಕಾಣಿಯಾಗಿದ್ದು ನಾಪತ್ತೆಯಾಗಿದ್ದಾಳೆ.

Translate »