ಕೊಡಗು ಜಿಲ್ಲೆಯಲ್ಲಿ ಶೇ.74.08 ಮತದಾನ: ಮಡಿಕೇರಿ ವಿಧಾನಸಭಾ ಕ್ಷೇತ್ರ ಶೇ.76.12, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶೇ.72.03
ಕೊಡಗು

ಕೊಡಗು ಜಿಲ್ಲೆಯಲ್ಲಿ ಶೇ.74.08 ಮತದಾನ: ಮಡಿಕೇರಿ ವಿಧಾನಸಭಾ ಕ್ಷೇತ್ರ ಶೇ.76.12, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶೇ.72.03

April 19, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಲೋಕಸಭಾ ಚುನಾವಣೆಗೆ ಮತ ದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾ ಗಿದೆ. ಜಿಲ್ಲೆಯಲ್ಲಿ ಶೇ.74.08 ರಷ್ಟು ಮತ ದಾನವಾಗಿದ್ದು, ಕಳೆದ ಬಾರಿಗಿಂತ ಶೇ.7.55 ರಷ್ಟು ಮತದಾನ ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಕಳೆದ 2014 ಲೋಕ ಸಭಾ ಚುನಾವಣೆಯಲ್ಲಿ ಶೇ.66.53ರಷ್ಟು ಮತದಾನವಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಒಟ್ಟು 269 ಹಾಗೂ ವಿರಾಜಪೇಟೆಯಲ್ಲಿ 274 ಬೂತ್ ಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಯಿತಾದರೂ, ಕೆಲ ಮತಗಟ್ಟೆ ಯಲ್ಲಿ ಮತಯಂತ್ರಗಳು ಕೈಕೊಟ್ಟಿದ್ದರಿಂದ ಮತಯಂತ್ರವನ್ನು ಬದಲಿಸಿ ಮತದಾನಕ್ಕೆ ಅವಕಾಶ ನೀಡಲಾಯಿತು. ಕೊಡಗು ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಬುಧವಾರ ಸಂಜೆ ಮತ್ತು ರಾತ್ರಿ ಸುರಿದ ಮಳೆಯಿಂದಾಗಿ ಮತಗಟ್ಟೆ ಗಳಿಗೆ ತೆರಳುವ ಚುನಾವಣಾ ಸಿಬ್ಬಂದಿ ಗಳಿಗೆ, ವ್ಯವಸ್ಥೆಯನ್ನು ಗಮನಿಸಬೇಕಾದ ಸೆಕ್ಟರ್ ಅಧಿಕಾರಿಗಳಿಗೆ ಒಂದಷ್ಟು ಅಡ ಚಣೆ ಉಂಟಾಯಿತು. ಮತ್ತೆ ಕೆಲವೆಡೆ ಮತ ದಾರರು ಬೇಸತ್ತು ಮತಗಟ್ಟೆಯಿಂದ ಹಿಂದಿ ರುಗಿದ ಘಟನೆಯೂ ನಡೆದಿದೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೇ.46ರಷ್ಟು ಮತ ದಾನವಾದರೆ, ಸಂಜೆ 5 ಗಂಟೆಯ ವೇಳೆ ಯಲ್ಲಿ ಶೇಕಡ 69ರಷ್ಟು ಮತದಾನವಾಗಿತ್ತು.

ಮಡಿಕೇರಿ ತಾಲೂಕಿನ 2ನೇ ಮೊಣ್ಣಂ ಗೇರಿಯಲ್ಲಿ ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭ ಹಾದಿಯಲ್ಲಿ ಹರಿಯುತ್ತಿದ್ದ ನೀರಿ ನಿಂದಾಗಿ ವಾಹನ ತೆರಳುವುದು ದುಸ್ತರ ವಾಗಿ ಸೆಕ್ಟರ್ ಅಧಿಕಾರಿಗಳು ಸಂಕಷ್ಟವನ್ನು ಎದುರಿಸುವಂತಾಯಿತು. ಮಡಿಕೇರಿ ತಾಲೂ ಕಿನ ಕುಗ್ರಾಮಗಳಲ್ಲಿ ಒಂದಾದ ಕಡಮಕಲ್ಲುವಿ ನಲ್ಲಿ ಅಂದಾಜು 200 ಮತಗಳಿಗೆ ಒಂದು ಮತಗಟ್ಟೆಯನ್ನು ತೆರೆಯಲಾಗಿದ್ದು, ಅಲ್ಲಿ ಮೊಬೈಲ್ ಸಂಪರ್ಕ ದೊರಕುವುದು ಕ್ಲಿಷ್ಟಕರ. ಈ ಮತಗಟ್ಟೆಗೆ ದೂರ ದೂರದ ಪ್ರದೇಶ ಗಳಿಂದ ಮತದಾರರು ಬರಬೇಕಾಗಿರುವುದ ರಿಂದ, ಗುರು ವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ 9 ಮತಗಳಷ್ಟೇ ಚಲಾವಣೆ ಯಾಗಿತ್ತು. ಇನ್ನುಳಿದಂತೆ ಗ್ರಾಮೀಣ ಭಾಗ ಗಳಲ್ಲಿ ಬೆಳಗ್ಗಿನಿಂದಲೆ ಗ್ರಾಮೀಣರು ಸರ ದಿಯ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೋಮ ವಾರಪೇಟೆ ತಾಲೂಕಿನ ಕುಂಬೂರು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭ ಮಾತ ನಾಡಿದ ಅವರು, ಬಿಜಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು 60 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಾಂತೆ ಯಂಡ ವೀಣಾಅಚ್ಚಯ್ಯ ಅವರು ತಮ್ಮ ಪುತ್ರ ವಿಕಾಸ್ ಅಚ್ಚಯ್ಯ ಅವರೊಂದಿಗೆ ಮಡಿಕೇರಿ ನಗರಸಭಾ ವ್ಯಾಪ್ತಿಯ ಎವಿ ಶಾಲೆ ಮತಗಟ್ಟೆಯಲ್ಲಿ ಮತಚಲಾಯಿ ಸಿದರು. ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ.ಜೀವಿಜಯ ಸೋಮ ವಾರಪೇಟೆ ತಾಲೂಕಿನ ಬಿಳಿಗೇರಿ ಸರ ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರು.

Translate »