ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರ

April 19, 2019

ಮೈಸೂರು: ಲೋಕ ಸಮರದ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಇದೀಗ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ.

ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದು ಮೇ 23ರಂದು ಬಹಿ ರಂಗಗೊಳ್ಳಲಿದೆ. ಇಂದು ರಾತ್ರಿ ವೇಳೆಗೆ ಮತಗಳಿರುವ ಸೀಲ್ ಮಾಡಿದ ಇವಿಎಂಗಳನ್ನು ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ತಂದು ಪರಿಶೀಲಿಸಿದ ನಂತರ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇರಿಸಿ ದಿನದ 24 ಗಂಟೆಯೂ ಮೂರು ಸುತ್ತಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ ಸಿ.ಹೆಚ್.ವಿಜಯ ಶಂಕರ್, ಬಿಎಸ್‍ಪಿಯ ಡಾ. ಬಿ.ಚಂದ್ರ, ಇಎನ್‍ಸಿಪಿಯ ಅಯೂಬ್ ಖಾನ್, ಯುಪಿಪಿಯ ವಿ.ಆಶಾರಾಣಿ, ಕೆಪಿಪಿಯ ಪಿ.ಕೆ.ಬಿದ್ದಪ್ಪ, ಎಸ್‍ಯುಸಿಇಯ ಪಿ.ಎಸ್.ಸಂಧ್ಯಾ, ಪಕ್ಷೇತರ ರಾದ ಎಂ.ಆನಂದಕುಮಾರ್, ಎನ್.ಕೆ.ಕಾವೇರಿಯಮ್ಮ, ಎನ್.ನಾಗೇಶ, ಬಿ.ಡಿ.ನಿಂಗಪ್ಪ, ಜಿ.ಎಂ.ಮಹದೇವ, ಆರ್. ಮಹೇಶ, ರವಿ, ರಾಜು, ಜಿ.ಲೋಕೇಶ ಕುಮಾರ್, ಎ.ಲಿಂಗ ರಾಜು, ವೆಂಕಟೇಶ, ಡಿ.ನಾಯಕ್, ಶ್ರೀನಿವಾಸಯ್ಯ, ಎಂ.ಜೆ. ಸುರೇಶಗೌಡ, ಎಸ್.ಆಲಿಶಾನ ಹಾಗೂ ಕೆ.ಎಸ್.ಸೋಮ ಸುಂದರ್ ಅವರು ಇದೀಗ ಮೇ 23ನ್ನು ಎದುರು ನೋಡು ತ್ತಿದ್ದಾರೆ. ಮತದಾನ ಮುಗಿಯುತ್ತಿದ್ದಂತೆಯೇ ಮತಬೇಟೆ ಯಿಂದ ನಿರಾಳವಾಗಿರುವ ಅಭ್ಯರ್ಥಿಗಳೀಗ ವಿಶ್ರಾಂತಿಯತ್ತ ಚಿತ್ತ ಹರಿಸಿದ್ದು, ಅವರ ಅದೃಷ್ಟ ಮತಪೆಟ್ಟಿಗೆಯಲ್ಲಿ ರುವುದರಿಂದ ಜನರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.

Translate »