ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ
ಮಂಡ್ಯ

ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ

April 19, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತಾದರೂ ಎರಡು ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮ ದಲ್ಲಿ ಸುಮಲತಾ ಅಂಬರೀಶ್ ಮತದಾನ ಮಾಡಿ ತೆರಳುತ್ತಿ ದ್ದಂತೆಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯವರು ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಬೆಂಬ ಲಿಗರು ಜಯಕಾರ ಕೂಗಿದಾಗ ನಿಖಿಲ್ ತಮ್ಮ ಕಾರಿನಿಂದ ಬೆಂಬಲಿಗರತ್ತ ಕೈಬೀಸುತ್ತಾ ಮುನ್ನಡೆದರು. ಈ ವೇಳೆ ನಿಖಿಲ್ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುಮಲತಾ ಬೆಂಬಲಿಗರು, ಅಂಬ ರೀಶ್ ಮತ್ತು ಸುಮಲತಾ ಪರ ಘೋಷಣೆ ಕೂಗಿದಾಗ ಪರಸ್ಪರ ಮಾತಿನ ಚಕಮಕಿ, ನೂಕಾಟ-ತಳ್ಳಾಟ ಉಂಟಾಗಿ ಅದು ಮಾರಾಮಾರಿಗೆ ತಿರುಗಿತು. ಉಭಯ ಬಣಗಳ ಕೆಲವರ ಶರ್ಟ್‍ಗಳು ಹರಿದವು. ಈ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್, ತಾನು ರೋಡ್ ಶೋ ನಡೆಸಿಲ್ಲ. ತಾನು ಗ್ರಾಮಕ್ಕೆ ತೆರಳಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರಿಂದ ಅದು ರೋಡ್ ಶೋನಂತೆ ಭಾಸವಾಗಿದೆ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಮಳವಳ್ಳಿ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಸವನ ಪುರ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಮತಗಟ್ಟೆ ಯಲ್ಲೇ ಸುಮಲತಾ ಅಂಬರೀಶ್ ಅವರ ಏಜೆಂಟ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಬಸವನಪುರ ಗ್ರಾಮದ ಬೂತ್ ಸಂಖ್ಯೆ 107ರಲ್ಲಿ ಜೆಡಿಎಸ್ ಕಾರ್ಯಕರ್ತರು ವಯಸ್ಸಾದ ವರನ್ನು ಕರೆತಂದು ಅವರ ಮತವನ್ನು ತಾವೇ ಚಲಾಯಿಸುತ್ತಿ ದ್ದಾರೆ ಎಂದು ಸುಮಲತಾ ಅವರ ಮತಗಟ್ಟೆ ಏಜೆಂಟ್ ಚನ್ನಬಸವಣ್ಣ ಅವರು ಆಕ್ಷೇಪ ವ್ಯಕ್ತಪಡಿಸಿದಾಗ, ಜೆಡಿಎಸ್ ಕಾರ್ಯಕರ್ತರು ಅವರ ಮೇಲೆ ಮತಗಟ್ಟೆಯೊಳಗೇ ಹಲ್ಲೆ ನಡೆಸಿದ್ದಾರೆ. ಈ ವೇಳೆ ಭದ್ರತೆಗೆ ಕೇವಲ ಓರ್ವ ಪೇದೆಯನ್ನು ಮಾತ್ರ ನಿಯೋ ಜಿಸಿದ್ದರಿಂದ ಪರಿಸ್ಥಿತಿ ತಹಬದಿಗೆ ತರಲು ಸಾಧ್ಯವಾಗದೇ ಪೊಲೀಸ್ ಪೇದೆ ಕೈಚೆಲ್ಲುವಂತಾಯಿತು ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತರ ಹಲ್ಲೆಯಿಂದ ಗಾಯಗೊಂಡಿರುವ ಸುಮಲತಾ ಏಜೆಂಟ್ ಚನ್ನಬಸವಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Translate »