Tag: Sumalatha Ambareesh

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರ ಗೆಲ್ಲುತ್ತಿತ್ತು
ಮೈಸೂರು

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರ ಗೆಲ್ಲುತ್ತಿತ್ತು

June 7, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿ ಕೊಳ್ಳದೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿತ್ತು ಎಂದು ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಹೀನಾಯ ಸೋಲು ಕಂಡಿದ್ದು, ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವಾಗಲೇ ಸುಮಲತಾ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಏಕಾಂಗಿ ಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಆದರೆ, ಮೈತ್ರಿಯಿಂದಾಗಿ ಕೇವಲ…

ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ
ಮಂಡ್ಯ

ಜೆಡಿಎಸ್-ಸುಮಲತಾ ಬೆಂಬಲಿಗರ ಮಾರಾಮಾರಿ

April 19, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತಾದರೂ ಎರಡು ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಓರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ. ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮ ದಲ್ಲಿ ಸುಮಲತಾ ಅಂಬರೀಶ್ ಮತದಾನ ಮಾಡಿ ತೆರಳುತ್ತಿ ದ್ದಂತೆಯೇ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಯವರು ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅವರ ಬೆಂಬ ಲಿಗರು ಜಯಕಾರ ಕೂಗಿದಾಗ ನಿಖಿಲ್ ತಮ್ಮ ಕಾರಿನಿಂದ ಬೆಂಬಲಿಗರತ್ತ…

ಮಂಡ್ಯದಲ್ಲಿ ಮಾತಿನ ಸಮರ: ಸುಮಲತಾ ಗೆಲ್ಲಲು ಕುತಂತ್ರ ರೂಪಿಸಿದ್ದಾರೆ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಮಾತಿನ ಸಮರ: ಸುಮಲತಾ ಗೆಲ್ಲಲು ಕುತಂತ್ರ ರೂಪಿಸಿದ್ದಾರೆ

April 12, 2019

ಮಂಡ್ಯ: ಮತದಾನಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸುಮಲತಾ ಅವರೇ ಪ್ರಚಾರ ಸಭೆಯಲ್ಲಿ ಕಲ್ಲೆಸೆದುಕೊಂಡು, ತಲೆಗೆ ಪೆಟ್ಟು ಮಾಡಿಕೊಂಡು ನಾಟಕ ಮಾಡಲು ಯೋಜನೆ ರೂಪಿಸಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿ ರೀತಿ ತಾವು ಯಾವುದೇ ಕುತಂತ್ರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಇಂದು ಮದ್ದೂರು ಬಳಿಯ ಗೆಜ್ಜಲಗೆರೆ ಬಳಿ ರೋಡ್ ಶೋ ವೇಳೆ ಮಾತನಾಡಿದ ಅವರು, ಚುನಾವಣೆ ಗೆಲ್ಲಲು ಸುಮಲತಾ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್ ವಿರುದ್ಧ…

ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ: ಸುಮಲತಾ ಅಂಬರೀಶ್
ಮಂಡ್ಯ, ಮೈಸೂರು

ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ: ಸುಮಲತಾ ಅಂಬರೀಶ್

April 12, 2019

ಮಂಡ್ಯ: ರೈತರ ಆತ್ಮಹತ್ಯೆ ತಡೆಯುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ ಏಕೆ? 50 ವರ್ಷಗಳಿಂದ ಅಧಿಕಾರದಲ್ಲಿರುವ ನಿಮಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಸಾಂತ್ವನ ಹೇಳಿದರೆ ನಿಮ್ಮ ಜವಾಬ್ದಾರಿ ಮುಗಿಯಿತೆ? ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಖಾರವಾಗಿ ಪ್ರಶ್ನಿಸಿದ್ದಾರೆ. ಇಂದು ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರೆ…

ಸುಮಲತಾ ನಾಮಪತ್ರ ಸಲ್ಲಿಕೆ
ಮೈಸೂರು

ಸುಮಲತಾ ನಾಮಪತ್ರ ಸಲ್ಲಿಕೆ

March 21, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿ ಸಿದ ಸುಮಲತಾ ಅಂಬರೀಷ್ ಅವರು, ಕಾಂಗ್ರೆಸ್, ರೈತ ಸಂಘದ ಕಾರ್ಯಕರ್ತರು, ಅಂಬರೀಷ್ ಅಭಿಮಾನಿ ಗಳಲ್ಲದೆ ಎಲ್ಲಾ ಸಮಾಜದ ಜನಸಾಗರದ ನಡುವೆ ಬೃಹತ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ಇಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ, ಬೆಳಿಗ್ಗೆ 11.20ರಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು….

ಮೊಮ್ಮಗನ ಹಾದಿ ಸುಗಮಕ್ಕೆ ಮೈಸೂರಲ್ಲಿ ಕಾಂಗ್ರೆಸ್‍ನಿಂದ ಸುಮಲತಾ ಕಣಕ್ಕಿಳಿಸಲು ದೇವೇಗೌಡರ ಮಾಸ್ಟರ್ ಪ್ಲಾನ್
ಮೈಸೂರು

ಮೊಮ್ಮಗನ ಹಾದಿ ಸುಗಮಕ್ಕೆ ಮೈಸೂರಲ್ಲಿ ಕಾಂಗ್ರೆಸ್‍ನಿಂದ ಸುಮಲತಾ ಕಣಕ್ಕಿಳಿಸಲು ದೇವೇಗೌಡರ ಮಾಸ್ಟರ್ ಪ್ಲಾನ್

March 15, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಗೆಲುವನ್ನು ಖಚಿತಪಡಿಸಿಕೊಳ್ಳುವ ತಂತ್ರವಾಗಿ ಸುಮಲತಾ ಅಂಬರೀಷ್ ಅವರನ್ನು ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ರಾಜಕೀಯ ದಾಳ ಉರುಳಿಸಿದ್ದಾರೆ. ಇದೇ ಕಾರಣಕ್ಕೆ ಮೈಸೂರು ಕ್ಷೇತ್ರವನ್ನು ಕೊನೆಗಳಿಗೆಯಲ್ಲಿ ಬಿಟ್ಟುಕೊಟ್ಟು, ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್‍ಮೇಟ್ ನೀಡಿದ್ದಾರೆ. ಗೌಡರ ಸಲಹೆ ಮೇರೆಗೆ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಲತಾ…

ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ
ಮಂಡ್ಯ

ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ

March 14, 2019

ಸಿಎಂಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್? ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯ: ದೋಸ್ತಿ ನಾಯಕರ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ಕೂಡ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಅಖಾಡಕ್ಕೆ ದುಮುಕಿದ್ದು ಪ್ರಚಾರ ನಡೆಸಿದರು. ಇವತ್ತು ಅಮ್ಮ- ಮಗನ ಜುಗಲ್ ಬಂದಿ ಜೋರಾಗಿತ್ತು. ಮಳವಳ್ಳಿ ತಾಲೂಕಿನ ಹಲಗೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಟೌನ್ ಸೇರಿ ದಂತೆ…

ಮಾ.18ಕ್ಕೆ ನನ್ನ ನಿರ್ಧಾರ
ಮೈಸೂರು

ಮಾ.18ಕ್ಕೆ ನನ್ನ ನಿರ್ಧಾರ

March 12, 2019

ಮಂಡ್ಯ: ರಾಜಕೀಯದಲ್ಲಿ ಕೊನೆ ಗಳಿಗೆವರೆಗೂ ಏನು ಬೇಕಾದರೂ ಆಗಬಹುದು. ನನ್ನ ನಿರ್ಧಾರ ಏನು ಎನ್ನುವುದನ್ನು ಮಾರ್ಚ್ 18 ರಂದು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು. ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈಗಾಗಲೇ ಊಹಾಪೋಹಗಳು ಬರುತ್ತಿವೆ. ಅವುಗಳನ್ನೆಲ್ಲಾ ನಂಬಬೇಡಿ. ಇವತ್ತು ಸಹ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ನಾನು ಹೋದ ಕಡೆಯಲ್ಲೆಲ್ಲ ಅಭಿಮಾನಿ ಗಳು ಸೇರಿದಂತೆ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಯಲ್ಲಿ…

ಗಂಡ ಸತ್ತ ತಿಂಗಳಲ್ಲೇ ಎಲೆಕ್ಷನ್‍ಗೆ ಬರುವ ಅಗತ್ಯವಿತ್ತಾ…!
ಮಂಡ್ಯ, ಮೈಸೂರು

ಗಂಡ ಸತ್ತ ತಿಂಗಳಲ್ಲೇ ಎಲೆಕ್ಷನ್‍ಗೆ ಬರುವ ಅಗತ್ಯವಿತ್ತಾ…!

March 9, 2019

ಮಂಡ್ಯ: ಕೆಲ ತಿಂಗಳ ಹಿಂದೆ ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಅವರು ಆಂಧ್ರದವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪೀಠಿಕೆ ಹಾಕಿದ್ದರು. ಈಗ ಅಂಬರೀಷ್ ಶಾಸಕರು ಹಾಗೂ ಸಚಿವರಾಗಿದ್ದಾಗ ಅವರ ಮನೆಗೆ ಹೋದವರಿಗೆ ಸುಮಲತಾ ಒಂದು ಗ್ಲಾಸ್ ನೀರು ಕೊಟ್ಟಿದ್ದಾರಾ? ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ ಬೆನ್ನಲ್ಲೇ `ಗಂಡ ಸತ್ತ ಒಂದು ತಿಂಗಳು, ಎರಡು ತಿಂಗಳಲ್ಲೇ ಚಾಲೆಂಜ್ ಮಾಡಿಕೊಂಡು ಎಲೆಕ್ಷನ್‍ಗೆ ಬರುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡುವ…

`ತಾಯಿಗೆ ನೋವಾಗುವ ಮಾತು ಬೇಡ’
ಮೈಸೂರು

`ತಾಯಿಗೆ ನೋವಾಗುವ ಮಾತು ಬೇಡ’

March 9, 2019

ಮೈಸೂರು: ಇಂದು ಮಹಿಳಾ ದಿನ. ವಿಶ್ವದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ತಾಯಿಗೆ ನೋವಾಗುವಂತಹ ಮಾತುಗಳ ಯಾರೂ ಆಡಬಾರದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗಳು ನಡೆಯುತ್ತಿದ್ದು, ಅದನ್ನು ತಡೆಯಲು ಆಗುವುದಿಲ್ಲ. ಆದರೆ ಯಾರಿಗೂ ನೋವಾಗು ವಂತಹ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತು ಗಳನ್ನು ಆಡಬಾರದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು. ಮಹಿಳಾ ದಿನವಾದ ಶುಕ್ರವಾರ ಮೈಸೂ ರಿಗೆ ಭೇಟಿ ನೀಡಿ,…

1 2
Translate »