`ತಾಯಿಗೆ ನೋವಾಗುವ ಮಾತು ಬೇಡ’
ಮೈಸೂರು

`ತಾಯಿಗೆ ನೋವಾಗುವ ಮಾತು ಬೇಡ’

March 9, 2019

ಮೈಸೂರು: ಇಂದು ಮಹಿಳಾ ದಿನ. ವಿಶ್ವದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ತಾಯಿಗೆ ನೋವಾಗುವಂತಹ ಮಾತುಗಳ ಯಾರೂ ಆಡಬಾರದು. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗಳು ನಡೆಯುತ್ತಿದ್ದು, ಅದನ್ನು ತಡೆಯಲು ಆಗುವುದಿಲ್ಲ. ಆದರೆ ಯಾರಿಗೂ ನೋವಾಗು ವಂತಹ ಮಾತುಗಳು ಬೇಡ. ಯಾರ ಬಗ್ಗೆಯೂ ಅವಮಾನಕರವಾದ ಮಾತು ಗಳನ್ನು ಆಡಬಾರದು. ಯಾವುದೇ ಕಾರಣಕ್ಕೂ ಅಭಿಮಾನಿಗಳು ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು.

ಮಹಿಳಾ ದಿನವಾದ ಶುಕ್ರವಾರ ಮೈಸೂ ರಿಗೆ ಭೇಟಿ ನೀಡಿ, ಚಾಮುಂಡಿಬೆಟ್ಟದಲ್ಲಿ ಚಾಮುಂಡಿ ತಾಯಿ, ಮೈಸೂರಿನ ಅರ ಮನೆ ಕೋಟೆ ಆಂಜನೇಯಸ್ವಾಮಿ, ಗಣ ಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಗಳೊಂದಿಗೆ ಮಾತನಾಡಿದರು.

ಅವರಿಗೂ ಒಬ್ಬ ತಾಯಿ ಇದ್ದಾರೆ. ಅವರಿಗೆ ನೋವಾಗುತ್ತದೆ. ಅವರ ಜಾಗ ದಲ್ಲಿ ನನ್ನ ಮಗನನ್ನಿಟ್ಟು ನೋಡುತ್ತೇನೆ. ನನ್ನ ಮಗನಿಗೆ ಬೈದರೆ ನನಗೆ ಎಷ್ಟು ನೋವಾಗುತ್ತದೆಯೋ ಅಷ್ಟೇ ನೋವು ಆ ತಾಯಿಗೂ ಆಗುತ್ತದೆ ಎಂದು ಸುಮ ಲತಾ ಅವರು ಪರೋಕ್ಷವಾಗಿ ನಿಖಿಲ್ ತಾಯಿ ಅನಿತಾ ಕುಮಾರಸ್ವಾಮಿ ಪರ ಮಾತ ನಾಡಿದರು. ಮಂಡ್ಯದ ಜನತೆ ನನ್ನನ್ನು ಮಂಡ್ಯದ ಸೊಸೆಯಾಗಿ ಕಾಣುತ್ತಿದ್ದಾರೆ. ಇದುವರೆಗೂ ನಾನು ಚುನಾವಣೆ ದೃಷ್ಟಿ ಯಿಂದ ಜನರನ್ನು ಭೇಟಿ ಮಾಡಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇದು ನನಗೆ ಖುಷಿ ತಂದಿದೆ ಎಂದರು.

Translate »