`ಮಹಿಳಾ ಕಹಳೆ ದಿಟ್ಟ ಮಹಿಳೆ’ ಪ್ರಶಸ್ತಿ ಪ್ರದಾನ
ಮೈಸೂರು

`ಮಹಿಳಾ ಕಹಳೆ ದಿಟ್ಟ ಮಹಿಳೆ’ ಪ್ರಶಸ್ತಿ ಪ್ರದಾನ

March 9, 2019

ಮೈಸೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದಿ.ಕೆ.ಕಮಲಮ್ಮನವರ 9ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ಶುಕ್ರ ವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ `ಮಹಿಳಾ ಕಹಳೆ ದಿಟ್ಟ ಮಹಿಳೆಯರು’ ಪ್ರಶಸ್ತಿ ನೀಡಿ ಗೌರವಿಸಿತು.

ಮ.ನ.ಲತಾ ಮೋಹನ್ (ಸಾಹಿತ್ಯ), ಪಿ.ಯು. ಮಂಜುಳಾ (ಹಿರಿಯ ಶುಶ್ರೂ ಷಕಿ), ಎಂ.ಕವಿತಾ (ಅಂಚೆ ಮಹಿಳೆ), ಎಂ.ನಿರ್ಮಲಾ (ಮುಖ್ಯ ಪೇದೆ), ಕೆ.ಎಂ.ರೇಖಾ ಪ್ರಕಾಶ್ (ಪತ್ರಕರ್ತೆ), ಯಶೋಧ (ಬಿಸಿಯೂಟ ಕಾರ್ಯ ಕರ್ತೆ), ಪಾಪಮ್ಮ (ಪೌರ ಕಾರ್ಮಿಕ ಮಹಿಳೆ), ನಿಂಗಮ್ಮ (ಶವಗುಂಡಿ ತೋಡು ವವರು), ಗಂಗಮ್ಮ (ಬಸ್ ಕಂಡಕ್ಟರ್), ವೀಣಾ (ಆಟೋ ಚಾಲಕಿ) ಅವರನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಆತ್ಮೀಯ ವಾಗಿ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆ ಕಾಯಿಯಂತೆ ಶ್ರಮಿಸುತ್ತಿರುವ ಶ್ರಮಿಕ ಅಸಂಘಟಿತ ಮಹಿಳೆಯರನ್ನು ಗುರ್ತಿಸಿ, ಅಂಥವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿ ಸಮಾನಳಾಗಿ ಸ್ಪರ್ಧಿಸುತ್ತಿರುವ ಮಹಿಳೆಗೆ ಅಗತ್ಯ ವಿದ್ಯಾಭ್ಯಾಸ ಹಾಗೂ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಅವರು ತಿಳಿಸಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿದ್ದ ಮಹಿಳೆಯರು, ಇಂದು ಸ್ವ ಸಾಮಥ್ರ್ಯದಿಂದ ದೇಶದ ರಕ್ಷಣಾ ಕ್ಷೇತ್ರದಲ್ಲಿಯೂ ಹಲವು ಗುರುತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ, ಸೂಕ್ತ ಅವಕಾಶ, ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಎಂಎ ಉಪಾಧ್ಯಕ್ಷೆ ಡಾ.ಸುಜಾತಾ ಎಸ್.ರಾವ್, ದಿ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶÀಕಿ ಡಾ.ಎಸ್. ನಾಗರತ್ನ, ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ. ಅಶೋಕ್ ಇನ್ನಿತರರು ಉಪಸ್ಥಿತರಿದ್ದರು.

Translate »