ಮಹಿಳೆಯರು ತಾವೂ ಅಭಿವೃದ್ಧಿ  ಸಾಧಿಸಿ, ದೇಶದ ಸಂಸ್ಕೃತಿ ರಕ್ಷಿಸಬೇಕಿದೆ
ಮೈಸೂರು

ಮಹಿಳೆಯರು ತಾವೂ ಅಭಿವೃದ್ಧಿ ಸಾಧಿಸಿ, ದೇಶದ ಸಂಸ್ಕೃತಿ ರಕ್ಷಿಸಬೇಕಿದೆ

March 9, 2019

ಮೈಸೂರು: ತಮಗೆ ಸಿಕ್ಕಿರುವ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಳ್ಳದೇ, ಸಾಂಸ್ಕೃತಿಕ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿದಾಗ ಮಾತ್ರ ಬೇರ್ಯಾರು ಬೆರಳು ತೋರಿಸಿ ಮಾತ ನಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮಹಿಳೆಯರ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಹಿಳಾ ಉದ್ಯೋಗಿಗಳ ಸಮುದಾಯ ಹಾಗೂ ಮೈತ್ರಿ ಮಹಿಳಾ ಅಧ್ಯಾಪಕರ ಬಳಗದ ವತಿ ಯಿಂದ ಮಾನಸಗಂಗೋತ್ರಿ ರಾಣಿಬಹ ದ್ದೂರ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ‘ಜಾಗತಿಕ ಸಂದರ್ಭದಲ್ಲಿ ಮಹಿಳೆ’ ವಿಚಾರ ಸಂಕಿ ರಣ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಅಭಿವೃದ್ಧಿಯತ್ತ ಹೆಜ್ಜೆ ಹಾಕುವುದರೊಂದಿಗೆ ದೇಶದ ಸಂಸ್ಕೃತಿ ಉಳಿಸಿ, ಬೆಳೆಸುವತ್ತ ಗಮನ ಹರಿಸಬೇಕು. ನಾವು ಘನತೆ, ಗೌರವವನ್ನು ಎತ್ತಿಹಿಡಿಯ ಬೇಕು. ಜಾಗತಿಕ ಮಟ್ಟದಲ್ಲಿ ಮಹಿಳೆಗೆ ಎಲ್ಲಾ ರಂಗಗಳಲ್ಲೂ ಗುರುತಿಸಿಕೊಳ್ಳಲು ಸ್ವಾತಂತ್ರ್ಯ, ಸಮಾನತೆ ದೊರೆತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳ ಬೇಕು. ದೇಶದ ಸಂಸ್ಕೃತಿಯಲ್ಲಿ ಪುರುಷರು ಸಂಪಾದನೆ ಮಾಡಿದರೆ, ಅದನ್ನು ಖರ್ಚು ಮಾಡುವ ಹಕ್ಕು ಮಹಿಳೆಗಿದೆ. ಮಹಿಳೆಯನ್ನು ಪೂಜ್ಯ ಮನೋಭಾವ ದಿಂದ ನೋಡಲಾಗುತ್ತದೆ. ಈ ವಿಚಾರ ವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮಹಿಳೆ ತಾನು ಅಬಲೆ ಎಂಬ ಮನೋಭಾವ ಬಿಡಬೇಕು. ಅದು ನಮ್ಮ ಮನೋ ದೌರ್ಬ ಲ್ಯದ ಸಂಕೇತ. ಮೇಲೂ, ಕೀಳೆಂಬ ಮನೋ ಭಾವವನ್ನು ದೂರ ಮಾಡಬೇಕು. ಸಮಾಜ ದಲ್ಲಿ ಯಾರೂ ಮೇಲಲ್ಲ, ಯೂರೂ ಕೀಳಲ್ಲ. ಅವರವರಿಗೆ ತಮ್ಮದೇ ಆದ ಗೌರವವಿದೆ. ಈ ಹಿನ್ನೆಲೆಯಲ್ಲಿ ಅಂಜಿಕೆ ಬಿಟ್ಟು, ಆತ್ಮ ವಿಶ್ವಾಸ ಕಳೆದುಕೊಳ್ಳದೆ ಏಳ್ಗೆ ಸಾಧಿಸುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದರು.

108ನೇ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಅದಕ್ಕಿಂತಲೂ ಹಿಂದಿನಿಂದಲೇ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿತ್ತು. ಮಹಿಳೆ ಯರು ಒಗ್ಗಟ್ಟಾದರೆ ಎಲ್ಲವನ್ನೂ ಸಾಧಿಸ ಬಹುದು. ಹಲವು ಸಂದರ್ಭಗಳಲ್ಲಿ ಮಹಿಳೆ ಯರನ್ನೇ ಮಹಿಳೆಯರು ವಿರೋಧಿಸುವು ದನ್ನು ಕಾಣುತ್ತೇವೆ. ಮೊದಲು ಮಹಿಳೆ ಯರನ್ನು ಇತರೆ ಮಹಿಳೆಯರು ಗೌರವಿ ಸುವ ಸಂಪ್ರದಾಯ ರೂಢಿಸಿಕೊಳ್ಳಬೇಕು. ನಾನು ಇಂದು ನಿಮ್ಮ ಮುಂದೆ ನಿಂತು ಮಾತನಾಡುವಷ್ಟು ಬೆಳೆಯುವುದಕ್ಕೆ ನನಗೆ ನಮ್ಮ ಮನೆಯಲ್ಲಿ ನೀಡಿದ ಪ್ರೋತ್ಸಾಹವೇ ಕಾರಣವಾಗಿದೆ. ಅದೇ ರೀತಿ ಮಹಿಳೆ ಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿ ಕೊಂಡು ಏಳಿಗೆ ಸಾಧಿಸುತ್ತಿದ್ದಾಗ, ಅವರ ಪೋಷಕರು, ಸ್ನೇಹಿತರು, ಸಮಾಜ ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಕೆಲವು ಆಚರಣೆಗಳು ನಾಡು, ದೇಶಕ್ಕೆ ಸೀಮಿತವಾದರೆ, ಮಹಿಳಾ ದಿನಾಚರಣೆ ಜಾಗತಿಕವಾದದ್ದು. ಮಹಿಳೆಯರು ಸಮಾನತೆ ಸಾಧಿಸುವುದಕ್ಕೆ ಸಂವಿಧಾನದ ಕೊಡುಗೆ ಅಪಾರ. ಅಂತೆಯೇ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳಾ ಕೊಡುಗೆ ದೊಡ್ಡದು ಎಂದು ಸ್ಮರಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್ ಮಾತನಾಡಿ, ಪದಕೋಶ ದಿಂದ ‘ಹೆಣ್ಣು’ ಅನ್ನುವ ಪದ ತೆಗೆದು `ತಾಯಿ’ ಎಂದು ನಮೂದಿಸುವುದು ಸೂಕ್ತ. ಅಮ್ಮ, ಸೋದರಿ, ಹೆಂಡತಿ, ಮಗಳು ಎಲ್ಲರೂ ತಾಯಿಯಂತೆ. ಹೆಣ್ಣಿನ ಶೋಷಣೆ ಎನ್ನುವುದಕ್ಕಿಂತ ತಾಯಿ ಶೋಷಣೆ ಎಂದರೆ ಈಗಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಬಹುದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಕೀಲು ಮತ್ತು ಮೂಳೆ ರೋಗ ತಜ್ಞೆ ಡಾ.ಶೋಭಾ, ಗುಪ್ತಚರ ಇಲಾಖೆ ಎಸ್‍ಪಿ ಕವಿತಾ ಪಾಲ್ಗೊಂಡಿದ್ದರು.

Translate »