ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರೂ ಅಪರಾಧಿಗಳಾಗುತ್ತಿದ್ದಾರೆ
ಮೈಸೂರು

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರೂ ಅಪರಾಧಿಗಳಾಗುತ್ತಿದ್ದಾರೆ

April 1, 2019

ಮೈಸೂರು: ಕೌಟುಂಬಿಕ ದೌರ್ಜನ್ಯದ ಹಲವು ಅಪ ರಾಧ ಪ್ರಕರಣಗಳಲ್ಲಿ ಪುರುಷರೊಂದಿಗೆ ಮಹಿಳೆಯರೂ ಅಪರಾಧಿಗಳಾಗಿ ನಿಲ್ಲುತ್ತಿ ರುವುದು ವಿಷಾದಕರ ಸಂಗತಿ. ಮಹಿಳೆಯರಿಗೆ ಮಹಿಳೆಯರೇ ಗೌರವ ನೀಡದಿ ದ್ದರೆ ವಿಶ್ವ ಮಹಿಳಾ ದಿನದ ಆಚರಣೆಗೆ ಅರ್ಥ ಬರುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕೆ.ವಂಟಿಗೋಡಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ನ್ಯಾಯಾಲಯದ ಆವ ರಣದಲ್ಲಿರುವ ವಕೀಲರ ಸಂಘದ ಸಭಾಂ ಗಣದಲ್ಲಿ ಮಹಿಳಾ ವಕೀಲರದ ಸಂಘ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತ ನಾಡಿದ ಅವರು, 1909ರಿಂದ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುವುದರೊಂದಿಗೆ ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ಮಹಿಳಾ ದಿನದ ಕಾರ್ಯಕ್ರಮ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಇತರೆ ಮಹಿಳೆಯ ರಿಗೂ ಸಾಧನೆ ಮಾಡುವಂತೆ ಪ್ರೇರೇಪಿಸು ತ್ತಿರುವುದು ಶ್ಲಾಘನೀಯ. ಆದರೆ ಕೌಟುಂ ಬಿಕ ದೌರ್ಜನ್ಯ ಪ್ರಕರಣಗಳನ್ನು ಅವ ಲೋಕಿಸಿದಾಗ ಅಪರಾಧಿಗಳ ಸ್ಥಾನದಲ್ಲಿ ಪುರುಷರೊಂದಿಗೆ ಮಹಿಳೆಯರು ಇರು ವುದನ್ನು ಕಾಣಬಹುದಾಗಿದೆ. ತಮ್ಮ ಮನೆ ಯಲ್ಲಿ ಮಗಳಿಗೆ ತೋರಿಸುವ ಪ್ರೀತಿಯನ್ನು ಸೊಸೆಗೆ ತೋರಿಸದೇ ಇರುವುದನ್ನು ಕಾಣು ತ್ತೇವೆ. ಈ ಎಲ್ಲಾ ಅಂಶವನ್ನು ಮನಗಂಡಾಗ ಮಹಿಳೆಯರನ್ನು ಮಹಿಳೆಯರೇ ಗೌರವಿಸಿ ದ್ದರೆ ಸಮಾಜದಲ್ಲಿ ಮಹಿಳೆಯರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮಹಿಳಾ ದಿನಾಚರಣೆ ಕಾರ್ಯ ಕ್ರಮದ ಉದ್ದೇಶ ಈಡೇರುವುದಿಲ್ಲ ಎಂದರು.

ಮಹಿಳೆಯರು ಈ ಹಿಂದೆ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ನಾಲ್ಕು ಗೋಡೆಗಳ ನಡುವೆ ಇದ್ದ ಮಹಿಳೆಯರು ಮನೆಯಿಂದ ಹೊರಗೆ ಬಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಪುರುಷರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಮಹಿಳೆಯರ ಮೇಲಿನ ಭಾವನೆ ಪುರುಷರಲ್ಲಿಯೂ ಬದ ಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಮನಸ್ಸುಳ್ಳ ಪುರುಷರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಧಕ ಮಹಿಳೆ ಯರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮೈಸೂರು ಸಾಮ್ರಾಜ್ಯ ಉನ್ನತಿಯಲ್ಲಿ ಮಹಾರಾಣಿ ಕೆಂಪರಾಜ ಮ್ಮಣ್ಣಿ ಅವರ ಕೊಡುಗೆ ಅಪಾರ. ಮಹಿಳಾ ದಿನದಂದು ನಾವು ಅಂಥ ಸಾಧಕ ಮಹಿಳೆಯರನ್ನು ಸ್ಮರಿಸುವುದು ಮುಖ್ಯ. ಕಲಿಯುವ ಮನಸ್ಸು ಇದ್ದರೆ ಸಾಧನೆ ಮಾಡುವುದಕ್ಕೆ ನೆರವಾಗುತ್ತದೆ. ದೃಢÀ ನಿಲುವು ನಮ್ಮ ಮುಂದೆ ಇದ್ದರೆ ಏನೆ ಅಡ್ಡಿ ಬಂದರೂ ನಿವಾರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಉಪಾ ಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ, ಕಾರ್ಯ ದರ್ಶಿ ಬಿ.ಶಿವಣ್ಣ, ಸರಸ್ವತಿ ಉಪಸ್ಥಿತರಿದ್ದರು.

Translate »