`ಔಷಧೀಯ, ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿಷ್ಕಾರ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
ಮೈಸೂರು

`ಔಷಧೀಯ, ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿಷ್ಕಾರ’ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

March 9, 2019

ಮೈಸೂರು: ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರದ ಇತ್ತೀಚಿನ ಆವಿ ಷ್ಕಾರಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಮೈಸೂರು ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್ ಎಂಎಸ್ ರಾಘವ ರಾವ್ ಇಂದಿಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಆರೋಗ್ಯ ಮತ್ತು ಸುಖಕರ ಜೀವನಕ್ಕೆ ಔಷಧೀಯ ಮತ್ತು ವಸ್ತು ರಸಾಯನಶಾಸ್ತ್ರ ಬಹು ಮುಖ್ಯ. ಆರೋಗ್ಯಕ್ಕೆ ಔಷಧ ಬೇಕೇ ಬೇಕು. ಆಹಾರ ಕೆಡದಂತೆ ಸಂರಕ್ಷಣೆ ಮಾಡಲು ಇದು ಮುಖ್ಯ. ಈ ನಿಟ್ಟಿನಲ್ಲಿ ಆವಿಷ್ಕಾರಗಳು ಅಗತ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಮಾತನಾಡಿ, ಸಿಎಫ್ ಟಿಆರ್‍ಐ ಸಹಯೋಗದಲ್ಲಿ ಪೇಟೆಂಟ್ ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಆವಿಷ್ಕಾರಕ್ಕೆ ಮುಂದಾಗುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೆಹಲಿಯ ಎನ್‍ಸಿಆರ್ ಶಾರದಾ ವಿಶ್ವ ವಿದ್ಯಾನಿಲಯದ ಡೀನ್ (ರೀಸರ್ಚ್ ಅಂಡ್ ಅಕಾಡೆಮಿಕ್ಸ್) ಪ್ರೊ.ಹೆಚ್. ಸೂರ್ಯಪ್ರಕಾಶ್ ರಾವ್,. ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರೊ.ಸಮರ್ ಕೆ.ದಾಸ್, ಮೈಸೂರು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಕೆ.ಎಂ.ಮಹದೇವನ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೈ.ಬಿ.ಬಸವರಾಜು, ನಾಗರಾಜ ನಾಯಕ್ ಉಪಸ್ಥಿತರಿದ್ದರು.

Translate »