ಸರ್ವರ್ ವೈಫಲ್ಯ: ಆಸ್ತಿ ನೋಂದಣಿ ಅಸ್ತವ್ಯಸ್ತ
ಮೈಸೂರು

ಸರ್ವರ್ ವೈಫಲ್ಯ: ಆಸ್ತಿ ನೋಂದಣಿ ಅಸ್ತವ್ಯಸ್ತ

March 9, 2019

ಮೈಸೂರು: ಸರ್ವರ್ ವೈಫಲ್ಯ ದಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಗಳ ನೋಂದಣಿ ಕಾರ್ಯ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರಿತಪಿಸಬೇಕಾಗಿ ಬಂದಿದೆ.

ಹಲವು ದಿನಗಳಿಂದಲೂ ಈ ಸಮಸ್ಯೆ ಎದುರಾಗಿದ್ದರೂ, ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೈಸೂರಿನಲ್ಲಿ ಪ್ರದೇಶ ವಾರು ನಾಲ್ಕು ಉಪ ನೋಂದಣಾಧಿಕಾರಿ ಕಚೇರಿಗಳಿವೆ. ಇವುಗಳಲ್ಲಿ ಪ್ರತಿನಿತ್ಯ, ಪ್ರತಿ ಯೊಂದರಲ್ಲಿ ಹತ್ತಾರು ಆಸ್ತಿಗಳು ನೋಂದಣಿಯಾಗುತ್ತವೆ. ಆದರೆ ಇತ್ತೀ ಚಿನ ದಿನಗಳಲ್ಲಿ ಸರ್ವರ್ ವೈಫಲ್ಯ ದಿಂದಾಗಿ ನೋಂದಣಿ ಕಾರ್ಯ ಸ್ಥಗಿತ ಗೊಂಡು ಜನರು ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮೈಸೂರು ಉತ್ತರ ಉಪ ನೋಂದಣಿ ಕಚೇರಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಮೈಸೂರಿನ ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಇಂಟರ್‍ನೆಟ್ ನಿರ್ವಹಣೆ ತಾಲೂಕು ತಹಸೀಲ್ದಾರ್ ವಶದಲ್ಲಿದೆ. ತಾಲೂಕು ಕಚೇರಿಯಲ್ಲಿಯೇ ರೂಟರ್ ಅಳವಡಿ ಸಲಾಗಿದ್ದು, ಇಲ್ಲಿಂದ ವಿವಿಧ ಕಚೇರಿ ಗಳಿಗೆ ಇಂಟರ್‍ನೆಟ್ ಸಂಪರ್ಕ ಕಲ್ಪಿಸ ಲಾಗಿದೆ. ಕೆಲವೊಮ್ಮೆ ಇದರ ಸಂಪರ್ಕ ವನ್ನು ಕಡಿತಗೊಳಿಸಿದಾಗ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ. ಇದರ ಬಗ್ಗೆ ತಹಸೀಲ್ದಾರ್‍ಗೆ ಅರಿವಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಿಬ್ಬಂದಿ ಹಾಗೂ ಸಾರ್ವಜನಿಕರ ದೂರು.
ಇನ್ನುಳಿದ ಉಪ ನೋಂದಣಾ ಕಚೇರಿಗಳನ್ನು ಸರ್ವರ್ ವೈಫಲ್ಯದಿಂದಾಗಿ ಆಸ್ತಿ ನೋಂದಣಿ ಕಾರ್ಯ ಪ್ರತಿನಿತ್ಯ ಅಸ್ತವ್ಯಸ್ತಗೊಳ್ಳುತ್ತಿದೆ. ದೂರದ ಊರು-ಕೇರಿಗಳಿಂದ ಬರುವ ಜನ ಹಿಡಿಶಾಪ ಹಾಕುತ್ತಾ ನರಳುತ್ತಿದ್ದಾರೆ. ಕೆಲವರಂತೂ ಬೆಳಿಗ್ಗೆ ಬಂದು ಸಂಜೆವರೆಗೆ ಕಾದು ಕುಳಿತು ನಂತರ ಅಧಿಕಾರಿಗಳನ್ನು ಶಪಿಸುತ್ತಾ ತೆರಳುತ್ತಿದ್ದಾರೆ.

ಸ್ಟೇಷನರಿ ಸಮಸ್ಯೆ: ಸ್ಟೇಷನರಿ ಪೂರೈಕೆ ಸಂಬಂಧ ನೀಡಿದ್ದ ಟೆಂಡರ್ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ಟೇಷನರಿ ಸರಬರಾಜಾಗದೇ ಉಪ ನೋಂದಣಾಧಿಕಾರಿ ಕಚೇರಿಗಳ ಕಾರ್ಯ ಕುಂಟುತ್ತಾ ಸಾಗಿದೆ. ಕಾಗದ, ಕಾರ್ಡೇಜ್ ಇನ್ನಿತರ ಪರಿಕರಗಳನ್ನು ಪೂರೈಸುವವರೇ ಇಲ್ಲದೇ ಕಚೇರಿಗಳ ಸಿಬ್ಬಂದಿಯೇ ಪ್ರತಿನಿತ್ಯ ಹೇಗೋ ಹೊಂದಿಸಿಕೊಂಡು ಕಾರ್ಯ ನಿರ್ವಹಿಸುವಂತಾಗಿದೆ. ಪರಿ ಸ್ಥಿತಿ ಹೀಗೆಯೇ ಮುಂದುವರೆದರೆ ಬರುವ ತಿಂಗಳಿನಿಂದ ಕೆಲಸ-ಕಾರ್ಯ ಗಳನ್ನು ಸ್ಥಗಿತಗೊಳಿಸಲು ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ನಿರ್ಧರಿಸಿದ್ದಾರೆಂದು ಹೇಳಲಾಗಿದೆ. ಈ ವಿಚಾರವನ್ನು ಜಿಲ್ಲಾ ನೋಂದಣಾಧಿಕಾ ರಿಗಳಿಗೂ ತಿಳಿಸಿದ್ದರೂ, ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.

Translate »