ಲೋಕಸಭೆ ಚುನಾವಣೆ: ಮೈಸೂರು ನಗರ ಪೊಲೀಸರ ಸಿದ್ಧತೆ
ಮೈಸೂರು

ಲೋಕಸಭೆ ಚುನಾವಣೆ: ಮೈಸೂರು ನಗರ ಪೊಲೀಸರ ಸಿದ್ಧತೆ

March 9, 2019

ಮೈಸೂರು,: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು ಪೊಲೀಸರು ಸರ್ವ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಭಾರತ ಚುನಾ ವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಪ್ರಕಟಿಸುತ್ತಿ ದ್ದಂತೆಯೇ ಸರ್ವ ಸನ್ನದ್ಧರಾಗಲಿದ್ದಾರೆ. ಈಗಾಗಲೇ ಜಿಲ್ಲಾಡಳಿ ತವು ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಮೊದಲ ಮತ್ತು ಎರಡನೇ ಮತದಾನ ಅಧಿಕಾರಿಗಳು (1sಣ ಚಿಟಿಜ 2ಟಿಜ ಠಿoಟiಟಿg oಜಿಜಿiಛಿeಡಿ) ಹಾಗೂ ಸಿಬ್ಬಂದಿಗೆ 3 ಹಂತಗಳಲ್ಲಿ ತರಬೇತಿ ನೀಡಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ಬಂದೋಬಸ್ತ್ ಯೋಜನೆ ರೂಪಿಸಿಕೊಂಡಿದ್ದಾರೆ.

ಈ ಕುರಿತು ತಮ್ಮನ್ನು ಸಂಪರ್ಕಿಸಿದ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಲೋಕಸಭಾ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಸೂಕ್ಷ್ಮ, ಅತೀ ಸೂಕ್ಷ್ಮ ಹಾಗೂ ಇನ್ನಿತರೆ ವಿಶೇಷ ಮತಗಟ್ಟೆಗಳು ಎಷ್ಟಿವೆ, ಅಲ್ಲಿ ಅಗತ್ಯ ಮೂಲ ಸೌಲಭ್ಯ ಹಾಗೂ ರಕ್ಷಣಾ ಸೌಲಭ್ಯ ಗಳಿವೆಯಾ ಎಂಬ ಮಾಹಿತಿಯನ್ನು ಆಯಾ ಠಾಣೆಗಳ ಅಧಿಕಾರಿಗಳು ಸಂಗ್ರಹಿಸುತ್ತಿ ದ್ದಾರೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋ ಜಿಸಿ ವಿಶೇಷ ಬಂದೋಬಸ್ತ್ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕೇಂದ್ರದಿಂದ ಬರುವ ಪ್ಯಾರಾ ಮಿಲಿಟರಿ ಪಡೆ ಹಾಗೂ ಶಸ್ತ್ರಾಸ್ತ್ರ ಪಡೆಗಳೊಂದಿಗೆ ನಮ್ಮ ಕೆಎಸ್‍ಆರ್‍ಪಿ, ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲು ಈಗಾಗಲೇ ಪೂರ್ವ ಸಿದ್ಧತಾ ಕಾರ್ಯ ನಡೆಸಲಾಗಿದೆ ಎಂದರು. ಫ್ಲೈಯಿಂಗ್ ಸ್ಕ್ವಾಡ್, ಚೆಕ್‍ಪೋಸ್ಟ್ ತಪಾಸಣೆಗಾಗಿ ಸಿಬ್ಬಂದಿ ಹಂಚಿಕೆ ಕೆಲಸ ಪ್ರಗತಿಯಲ್ಲಿದ್ದು, ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಸಭೆಗಳಲ್ಲಿ ಚರ್ಚಿಸಲಾಗುತ್ತಿದ್ದು, ಚುನಾವಣಾ ಬಂದೋಬಸ್ತ್ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಅದೇ ರೀತಿ ಜಿಲ್ಲಾ ಪೊಲೀಸರು ಸಹ ಮೈಸೂರು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಲೋಕಸಭಾ ಚುನಾವಣೆ ಭದ್ರತೆಗಾಗಿ ಆಯಾ ಉಪವಿಭಾ ಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳೊಂದಿಗೆ ಸಮಾಲೋಚಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯ ಮಾದರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Translate »