ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ
ಮೈಸೂರು

ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ

March 9, 2019

ಮೈಸೂರು: ವಿಜ್ಞಾನ-ತಂತ್ರಜ್ಞಾನಯುಕ್ತ ಆಧುನಿಕ ಕಾಲದಲ್ಲಿಯೂ ವರದಕ್ಷಿಣೆ ಪಿಡುಗಿನಿಂದ ಮಹಿಳೆಯರು ನಲುಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ವಿಷಾದಿಸಿದ್ದಾರೆ.

ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಶುಕ್ರವಾರ ನಡೆದ `ವಿಶ್ವ ಮಹಿಳಾ ದಿನಾಚಣೆ’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲೂ ಮಹಿಳೆಯರ ಶೋಷಣೆ ನಿಂತಿಲ್ಲ. ಮಹಿಳೆಯರು ದೌರ್ಜನ್ಯದಿಂದ ಮುಕ್ತರಾಗಲು ಸ್ವಾವಲಂಬಿಗಳಾಗಬೇಕು. ಶಿಕ್ಷಣ ಪಡೆದಾಗ ಮಾತ್ರ ದೌರ್ಜನ್ಯವನ್ನು ಹಿಮ್ಮೆಟ್ಟಿ ಸಬಹುದು. ಜಗತ್ತು ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿದೆ. ಇದರ ಫಲವಾಗಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಪುರು ಷರ ಸರಿ ಸಮವಾಗಿ ನಿಂತಿದ್ದಾಳೆ. ಆದರೂ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುಟುಂಬದ ಬೆನ್ನೆಲುಬಾಗಿರುವ ಮಹಿ ಳೆಯ ಮೇಲೆ ನಿರಂತರವಾಗಿ ಕೌಟುಂಬಿಕ ದೌರ್ಜನ್ಯ ನಡೆಯುತ್ತಿದೆ. 21ನೇ ಶತ ಮಾನವನ್ನು ಆಧುನಿಕ ಯುಗ, ತಂತ್ರ ಜ್ಞಾನ ಯುಗ ಎನ್ನುತ್ತಾರಾದರೂ ಮಹಿಳೆ ಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮಧ್ಯರಾತ್ರಿಯಲ್ಲಿ ಒಬ್ಬಂಟಿಯಾಗಿ ಮಹಿಳೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ನಾಗರಿಕರಿಗೆ ಅರಿವು ಮೂಡಿಸಿ, ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಬೇಕು. ಇದಕ್ಕಾಗಿ ಮಹಿಳೆಯರು ಶಿಕ್ಷಣ ಪಡೆಯ ಬೇಕು. ಶಿಕ್ಷಣ ಮಹತ್ವ ನೀಡಬೇಕು. ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಕುಟುಂಬವೇ ಅಭಿವೃದ್ಧಿಯಾಗುತ್ತಿದೆ. ತನ್ನ ದುಡಿಮೆ ಯಿಂದ ತಾನು ಅಬಲೆಯಲ್ಲ ಸಬಲೆ ಎಂದು ತೋರಿಸಬೇಕು. ಜಗತ್ತಿನಲ್ಲಿ ಇಂದು ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗು ತ್ತಿದೆ. ಅಭಿವೃದ್ಧಿಗೆ ಹೊಸ ಆಯಾಮಗಳು ಬಂದಿವೆ. ಮಹಿಳೆಯರು ಪಾಶ್ಚಿಮಾತ್ಯ ಉಡುಗೆ-ತೊಡಿಗೆಗೆ ಮಾರು ಹೋಗಿರು ವುದು ಬೇಸರದ ಸÀಂಗತಿ. ಆಧುನಿಕ ತಂತ್ರ ಜ್ಞಾನ ಮತ್ತು ಪಾಶ್ಚಿಮಾತ್ಯದ ತಂತ್ರಜ್ಞಾನ ಮತ್ತು ಹೊಸತನವನ್ನು ನಾವು ಅಳವಡಿ ಸಿಕೊಳ್ಳಬೇಕು. ವಿನಃ ಸಂಸ್ಕøತಿಯನ್ನಲ್ಲ, ನಮ್ಮ ಸಂಪ್ರದಾಯ ಉಳಿಸಿಕೊಂಡು ಮಹಿಳೆಯರು ಅಭಿವೃದ್ಧಿಯತ್ತ ಸಾಗ ಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಮಹಿಳೆಯರು ಹೋರಾಡಿದ್ದಾರೆ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ ಸೇರಿ ದಂತೆ ಇನ್ನಿತರ ಮಹಿಳಾ ಹೋರಾಟ ಗಾರರು ಬ್ರಿಟಿಷರ ವಿರುದ್ಧ ಪರಾಕ್ರಮ ಮೆರೆದಿದ್ದರು. ಸ್ವಾತಂತ್ರ್ಯಾನಂತರವೂ ಮಹಿಳೆಯರ ಸಾಧನೆ ಗಮನಾರ್ಹ ವಾಗಿದೆ. ಇಂದಿರಾಗಾಂಧಿ ದೇಶದ ಪ್ರದಾನಿ ಯಾಗಿ ಆಡಳಿತ ನಡೆಸಿದರೆ, ವಿವಿಧ ರಾಜ್ಯಗಳಲ್ಲಿ ಶೀಲಾದೀಕ್ಷಿತ್, ಮಮತಾ ಬ್ಯಾನರ್ಜಿ, ಮಾಯಾವತಿ, ಉಮಾ ಭಾರತಿ, ಜಯಲಲಿತಾ ಮುಖ್ಯಮಂತ್ರಿ ಗಳಾಗಿ ಆಡಳಿತ ನಿರ್ವಹಿಸಿದ್ದಾರೆ. ದೇಶದ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾ ರಾಮನ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಮಹಿಳಾ ಸಾಧಕರನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆಯತ್ತ ಗಮನ ಕೇಂದ್ರೀಕರಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 5 ರಿಂದ 10 ವರ್ಷ ದೊಳಗಿನ ಮಕ್ಕಳಿಗೆ ಪ್ರತಿ ಕ್ಷೇತ್ರದಲ್ಲಿ ಇಬ್ಬ ರಂತೆ ಒಟ್ಟು 12 ಮಕ್ಕಳು ಜಿ¯್ಲÁ ಮಟ್ಟದ ಪ್ರಶಸ್ತಿ ನೀಡಲಾಯಿತು. ಕ್ರೀಡೆಯಲ್ಲಿ ಹುಣ ಸೂರಿನ ಹೆಚ್.ಜಿ.ತರುಣ್, ಮೈಸೂರಿನ ಕೆ.ಚೇತನ್‍ಗೌಡ, ಕಲಾ ಕ್ಷೇತ್ರದಲ್ಲಿ ಮೈಸೂ ರಿನ ರೂಪಾನಗರದ ಪಿ.ಎನ್.ನಿಹಾಲï, ಶ್ರೀರಾಂಪುರ ಪರಸಯ್ಯನಹುಂಡಿಯ ಎಂ.ಸಿ. ಭಾರ್ಗವಿ, ಸಂಗೀತ ಕ್ಷೇತ್ರದಲ್ಲಿ ಮೈಸೂ ರಿನ ಟಿ.ಕೆ.ಲೇಔಟ್‍ನ ಋತ್ವಿಕ್ ಸಿ.ರಾಜï, ಆಲನಹಳ್ಳಿ ಬಡಾವಣೆಯ ಎಂ.ಭೂಮಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ರಾಮನಗರ ಜಿ¯್ಲÉ ಕೆಂಪನಹಳ್ಳಿ ಗ್ರಾಮದ ಎಸ್.ದರ್ಶನ್, ಮೈಸೂರು ವಿಜಯನಗರದ ಮಹಿಮ, ಯಾವುದೇ ಕ್ಷೇತ್ರದಲ್ಲಿ ಪ್ರಾವಿಣ್ಯತೆಯಲ್ಲಿ ಪಿರಿಯಾಪಟ್ಟಣ ತಾಲೂಕಿನ ಸೀಗೂರಿನ ವಿ.ಎಸ್.ಸುಮಂತ್, ದಟ್ಟಗಳ್ಳಿಯ ಪ್ರಣವ್ ವಿ.ಕಶ್ಯಪ್, ತಾರ್ಕಿಕ ಸಾಧನೆಗೆ ಗಾಂಧಿ ನಗರದ ಸಿಂಚನ, ಕೆ.ಆರ್.ನಗರದ ವಿನಾ ಯಕ ಬಡಾವಣೆಯ ತುಷಾರ ಎನ್. ಭಾರದ್ವಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಪದ್ಮ, ಶಿಶು ಯೋಜನಾ ಅಧಿವೃದ್ಧಿ ಅಧಿಕಾರಿ ಗಳಾದ ಮುಂಜುಳ ಪಾಟೀಲ್, ಆಶಾ, ನಂಜನಗೂಡಿನ ಮಂಜುಳಾ, ಶಿವಲಿಂಗಯ್ಯ, ನವೀನ್, ನಿವೃತ್ತ ಅಧಿ ಕಾರಿ ಸರೋಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »