ಮಂಡ್ಯ: ಕೆಲ ತಿಂಗಳ ಹಿಂದೆ ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಅವರು ಆಂಧ್ರದವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪೀಠಿಕೆ ಹಾಕಿದ್ದರು. ಈಗ ಅಂಬರೀಷ್ ಶಾಸಕರು ಹಾಗೂ ಸಚಿವರಾಗಿದ್ದಾಗ ಅವರ ಮನೆಗೆ ಹೋದವರಿಗೆ ಸುಮಲತಾ ಒಂದು ಗ್ಲಾಸ್ ನೀರು ಕೊಟ್ಟಿದ್ದಾರಾ? ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಾಗ್ದಾಳಿ ನಡೆಸಿದ ಬೆನ್ನಲ್ಲೇ `ಗಂಡ ಸತ್ತ ಒಂದು ತಿಂಗಳು, ಎರಡು ತಿಂಗಳಲ್ಲೇ ಚಾಲೆಂಜ್ ಮಾಡಿಕೊಂಡು ಎಲೆಕ್ಷನ್‍ಗೆ ಬರುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುಮಲತಾ ಅವರನ್ನು ಟೀಕಿಸುವ ಭರದಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೆಚ್.ಡಿ.ರೇವಣ್ಣ ಅವರ ಹೇಳಿಕೆಗೆ ವ್ಯಾಪಕವಾಗಿ ವಿರೋಧಗಳು ವ್ಯಕ್ತವಾಗಿವೆ.
ಮಾಜಿ ಸಚಿವೆ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ರೇವಣ್ಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯಿ ಸಿದ ರೇವಣ್ಣ, `ಕ್ಷಮೆ ಕೇಳಲು ನನಗೇನು ಹುಚ್ಚು ಹಿಡಿದಿದೆಯೇ? ನಮ್ಮ ಸಂಸ್ಕøತಿಯ ಭಾಗವಾಗಿ ಆ ಮಾತನ್ನು ನಾನು ಹೇಳಿ ದ್ದೇನೆ’ ಎಂದು ತಮ್ಮ ವಿವಾದಾತ್ಮಕ ಹೇಳಿಕೆ ಯನ್ನು ಸಮರ್ಥಿಸಿಕೊಂಡಿದ್ದಾರೆ.
ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ರುವ ಸುಮಲತಾ, ನಮ್ಮ ಭಾರತದ ಸಂಸ್ಕøತಿ ಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ವಿದೆ. ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡುವ ಮನೆ ಹಾಗೂ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ನಮ್ಮ ವೇದಗಳು ಹೇಳಿವೆ ಎಂದರು.
ಅವರುಗಳ (ಜೆಡಿಎಸ್ ನವರ) ಹೇಳಿಕೆಗಳು ಅವರಿಗೇ ತಿರುಗುಬಾಣವಾಗುತ್ತಿದೆ. ಅವರು ಯಾಕೆ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಗೊತ್ತಿಲ್ಲ. ನಾನು ಈಗ ರಾಜಕಾರಣಕ್ಕೆ ಬಂದಿದ್ದೇನೆ. ಅವರು ಎಷ್ಟು ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಯಾವ ರೀತಿ ಹೇಳಿಕೆ ನೀಡಬೇಕು ಎಂಬುದೂ ಕೂಡ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಎಲ್ಲವನ್ನೂ ಮಂಡ್ಯದ ಜನ ನೋಡುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ. ನನಗೆ ಜನ ಬೆಂಬಲವಿಲ್ಲದಿದ್ದರೆ ಯಾರೂ ನನ್ನನ್ನು ಕೇರ್ ಮಾಡುತ್ತಿರಲಿಲ್ಲ. ಬೆಂಬಲ ಇರುವುದರಿಂದಲೇ ನನ್ನ ಸ್ಪರ್ಧೆಯನ್ನು ಈ ರೀತಿ ವಿರೋಧಿಸುತ್ತಿದ್ದಾರೆ ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.
ಮತ್ತೊಂದೆಡೆ ಅಂಬರೀಷ್ ಕುಟುಂಬಸ್ಥರು ಸಂಬಂಧಿಕರೇ ಆದ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಂಬರೀಷ್ ಮನೆಗೆ ಹೋದಾಗ ನೀರು, ಊಟ ಕೊಡದೇ ಕಳುಹಿಸಿದ್ದಾರಾ? ಡಿ.ಸಿ.ತಮ್ಮಣ್ಣ ಮತ್ತು ನಾವೆಲ್ಲಾ ಸಂಬಂಧಿಕರು, ಸಂಬಂಧವನ್ನು ಉಳಿಸಿಕೊಂಡು ಹೋಗಬೇಕು. ವಯಸ್ಸಾದವರು ಮಾತನಾಡುವಾಗ ತಾಳ್ಮೆ ವಹಿಸಬೇಕು. ಗೆಲುವು-ಸೋಲು ಮುಖ್ಯವಲ್ಲ. ನಮ್ಮ ಅತ್ತಿಗೆಗೆ (ಸುಮಲತಾ) ಜನ ಬೆಂಬಲವಿದೆ. ಅದನ್ನು ಅವರು (ಡಿ.ಸಿ.ತಮ್ಮಣ್ಣ) ರಾಜಕೀಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ಚಿತ್ರರಂಗದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕೂಡ ಚಿತ್ರರಂಗದವರೇ ಎಂಬುದನ್ನು ತಮ್ಮಣ್ಣ ಅರ್ಥ ಮಾಡಿಕೊಳ್ಳಬೇಕು ಎಂದು ಅಂಬರೀಷ್ ಚಿಕ್ಕಪ್ಪನ ಮಗ ಅಮರ್ ಕಿಡಿಕಾರಿದ್ದಾರೆ.
ತಂದೆ ಸಮಾನರಾದ ಡಿ.ಸಿ.ತಮ್ಮಣ್ಣ ನವರು ಸುಮಕ್ಕನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತಾರೆ ಎಂದುಕೊಂಡಿರಲಿಲ್ಲ. ನಮ್ಮ ಮನೆ ಸೇರಿದಂತೆ ಎಷ್ಟು ಸಚಿವರ ಮನೆಯಲ್ಲಿ ಅವರ ಹೆಂಡತಿಯರು ಬಂದವರಿಗೆಲ್ಲಾ ನೀರು, ಊಟ ಕೊಡುತ್ತಾರೆ. ಆಂಟಿ (ಸುಮಲತಾ) ಪರಿಚಯವಿಲ್ಲದವ ರನ್ನು ಮಾತನಾಡಿಸುತ್ತಾರಾ? ಸಂಬಂಧದಲ್ಲಿ ಅವರು ತಮ್ಮಣ್ಣನವ ರಿಗೆ ಮಗಳಾಗಬೇಕು. ಅಪ್ಪನೇ ಮಗಳ ಬಗ್ಗೆ ಮಾತನಾಡಿದರೆ ನೋವಾಗುವುದಿಲ್ಲವೇ? ಅವರು ಕ್ಷಮೆ ಕೇಳಿದರೂ ಈ ನೋವು ಮರೆಯಲಾಗಲ್ಲ ಎಂದು ಅಂಬರೀಷ್ ಸಂಬಂಧಿ ವಸಂತ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.