ಮೈಸೂರಿನ ಎಂಜಿ ರಸ್ತೆ  ಕಾಮಗಾರಿ  1.40 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ : ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಎಸಿಬಿಗೆ ದೂರು
ಮೈಸೂರು

ಮೈಸೂರಿನ ಎಂಜಿ ರಸ್ತೆ ಕಾಮಗಾರಿ 1.40 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ : ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಎಸಿಬಿಗೆ ದೂರು

March 9, 2019

ಮೈಸೂರು: ಮೈಸೂರಿನ ಎಂಜಿ ರಸ್ತೆ ಹಾಗೂ ಫುಟ್‍ಪಾತ್ ಅಭಿ ವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಸತ್ಯ ಶೋಧನಾ ಸಮಿತಿ ವರದಿಯಲ್ಲಿ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲು ಶುಕ್ರವಾರ ನಡೆದ ನಗರಪಾಲಿಕೆ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮೈಸೂರು ನ್ಯಾಯಾಲಯದ ಮುಂಭಾಗ ದಿಂದ ರಾಷ್ಟ್ರೀಯ ಹೆದ್ದಾರಿ 212ರವರೆಗಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯ ಆಯ್ದ ಭಾಗ ಗಳಲ್ಲಿ ರಸ್ತೆ ಹಾಗೂ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿಯ 3ನೇ ಬಿಲ್‍ನಲ್ಲಿ 1.40 ಕೋಟಿ ರೂ. ಅವ್ಯವಹಾರ ನಡೆಸಿರುವುದು ಸತ್ಯ ಶೋಧನಾ ಸಮಿತಿ ವರದಿಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ-1ರ ಸಹಾ ಯಕ ಆಯುಕ್ತರಾಗಿದ್ದ ಸುನಿಲ್‍ಬಾಬು, ಕಿರಿಯ ಇಂಜಿನಿಯರ್ ಮೋಹನ್‍ಕುಮಾರಿ, ಕಾಮ ಗಾರಿ ಪರಿಶೀಲನೆಯ 3ನೇ ಪಾರ್ಟಿ ಕ್ಯಾಡ್ ಸ್ಟೇಷನ್ ಸಂಸ್ಥೆ, ಗುತ್ತಿಗೆದಾರ ಕರೀಗೌಡ ಸೇರಿ ದಂತೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಎಸಿಬಿಗೆ ದೂರು ನೀಡುವುದರ ಜೊತೆಗೆ ಇವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರಿಗೆ ಸೂಚಿಸಿದರು.

ಅಲ್ಲದೆ ಗುತ್ತಿಗೆದಾರ ಕರೀಗೌಡ ಹಾಗೂ 3ನೇ ಪಾರ್ಟಿಯಾಗಿ ಕಾಮಗಾರಿ ತಪಾಸಣೆ ನಡೆ ಸುವ ಕ್ಯಾಡ್ ಸ್ಟೇಷನ್ ಸಂಸ್ಥೆಯನ್ನು ಕೂಡಲೇ ಪಾಲಿಕೆಯ ಕಪ್ಪು ಪಟ್ಟಿಗೆ ಸೇರಿಸಬೇಕು. ಪ್ರಕ ರಣ ಇತ್ಯರ್ಥವಾಗುವವರೆಗೂ ಪಾಲಿಕೆಯಿಂದ ಯಾವುದೇ ಬಿಲ್ ಪಾವತಿಸಬಾರದೆಂದು ಮೇಯರ್ ಪುಷ್ಪಲತಾ ಅವರು ನಿರ್ಣಯ ಪ್ರಕಟಿಸಿದರು. ಈ ಸಂಬಂಧ ಸದಸ್ಯರ ಮನವಿ ಮೇರೆಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಮೇಯರ್ ಅವರು ಪ್ರಕಟಿಸಿದ ಕೌನ್ಸಿಲ್ ನಿರ್ಣಯದಂತೆ ಕ್ರಮ ಕೈಗೊಳ್ಳುವು ದಾಗಿ ಸ್ಪಷ್ಟಪಡಿಸಿದರು.

ನಿರ್ಣಯಕ್ಕೆ ಮುನ್ನ: ಬೋಗಸ್ ಬಿಲ್ ಮೂಲಕ 1.40 ಕೋಟಿ ರೂ. ಹಣವನ್ನು ಪಾಲಿಕೆಗೆ ವಂಚಿ ಸಿರುವುದನ್ನು ವಿಪಕ್ಷ(ಬಿಜೆಪಿ) ನಾಯಕ ಬಿ.ವಿ. ಮಂಜುನಾಥ್, ಜ.29ರ ಕೌನ್ಸಿಲ್ ಸಭೆಯಲ್ಲಿ ಬಯಲಿಗೆಳೆದಿದ್ದರು. ಈ ಬಗ್ಗೆ ಸುದೀರ್ಘ ಚರ್ಚೆಯಾದ ಬಳಿಕ, ಸತ್ಯಾಸತ್ಯತೆ ಪರಿಶೀಲನೆ ಗಾಗಿ ಸತ್ಯ ಶೋಧನಾ ಸಮಿತಿಯನ್ನು ರಚಿಸ ಲಾಗಿತ್ತು. ಸಭೆ, ಆರೋಪಿತರಿಂದ ಹೇಳಿಕೆ ದಾಖಲು, ಕಾಮಗಾರಿ ಪರಿಶೀಲನೆ ಇನ್ನಿತರ ಪ್ರಕ್ರಿಯೆ ಮೂಲಕ ಸಮಿತಿ ಸಮಗ್ರ ವರದಿ ಸಿದ್ಧಪಡಿಸಿದ ಹಿನ್ನೆಲೆಯಲ್ಲಿ ಇಂದು ವಿಶೇಷ ಕೌನ್ಸಿಲ್ ಸಭೆ ಕರೆಯಲಾಗಿತ್ತು. ಸಮಿತಿ ನೀಡಿದ್ದ ವಿಸ್ತøತ ವರದಿಯನ್ನು ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಓದಿದರು. ಬಳಿಕ ಅನೇಕ ಸದ ಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಭ್ರಷ್ಟಾಚಾರವನ್ನು ಬಯಲಿಗೆಳೆದ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್ ಮಾತನಾಡಿ, ವಿಶ್ವ ಪ್ರಸಿದ್ಧ ಮೈಸೂರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದರೂ ಯಾವೊಬ್ಬ ಅಧಿ ಕಾರಿಯೂ ತುಟಿ ಬಿಚ್ಚಿಲ್ಲ. ಹಾಗಾಗಿ ಅಧಿಕಾರಿ ವರ್ಗದ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಸತ್ಯ ಶೋಧನಾ ಸಮಿತಿ ಪರಿ ಶೀಲನೆ ನಡುವೆ ಒಂದು ಕಡತ ನಾಪತ್ತೆಯಾ ಗಿದೆ. ಇದು ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿರುವುದನ್ನು ಸಾಕ್ಷೀಕರಿ ಸುತ್ತದೆ. ಅಲ್ಲದೆ ಹಲವು ಅಧಿಕಾರಿಗಳು ಭ್ರಷ್ಟಾ ಚಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗು ತ್ತದೆ. 3ನೇ ಪಾರ್ಟಿ ಕ್ಯಾಡ್ ಸ್ಟೇಷನ್ ವರದಿ ಯಲ್ಲೂ ಬದಲಾವಣೆ ಮಾಡಲಾಗಿದೆ. ಕಪ್ಪು ಪಟ್ಟಿಗೆ ಸೇರಿಸುವುದರಿಂದ ಪ್ರಯೋಜವಾಗುವು ದಿಲ್ಲ. ಗುತ್ತಿಗೆದಾರ ಕರೀಗೌಡ ಹಾಗೂ ಕ್ಯಾಡ್ ಸಂಸ್ಥೆಯ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು. ಕೌನ್ಸಿಲ್ ತೀರ್ಮಾನವನ್ನು ಸರ್ಕಾರಕ್ಕೆ ಸಲ್ಲಿಸಿ, ತ್ವರಿತ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಬೇಕೆಂದು ಹೇಳಿದರು.

ಎಸಿಬಿಗೆ ದೂರು ಕೊಡಿ: ಬಿಜೆಪಿ ಸದಸ್ಯ ಎಂ.ಯು.ಸುಬ್ಬಯ್ಯ ಮಾತನಾಡಿ, ಕಾಮಗಾರಿ ಅನುದಾನದಲ್ಲಿ 1.40 ಕೋಟಿ ರೂ. ಭ್ರಷ್ಟಾ ಚಾರ ನಡೆಸಿರುವ ಆರೋಪ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸರ್ಕಾ ರಕ್ಕೆ ಬರೆಯುವ ಆಡಳಿತಾತ್ಮಕ ಕ್ರಮದ ಜೊತೆಗೆ ದಂಡನೀಯ(ಪೀನಲ್) ಕ್ರಮಕ್ಕೂ ಮುಂದಾಗ ಬೇಕು. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಎಸಿಬಿ ಇದೆ. ಹಾಗಾಗಿ ಈ ಪ್ರಕರಣದ ಬಗ್ಗೆ ಪಾಲಿಕೆ ಆಯುಕ್ತರೇ ಎಸಿಬಿಗೆ ದೂರು ನೀಡಿ, ನಮ್ಮಲ್ಲಿರುವ ದಾಖಲೆಗಳನ್ನೂ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಮಾತ ನಾಡಿದ ಸದಸ್ಯ ಸತೀಶ್, ಆರೋಪಿತ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾ ರಕ್ಕೆ ಶಿಫಾರಸ್ಸು ಮಾಡಿದರೆ, ಶಿಫಾರಸ್ಸಿನ ಮೂಲಕ ಅವರು ಬಚಾವಾಗುತ್ತಾರೆ.ಆದ್ದರಿಂದ ಎಸಿಬಿಗೆ ದೂರು ನೀಡಿ, ತುರ್ತು ಕ್ರಮಕ್ಕೆ ಸಹ ಕರಿಸಬೇಕೆಂದು ಒತ್ತಾಯಿಸಿದರು.

ಎಲ್ಲಾ ಕಾಮಗಾರಿಗಳ ತನಿಖೆಯಾಗಲಿ: ಮ.ವಿ.ರಾಂಪ್ರಸಾದ್ ಮಾತನಾಡಿ, 4 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲೇ 1.40 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಹಾಗಾಗಿ ಇನ್ನುಳಿದ 46 ಕೋಟಿ ರೂ. ಕಾಮಗಾರಿಗಳು, ದಸರಾ ಸಂದರ್ಭ ದಲ್ಲಿ ನಡೆಸಿದ ಕಾಮಗಾರಿಗಳ ಬಗ್ಗೆಯೂ ತನಿಖೆ ನಡೆಸಬೇಕು. ಸತ್ಯಶೋಧನಾ ಸಮಿತಿ ನೀಡಿರುವ ವರದಿ, ಯೋಜನೆಗಳ ಅನುದಾನ ದುರುಪಯೋಗವಾಗದಂತೆ ಎಚ್ಚರಿಸಿದೆ ಎಂದರು. ಸತ್ಯ ಶೋಧನಾ ಸಮಿತಿ ಸದಸ್ಯರಾದ ಶಿವಕುಮಾರ್, ಅಯೂಬ್ ಖಾನ್, ಶಾಂತಕುಮಾರಿ, ಪ್ರೇಮಾ ಶಂಕರೇಗೌಡ ಮಾತನಾಡಿ, ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲುಸ್ತರದ ಅಧಿಕಾರಿಗಳು ವಿವೇಚನವುಳ್ಳವರಾಗಿದ್ದರೂ ಉದ್ದೇಶಪೂರ್ವಕವಾಗಿ ವಂಚನೆ ಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಸಮಿತಿಯು ನಿಷ್ಪಕ್ಷಪಾತ ವರದಿ ನೀಡಿದೆ. ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿ ಯರ್ ಪ್ರಕಾಶ್ ಅವರೂ ಅನುಮೋದಿಸಿದ್ದಾರೆಂದು ತಿಳಿಸಿದರು. ಆರಿಫ್ ಹುಸೇನ್, ಎಸ್‍ಬಿಎಂ ಮಂಜು, ಸುನಂದಾ ಪಾಲನೇತ್ರ ಮತ್ತಿತರ ಸದಸ್ಯರು ಸಮಿತಿ ವರದಿಯನ್ನು ಶ್ಲಾಘಿಸಿದರು. ಸತ್ಯಶೋಧನಾ ಸಮಿತಿ ಯಲ್ಲಿ ಉಪಮೇಯರ್ ಷಫೀ ಅಹಮ್ಮದ್, ಸದಸ್ಯರಾದ ರಶ್ಮಿ, ಶಾಂತಕುಮಾರಿ, ಪ್ರೇಮಾ ಶಂಕರೇ ಗೌಡ, ಅಯೂಬ್‍ಖಾನ್, ಶಿವಕುಮಾರ್, ಮಾ.ವಿ.ರಾಂಪ್ರಸಾದ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಪ್ರಕಾಶ್ ಸದಸ್ಯರಾಗಿದ್ದರು.

Translate »