ಚಾಮುಂಡಿಬೆಟ್ಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ
ಮೈಸೂರು

ಚಾಮುಂಡಿಬೆಟ್ಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ

March 9, 2019

ಮೈಸೂರು: ಚಾಮುಂಡಿಬೆಟ್ಟದಲ್ಲಿ ದುಷ್ಕರ್ಮಿಗಳು ಹಾಕಿದ ಬೆಂಕಿ ನಂದಿಸುವ ಸಂದರ್ಭದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರು ವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಚಾಮುಂಡಿ ಬೆಟ್ಟದ ನೂರಾರು ಎಕರೆ ಕುರುಚಲು ಕಾಡಿಗೆ ಬೆಂಕಿ ವ್ಯಾಪಿಸಿದ್ದಲ್ಲದೆ, ದಟ್ಟ ಹೊಗೆ ಆವರಿಸಿತ್ತು. ಅಗ್ನಿ ಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಸ್ವಯಂ ಸೇವಕರೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ್ರರು. ಈ ವೇಳೆ ಬಂಡೆಯೊಂದರ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮೊದಲು ನೋಡಿದ ಸ್ವಯಂ ಸೇವಕರು, ಗಾಬರಿಯಿಂದ ಓಡಿ ಬಂದು, ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೆ.ಆರ್.ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾ ಗಾರಕ್ಕೆ ಸಾಗಿಸಿದರು. ಕೆ.ಆರ್.ವಿಭಾಗದ ಎಸಿಪಿ ಧರ್ಮಪ್ಪ ಭೇಟಿ ನೀಡಿ, ಪರಿಶೀಲಿಸಿದರು. ಆ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು, ನಾಲ್ಕೈದು ದಿನಗಳ ಹಿಂದೆಯೇ ಸಾವನ್ನಪ್ಪಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆಕೆಗೆ ಸುಮಾರು 35 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದ್ದು, ಗುರುತು ಪತ್ತೆ ಕಷ್ಟಸಾಧ್ಯವಾಗಿದೆ.

ಹಲವು ಅನುಮಾನ: ಬೆಂಕಿ ಜ್ವಾಲೆ ನಡುವೆ ಮಹಿಳೆ ಮೃತ ದೇಹ ಪತ್ತೆಯಾಗಿರುವುದು ಹಲವು ಅನುಮಾನ ಮೂಡಿಸಿದೆ. ಬಂಡೆಯ ಬಳಿ ಆ ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ ಗಳು, ಬಚಾವಾಗಲು ಬೆಟ್ಟಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ವ್ಯಾಪಿಸುವುದರಿಂದ ಮೃತದೇಹ ಸಂಪೂರ್ಣ ಸುಟ್ಟು ಹೋಗುವು ದರಿಂದ ಯಾವುದೇ ಸಾಕ್ಷಿ ಸಿಗುವುದಿಲ್ಲ ಎಂದು ಯೋಚಿಸಿ ಹೀಗೆ ಬೆಂಕಿ ಹಚ್ಚಿದ್ದಾರೆ ಎಂದು ಜನ ಶಂಕೆ ವ್ಯಕ್ತಪಡಿಸಿದರು. ಆದರೆ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದ ಕಾರಣ, ನಾಲ್ಕೈದು ದಿನಗಳ ಹಿಂದೆಯೇ ಯಾರೋ ಹತ್ಯೆ ಮಾಡಿರಬಹುದು. ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿರುವ ಪರಿಣಾಮ ಇಲ್ಲಿ ಇಂತಹ ಅನಾಹುತ ಪುನರಾವರ್ತನೆ ಆಗುತ್ತಿವೆ ಎಂದು ಕೆಲವರು ಆಕ್ರೋಶ ವ್ಯಕ್ತತಪಡಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸತ್ಯಾಂಶ ತನಿಖೆಯಿಂದ ತಿಳಿಯಬೇಕಿದೆ.

ನೂರಾರು ಎಕರೆ ಕಾಡು ಭಸ್ಮ: ಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ ಬೆಟ್ಟದತ್ತ ಆವರಿಸಿ, ನೂರಾರು ಎಕರೆ ಕುರುಚಲು ಕಾಡು ಭಸ್ಮವಾಗಿದೆ. ವಿಷಯ ತಿಳಿದು ಸ್ಥಳಕ್ಕಾ ಗಮಿಸಿದ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್, ಆರ್‍ಎಫ್‍ಓ ಗೋವಿಂದರಾಜು ಹಾಗೂ 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಬೆಂಕಿ ನೆಲಮಟ್ಟದಿಂದ 25 ಅಡಿ ಎತ್ತರದಲ್ಲಿ ವ್ಯಾಪಿಸಿರುವುದರಿಂದ ನಂದಿಸಲು ಹಿನ್ನಡೆ ಯಾಗಿತ್ತು. ಬಳಿಕ ಜಿಲ್ಲಾ ಅಗ್ನಿಶಾಮಕಾಧಿಕಾರಿ ಗುರುರಾಜ್ ನೇತೃತ್ವ ದಲ್ಲಿ 5 ವಾಹನಗಳೊಂದಿಗೆ 100ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಕಾರ್ಯಾಚರಣೆ ನಡೆಸಿದರು. ಸತತ 5-6 ಗಂಟೆಗಳ ಪರಿಶ್ರಮದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು.

Translate »