ಶಾಸಕ ಸ್ಥಾನ ತೊರೆದ ಜಾಧವ್ ಸೇರಿ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೋಟೀಸ್
ಮೈಸೂರು

ಶಾಸಕ ಸ್ಥಾನ ತೊರೆದ ಜಾಧವ್ ಸೇರಿ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಸ್ಪೀಕರ್ ನೋಟೀಸ್

March 9, 2019

ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್‍ನ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಶಾಸಕರಿಗೆ ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ನೋಟೀಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜ ರಾಗುವಂತೆ ಸೂಚಿಸಿದ್ದಾರೆ.

ಬರುವ ಮಂಗಳವಾರ (ಮಾರ್ಚ್ 12) ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಸುದ್ದಿಗಾರ ರಿಗೆ ಈ ವಿಷಯ ತಿಳಿಸಿದ ಸಭಾಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯ ಕರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ನಾನು ಈ ಕ್ರಮಕ್ಕೆ ಮುಂದಾಗಿದ್ದೇನೆ. ಕಾನೂನು ಹೇಗೆ ಹೇಳುತ್ತೋ ಹಾಗೆ ಮಾಡುತ್ತೇನೆ. ರಮೇಶ್ ಅವರಲ್ಲದೆ, ಸದ ಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ್, ನಾಗೇಂದ್ರ ಹಾಗೂ ಮಹೇಶ್ ಕಮಟಳ್ಳಿ ಅವರಿಗೆ ನಮ್ಮ ಕಚೇರಿಯಿಂದ ಈಗಾಗಲೇ ಪತ್ರ ರವಾನೆಯಾಗಿದೆ. ಅಂದು ಅವರು ವಿವರಣೆ ನೀಡುತ್ತಿದ್ದಾರೆ. ಒಬ್ಬರು ಬಂದು ರಾಜೀನಾಮೆ ನೀಡಿದ್ದಾರೆ. ಕಾನೂನು ಏನು ಹೇಳುತ್ತೋ ಹಾಗೆ ಮಾಡುತ್ತೇನೆ. ಯಾರೇ ರಾಜೀನಾಮೆ ಕೊಟ್ಟರು ಸ್ವೀಕರಿ ಸುತ್ತೇನೆ ಎಂದಿದ್ದೆ. ಆದರೆ ಹಾಗೆಯೇ ಅಂಗೀಕರಿಸಲಾಗುವುದಿಲ್ಲ.

ಸ್ವೀಕಾರ ಬೇರೆ, ಅಂಗೀಕಾರ ಬೇರೆ ಎಂದು ಸುದ್ದಿಗಾರ ರಿಗೆ ಎರಡು ಪದಗಳ ವ್ಯತ್ಯಾಸದ ಬಗ್ಗೆ ಬಿಡಿಸಿಟ್ಟರು. ಉಮೇಶ್ ಜಾಧವ್ ಮಾ.4 ರಂದು ನನ್ನ ಹಳ್ಳಿಗೆ ಬಂದು ರಾಜೀನಾಮೆ ನೀಡಿದರು. ಅವತ್ತು ಶಿವರಾತ್ರಿ ಸರ್ಕಾರಿ ರಜೆ. ಅವರ ರಾಜೀನಾಮೆ ಪತ್ರ ಆಧರಿಸಿ, ವಿವರಣೆ ಕೇಳಿ ಅವರಿಗೆ ಮತ್ತೊಂದು ಪತ್ರ ಬರೆದಿದ್ದೇನೆ. ವಿಪ್ ಉಲ್ಲಂಘನೆಗೂ,
ಇದಕ್ಕೂ ಸಂಬಂಧವಿಲ್ಲ ಎಂದರು.

Translate »