ಮೈಸೂರು ಜಿಪಂ 436 ಕೋಟಿ ರೂ. ಬಜೆಟ್
ಮೈಸೂರು

ಮೈಸೂರು ಜಿಪಂ 436 ಕೋಟಿ ರೂ. ಬಜೆಟ್

March 9, 2019

ಮೈಸೂರು: 2019-20ನೇ ಸಾಲಿಗೆ ಮೈಸೂರು ಜಿಲ್ಲಾ ಪಂಚಾಯ್ತಿಯು 435.91 ಕೋಟಿ ರೂಗಳ ಆಯ-ವ್ಯಯ ಮಂಡಿಸಿದೆ.

ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ತುರ್ತು ಸಭೆಯಲ್ಲಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಅವರು ಬಜೆಟ್ ಮಂಡನೆ ಮಾಡಿದ್ದು, 2019-20ನೇ ಸಾಲಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದ ನಂತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ವಿವಿಧ ಕಾರ್ಯಕ್ರಮಗಳಡಿ ಪ್ರಸಕ್ತ ಸಾಲಿನಲ್ಲಿ 1.302 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಜಿಲ್ಲಾ ಪಂಚಾಯ್ತಿ ವೇತನ ಬಾಬ್ತು 127 ಕೋಟಿ ರೂ ಹಾಗೂ ವೇತನೇತರ ಬಾಬ್ತಿಗೆ 308 ಕೋಟಿ ರೂ.ಗಳನ್ನು ಮೀಸಲಿರಿಸಿರುವುದರಿಂದ ಒಟ್ಟು 2019-20ನೇ ಸಾಲಿಗೆ 435.91 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.
ಕಳೆದ ವರ್ಷದ ಅನುದಾನಕ್ಕೆ ಹೋಲಿಸಿ ದಲ್ಲಿ ಪ್ರಸಕ್ತ ಸಾಲಿನಲ್ಲಿ 48 ಕೋಟಿ ರೂ (ಶೇ 12.42) ನಷ್ಟು ಆಯ-ವ್ಯಯದ ಗಾತ್ರ ಹೆಚ್ಚಾದಂತಾಗಿದೆ. ಶಿಕ್ಷಣ ಇಲಾಖೆಗೆ 15,842.99 ಲಕ್ಷ ರೂ.ಗಳನ್ನು ಮಧ್ಯಾ ಹ್ನದ ಬಿಸಿಯೂಟ, ಕ್ಷೀರಭಾಗ್ಯ ಕಾರ್ಯ ಕ್ರಮಗಳಿಗೆ ಒದಗಿಸಲಾಗಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿ ಯಾನದಡಿ 12 ಲಕ್ಷ ರೂ., 50 ಪ್ರೌಢ ಶಾಲೆಗಳ 358 ಶಿಕ್ಷಕರ ವೇತನಕ್ಕೆ 1,885 ಲಕ್ಷ ರೂ.ಗಳ ಸಹಾಯಧನ ಒದಗಿಸ ಲಾಗಿದೆ. ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ಗಳಿಗೆ ಶಾಲಾ ಶುಲ್ಕ ಮರುಪಾವತಿಗೆ 120 ಲಕ್ಷ ರೂ, 37 ಸರ್ಕಾರಿ ಶಾಲೆಗಳ ದುರಸ್ತಿಗಾಗಿ 130 ಲಕ್ಷ ರೂ., ಸಾರ್ವತ್ರಿಕ ಸಾಮಗ್ರಿ ಖರೀದಿಸಲು 110 ಲಕ್ಷ ರೂ., ಶಾಲಾ ಮಾತೆಯರ ನೇಮಕಾತಿ ಹಾಗೂ ವೇತನಕ್ಕೆ 550.97 ಲಕ್ಷ ರೂ.ಗಳನ್ನು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಪೂರೈ ಸಲಾಗಿದೆ.

ಅನುದಾನಿತ ಶಾಲೆಗಳ 1340 ಶಿಕ್ಷಕರ ವೇತನಕ್ಕೆ 4,742 ಲಕ್ಷ ರೂ., ಉಪ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಗಳ ಸಂಬಳಕ್ಕೆ 15,842 ಲಕ್ಷ ರೂ ವಯಸ್ಕರ ಶಿಕ್ಷಣ ಇಲಾಖೆಗೆ 41 ಲಕ್ಷ ರೂ., ಕ್ರೀಡಾ ಇಲಾಖೆ ವೇತನ ವೆಚ್ಚ 16 ಲಕ್ಷ ರೂ. ಸೇರಿ ಒಟ್ಟು 229.01 ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯ್ತಿಯು ಹಂಚಿಕೆ ಮಾಡಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ 34 ಲಕ್ಷ ರೂ., ಆರೋಗ್ಯ ಕೇಂದ್ರ ದುರಸ್ತಿ ಗಾಗಿ 135 ಲಕ್ಷ ರೂ., ವೇತನ ಹಾಗೂ ಇತರ ಬಾಬ್ತಿಗೆ ಒಟ್ಟು 8679.87 ಲಕ್ಷ ರೂ., ಆಯುಷ್ ಇಲಾಖೆ ಕಾರ್ಯ ಕ್ರಮಗಳಿಗೆ 575 ಲಕ್ಷ ರೂ., ಮಹಿಳೆ ಯರು, ಮಕ್ಕಳ ಪೌಷ್ಟಿಕ ಆಹಾರಕ್ಕೆ 125 ಲಕ್ಷ ರೂ., ವಿಶೇಷ ಚೇತನರು ಹಾಗೂ ವೃದ್ಧರ ಕಲ್ಯಾಣ ಕಾರ್ಯಕ್ರಮಗಳಿಗೆ 62.80 ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿದೆ.

ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲು 1792 ಲಕ್ಷ ರೂ., ಸರಳ-ಸಾಮೂಹಿಕ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ನೀಡಲು 3 ಲಕ್ಷ ರೂ., ಅಂತರ್ಜಾತಿ ವಿವಾಹಕ್ಕೆ 2 ಲಕ್ಷ ರೂ., ಮರು ಮದುವೆಯಾಗುವ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ವಿಧವೆಯರಿಗೆ ಪ್ರೋತ್ಸಾಹ ನೀಡಲು 15 ಲಕ್ಷ ರೂ.ಗಳನ್ನು ಪ್ರಸಕ್ತ ಸಾಲಿನಲ್ಲಿ ನಿಗದಿಗೊಳಿಸಲಾಗಿದೆ.

ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗೆ 377.35 ಲಕ್ಷ ರೂ., ಖಾಸಗಿ ಅನಾಥಾ ಲಯಗಳ ಭೋಜನಾ ವೆಚ್ಚ, ಹೊಲಿಗೆ ತರಬೇತಿ ಕೇಂದ್ರಗಳಿಗೆ 5,293 ಲಕ್ಷ ರೂ. ಮಂಜೂರು ಮಾಡಲು ನಿರ್ಧರಿಸ ಲಾಗಿದೆ. ಕ್ರೈಸ್ತ ಅಭಿವೃದ್ಧಿ ಯೋಜನೆ, ಶಾದಿ ಮಹಲ್ ನಿರ್ಮಾಣ, ಬಿದಾಯಿ ಭಾಗ್ಯ ಯೋಜನೆ, ವಿದ್ಯಾಸಿರಿ, ನರ್ಸಿಂಗ್ ತರಬೇತಿ ಭತ್ಯೆ, ಪಶುಪಾಲನಾ ಇಲಾಖಾ ವೆಚ್ಚಕ್ಕಾಗಿ ಈ ಭಾರಿ ಹೆಚ್ಚಿನ ಅನುದಾನ ಕೊಡಲಾಗುತ್ತಿದೆ.

ಮೀನುಗಾರಿಕೆ ಕಟ್ಟಡಗಳ ನಿರ್ಮಾಣ, ಸಲಕರಣೆಗಳ ಖರೀದಿ, ವಾಹನ, ತಕ್ಕಡಿ ಗಳನ್ನು ಖರೀದಿಸಲು ಫಲಾನುಭವಿಗಳಿಗೆ ಶೇ.25ರಷ್ಟು ಗರಿಷ್ಠ 30,000 ರೂ.ಗಳ ಸಹಾಯಧನ ನೀಡಲು ಉದ್ದೇಶಿಸ ಲಾಗಿದೆ. ಸಾಮಾಜಿಕ ಅರಣ್ಯ ಯೋಜನೆ ಯಡಿ ನೆಡುತೋಪು ಬೆಳೆಸಲು 3 ಕೋಟಿ ರೂ., ಸಿಬ್ಬಂದಿಗಳ ವಸತಿ ಗೃಹಗಳ ನಿರ್ಮಾಣ ಮತ್ತು ಹಳೇ ಕಟ್ಟಡಗಳ ದುರಸ್ತಿಗೆ 50 ಲಕ್ಷ ರೂ. ಗಳನ್ನು ನೀಡಲಾಗಿದೆ.

ತೋಟಗಾರಿಕೆಗೆ 809.26 ಲಕ್ಷ ರೂ., ರೇಷ್ಮೆ ಇಲಾಖೆಗೆ 762.87 ಲಕ್ಷ ರೂ., ಕೈಮಗ್ಗ ಮತ್ತು ಜವಳಿ ಇಲಾಖೆಗೆ 17.60 ಲಕ್ಷ ರೂ., ವೃತ್ತಿಪರ ಕುಶಲಕರ್ಮಿಗಳಿಗೆ ಸಲಕರಣೆ ಪೂರೈಸಲು ಅನುದಾನ ಮೀಸ ಲಿರಿಸಿದ್ದು, ಕೃಷಿ ಮಾರುಕಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು 25 ಲಕ್ಷ ರೂ., ಗ್ರಾಮೀಣ ಸಂಪರ್ಕ ರಸ್ತೆಗಳಿಗೆ 475 ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯ್ತಿಯು ಬಜೆಟ್‍ನಲ್ಲಿ ಒದಗಿಸಿದೆ. ಗ್ರಾಮೀಣಾಭಿ ವೃದ್ಧಿ ಯೋಜನೆಗಳಿಗೆ 569.80 ಲಕ್ಷ ರೂ., ಸಣ್ಣ ನೀರಾವರಿ ಮತ್ತು ಕೆರೆಗಳ ನಿರ್ವಹಣೆಗೆ 72.27 ಲಕ್ಷ ರೂ., ಕುಡಿ ಯುವ ನೀರು ಪೂರೈಕೆಗೆ 112.592 ಕೋಟಿ ರೂ.ಗಳನ್ನು ನಿಗದಿಗೊಳಿಸ ಲಾಗಿದ್ದು, ನರೇಗಾ ಯೋಜನೆಯಡಿ 16,276 ಕೋಟಿ ರೂ. ಅನುದಾನಕ್ಕೆ ಗ್ರಾಮ ಪಂಚಾಯ್ತಿಗಳಿಂದ ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಸ್ವಚ್ಛಭಾರತ ಅಭಿಯಾನ, ಘನತ್ಯಾಜ್ಯ ನಿರ್ವಹಣೆ, ಸಮುದಾಯ ಶೌಚಾಲಯ ಗಳು, ಗ್ರಾಮೀಣ ವಸತಿ ಯೋಜನೆ ಹಾಗೂ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಈ ಭಾರಿ ಆದ್ಯತೆ ನೀಡಲಾಗಿದೆ.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸಿಇಓ ಕೆ.ಜ್ಯೋತಿ, ಸದಸ್ಯರು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜನಪ್ರತಿನಿಧಿಗಳು, ಅಧಿಕಾರಿಗಳ ನಿರಾಸಕ್ತಿ ಕೋರಂ ಅಭಾವದಿಂದ ಮುಂದೂಡಿದ ಬಜೆಟ್ ಸಭೆ

ಮೈಸೂರು: ಸದಸ್ಯರ ಕೋರಂ ಅಭಾವದಿಂದಾಗಿ ಇಂದು ಬೆಳಿಗ್ಗೆ ನಿಗದಿಯಾಗಿದ್ದ ಮೈಸೂರು ಜಿಲ್ಲಾ ಪಂಚಾಯ್ತಿ ಬಜೆಟ್ ಮಂಡನೆ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು. ಜಿಲ್ಲಾ ಪಂಚಾಯ್ತಿಯಲ್ಲಿ 49 ಸದಸ್ಯರಿದ್ದು ಸಭೆ ನಡೆಯಲು ಕನಿಷ್ಠ 38 ಸದಸ್ಯರ ಸಂಖ್ಯಾಬಲ ಬೇಕು. ಬೆಳಿಗ್ಗೆ 11 ಗಂಟೆಗೆ ಕರೆದಿದ್ದ ಸಭೆಗೆ ಕೇವಲ 32 ಮಂದಿ ಮಾತ್ರ ಹಾಜರಾಗಿದ್ದರಿಂದ ಕೋರಂ ಅಭಾವ ಉಂಟಾದ ಕಾರಣ ಸಭೆಯನ್ನು 12 ಗಂಟೆಗೆ ಮುಂದೂಡಲಾಯಿತು.

ಆಗಲೂ ಕೋರಂ ಇಲ್ಲದ ಕಾರಣ, ಅಧ್ಯಕ್ಷೆ ಪರಿಮಳ ಶ್ಯಾಂ ಅವರು, ಸಭೆಯನ್ನು ಮಾರ್ಚ್ 11ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿದರಾದರೂ, ಅದಕ್ಕೆ ಆಕ್ಷೇಪಿಸಿದ ಸದಸ್ಯ ವೆಂಕಟಸ್ವಾಮಿ ಅವರು, ನೀವೇ ಫೋನ್ ಮಾಡಿ ಸದಸ್ಯರನ್ನು ಕರೆಸಿ ಇಂದೇ ಬಜೆಟ್ ಮಂಡಿಸಿ ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತೆ ಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಮಧ್ಯಾಹ್ನ 2 ಗಂಟೆಗಾದರೂ ಆರಂಭವಾಗುತ್ತದೆಂದು ಕಾದಿದ್ದ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಮತ್ತೆ ನಿರಾಸೆಯಾಯಿತು. ಕಡೆಗೆ ಮಧ್ಯಾಹ್ನ 2.45 ಗಂಟೆಗೆ 38 ಮಂದಿ ಸದಸ್ಯರ ಹಾಜರಾತಿ ಸಿಕ್ಕಿದ ಮೇಲೆ ಸಭೆ ಆರಂಭವಾಯಿತು. ಕಡೆಗೂ ಅಧ್ಯಕ್ಷರು 63 ಪುಟಗಳ ಆಯ-ವ್ಯಯವನ್ನು ಓದಿದರು.

ಬಜೆಟ್ ಮಂಡನೆಯಂತಹ ಮಹತ್ವದ ಸಭೆಗೂ ಹಾಜರಾಗದೆ ಜಿಲ್ಲಾ ಪಂಚಾಯ್ತಿ ಸದಸ್ಯರು ನಿರಾಸಕ್ತಿ ತೋರಿದರು. ಅದೇ ರೀತಿ ಅಧಿಕಾರಿಗಳೂ ಕೈ ಬೆರಳೆಣಿಕೆಯಷ್ಟು ಮಾತ್ರ ಹಾಜರಾಗಿದ್ದು ಕಂಡುಬಂದಿತು.

ಮಹಿಳಾ ದಿನಾಚರಣೆ: ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಇಓ ಮಹಿಳೆಯರೇ ಆಗಿರುವುದರಿಂದ ಜಿಲ್ಲಾ ಪಂಚಾಯ್ತಿ ಬಜೆಟ್ ಮಂಡನೆ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮಹಿಳಾ ಸದಸ್ಯರೆಲ್ಲರೂ ಸೇರಿ ಪಕ್ಷಭೇದ ಮರೆತು ಕೇಕ್ ಕತ್ತರಿಸಿ ಮಹಿಳಾ ದಿನವನ್ನು ಆಚರಿಸಿದರು.

Translate »