ಮೂವರು ಸಂಧಾನಕಾರರ  ನೇಮಿಸಿದ ಸುಪ್ರೀಂಕೋರ್ಟ್
ಮೈಸೂರು

ಮೂವರು ಸಂಧಾನಕಾರರ ನೇಮಿಸಿದ ಸುಪ್ರೀಂಕೋರ್ಟ್

March 9, 2019

ನವದೆಹಲಿ: ದೇಶದ ಅತೀ ದೊಡ್ಡ ವಿವಾದಾ ತ್ಮಕ ಅಯೋಧ್ಯೆ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಪರಿ ಹರಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಸಾಂವಿಧಾನಿಕ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಅಧ್ಯಾತ್ಮ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿ ಮೂವ ರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.

ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಫ್. ಎಮ್.ಖಲೀಫುಲ್ಲಾ, ರವಿಶಂಕರ್ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಾಂಚು ಅವರನ್ನು ಸಂಧಾನಕಾರರನ್ನಾಗಿ ನೇಮಿಸಿ ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸಿದೆ. ವಾರದೊ ಳಗೆ ಸಂಧಾನ ಪ್ರಕ್ರಿಯೆ ಆರಂಭಿಸಿ 2 ತಿಂಗಳೊಳಗೆ ಸಂಧಾನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. 4 ವಾರಗಳೊಳಗೆ ಮೊದಲ ವರದಿ ನೀಡಬೇಕು. ಫೈಜಾಬಾದ್‍ನಲ್ಲಿ ಸಂಧಾನ ಪ್ರಕ್ರಿಯೆ ನಡೆಯಬೇಕು. ಇವೆಲ್ಲವೂ ಗುಪ್ತ ವಾಗಿರಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಸಂಧಾ ನಕಾರರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಬಹುದು. ಆದರೆ, ಅವರಿಗೆ ಆದೇಶ ನೀಡುವ ಹಕ್ಕು ಇರುವುದಿಲ್ಲ. ಸಂಧಾನ ಸಭೆ ವಿಫಲವಾದರೂ ಸುಪ್ರೀಂಕೋರ್ಟ್ ತೀರ್ಪು ನೀಡಲೇಬೇಕು ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ಸಂಧಾನ ಸಮಿತಿಗೆ ರವಿಶಂಕರ್ ನೇಮಕ ಆದೇಶವನ್ನು ಅಖಿಲ ಹಿಂದೂ ಮಹಾಸಭಾ ಸಂಘಟನೆ ಸ್ವಾಗತಿಸಿದೆ. ಅವರ ನೇತೃತ್ವದಲ್ಲಿ ಸಂಧಾನ ಸಭೆ ಸಫಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಬುಧವಾರ ನ್ಯಾಯಾಲಯ ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಉತ್ತರಪ್ರದೇಶ ಸರ್ಕಾರ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದ ಪ್ರಸ್ತುತ ಸಂದರ್ಭದಲ್ಲಿ ಸಂಧಾನಕ್ಕೆ ಸೂಕ್ತವಲ್ಲ. ಇದು ಹಿಂದೂಗಳ ಭಾವನಾತ್ಮಕ ವಿಚಾರ ಎಂದು ವಾದ ಮಂಡಿಸಿತ್ತು. ಪಂಚ ಸದಸ್ಯ ಪೀಠದ ನ್ಯಾಯ ಮೂರ್ತಿ ಎಸ್.ಎ.ಬೊಬ್ಡೆ, ನಮಗೆ ಇತಿಹಾಸ ಹೇಳಲು ಬರಬೇಡಿ. ನಮಗೂ ಇತಿಹಾಸ ಗೊತ್ತಿದೆ. ಈ ಪ್ರಕರಣ ಸೂಕ್ಷ್ಮವಾಗಿದ್ದು, ಮಧ್ಯಸ್ಥಿಕೆ ಮೂಲಕ
ಬಗೆಹರಿಸಿಕೊಳ್ಳಬೇಕೋ, ಬೇಡವೋ ಎಂಬುದನ್ನು ನ್ಯಾಯಾ ಲಯ ತೀರ್ಮಾನಿಸುತ್ತದೆ ಎಂದು ಹೇಳಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಂಕರ್ ಗುರೂಜಿ, “ದೀರ್ಘಾವಧಿಯ ವಿವಾದಕ್ಕೆ ಒಂದು ಸುಖಾಂತ್ಯ ನೀಡಲು ಬಯಸಿದ್ದೇವೆ. ಕನಸನ್ನು ನನಸು ಮಾಡುವ ಕಾಲ ಬಂದಿದೆ. ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳಬೇಕು. ನಮ್ಮ ಗುರಿಯೆಡೆಗೆ ನಾವು ಸಾಗಬೇಕಿದೆ,” ಎಂದಿದ್ದಾರೆ.

ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸಿದ್ದ ರಾಜೀವ್ ಧವನ್, ಮುಸ್ಲಿಂ ಅರ್ಜಿದಾರರಿಗೆ ಸಂಧಾನ ಅಥವಾ ರಾಜೀ ಮೂಲಕ ಎಲ್ಲ ಅರ್ಜಿದಾರರು ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಒಪ್ಪಿಗೆ ಇದೆ,” ಎಂದಿದ್ದರು. ಹಿಂದೂ ಮಹಾಸಭಾ ಪರ ವಕೀಲ ರಾದ ಸಿ.ಎಸ್.ವೈದ್ಯನಾಥನ್, ರಾಮಜನ್ಮ ಭೂಮಿ ಪ್ರಕರಣ ದೇಗುಲ ನಿರ್ಮಾಣದ ಸಂಧಾನೇತರ ವಿಷಯ. ಇದು ಹಿಂದೂ ಗಳ ಭಾವನಾತ್ಮಕ ವಿಚಾರ. ಬೇಕಿದ್ದರೆ ನಾವೇ ಎಲ್ಲರೂ ಹಣ ಹೂಡಿ ಬೇರೊಂದು ಜಾಗದಲ್ಲಿ ಮಸೀದಿ ಕಟ್ಟಲು ಸಹಕರಿಸು ತ್ತೇವೆ. ಆದರೆ, ಮಧ್ಯಸ್ಥಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು. ಮಾ.7ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಾದಗಳನ್ನು ಆಲಿಸಿತ್ತು. ನಂತರ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಸಂಧಾನದ ಆಯ್ಕೆ ನೀಡಿದ್ದ ನ್ಯಾಯಪೀಠ: ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ಮಧ್ಯಸ್ಥಿಕೆ ಮೂಲಕ ಈ ವಿವಾದವನ್ನು ಬಗೆಹರಿಸುವುದು ಉತ್ತಮ ಎಂದು ನ್ಯಾ. ಎಸ್.ಎ.ಬೊಬ್ಡೆ ಅಭಿಪ್ರಾಯಪಟ್ಟಿದ್ದರು. ವಿವಾದಿತ ಸ್ಥಳ ದಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಹಿಂದೂಗಳು ಆಗ್ರಹಿಸಿದ್ದರು. ಇದು ನಂತರ ರಾಜಕೀಯದ ದಾಳವಾಗಿ ಬದಲಾ ಗಿತ್ತು. ಹೀಗಾಗಿ, ಈ ಪ್ರಕರಣ ಇನ್ನೂ ಇತ್ಯರ್ಥವಾಗದೆ ಉಳಿದಿದೆ.

ಸಂಧಾನ ಸಮಿತಿ ಸದಸ್ಯರಿವರು
ಹೊಸದಿಲ್ಲಿ: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಮೂವರು ಸಂಧಾನಕಾರರ ಸಮಿತಿಯನ್ನು ನೇಮಿಸಿದೆ.

ನ್ಯಾ. ಫಕೀರ್ ಮೊಹಮ್ಮದ್ ಇಬ್ರಾಹಿಂ ಖಲೀಫುಲ್ಲಾ: ಕಲೀಫುಲ್ಲಾ ಅವರು 2016ರ ಜುಲೈ 22ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತ ರಾದರು. 5 ವರ್ಷಗಳ ಕಾಲ ಅವರು ಸುಪ್ರೀಂ ಕೋರ್ಟ್‍ನಲ್ಲಿ ಸೇವೆ ಸಲ್ಲಿಸಿದ್ದರು. ಅದಕ್ಕೆ ಮುಂಚೆ 2011ರ ಸೆಪ್ಟೆಂಬರ್ 18ರಂದು ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಸಂಧಾನ ಸಮಿತಿ ಮುಖ್ಯಸ್ಥರಾಗಿ ತಮ್ಮನ್ನು ನೇಮಿಸಿ ಕೋರ್ಟ್ ಆದೇಶ ನೀಡಿದ ಬಳಿಕ ಪ್ರತಿಕ್ರಿಯಿಸಿದ ಖಲೀಫುಲ್ಲಾ, ವಿವಾದವನ್ನು ‘ಸರ್ವಾನುಮತ’ದಿಂದ ಬಗೆಹರಿಸಲು ಯತ್ನಿಸುವುದಾಗಿ ತಿಳಿಸಿದರು.

ನ್ಯಾ. ಖಲೀಫುಲ್ಲಾ ಹಲವು ಪ್ರಮುಖ ತೀರ್ಪುಗಳನ್ನು ನೀಡಿದ್ದರು. ಚೆನ್ನೈ ಮಹಾ ನಗರಪಾಲಿಕೆಯ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿ ಅವರು ಮಹತ್ವದ ತೀರ್ಪು ನೀಡಿದ್ದರು. ಚೆನ್ನೈ ಪಾಲಿಕೆ ಚುನಾವಣೆಯ 99 ವಾರ್ಡ್‍ಗಳ ಫಲಿತಾಂಶವನ್ನು ಅವರು ವಜಾಗೊಳಿಸಿದ್ದರು. ಬಳಿಕ ಮೂವರು ನ್ಯಾಯಾಧೀಶರ ಪೀಠಕ್ಕೆ ಈ ಪ್ರಕರಣ ವಹಿಸಲಾಗಿತ್ತು. ಆ ಪೀಠವೂ ನ್ಯಾ..ಖಲೀಫುಲ್ಲಾ ತೀರ್ಪನ್ನೇ ಎತ್ತಿ ಹಿಡಿದಿತ್ತು.
ಶ್ರೀ ಶ್ರೀ ರವಿಶಂಕರ್: ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ, ಆಧ್ಯಾ ತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಸಂಧಾನ ಸಮಿತಿಯ ಎರಡನೇ ಸದಸ್ಯರು. 25ಕ್ಕೂ ಹೆಚ್ಚು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಅಯೋಧ್ಯೆ ಭೂ ವಿವಾದ ಬಗೆಹರಿಸಲು ರವಿಶಂಕರ್ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜತೆ ಈಗಾಗಲೇ ಕೆಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. 2017ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಅವರು, ಒಮ್ಮತದ ಇತ್ಯರ್ಥಕ್ಕಾಗಿ ಹಲವು ಮುಖಂಡರ ಜತೆ ಸರಣಿ ಸಭೆ ನಡೆಸಿದ್ದರು. `ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಕಾಪಾಡಲು ದೀರ್ಘ ಕಾಲದ ಈ ವಿವಾದಕ್ಕೆ ಮಂಗಳ ಹಾಡಲೇಬೇಕಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು’ ಎಂದು ಶ್ರೀ ಶ್ರೀ ರವಿಶಂಕರ್ ಪ್ರತಿಕ್ರಿಯಿಸಿದರು.

ಶ್ರೀರಾಮ್ ಪಾಂಚು: ಸಂಧಾನ ಸಮಿತಿಯ 3ನೇ ಸದಸ್ಯರಾಗಿ ಹಿರಿಯ ವಕೀಲ ಶ್ರೀರಾಮ್ ಪಾಂಚು ನೇಮಕಗೊಂಡಿದ್ದಾರೆ. ಮಧ್ಯಸ್ಥಿಕೆದಾರರ ಮಂಡಳಿ (ಮೀಡಿ ಯೇಶನ್ ಚೇಂಬರ್) ಸ್ಥಾಪಕರಾಗಿರುವ ಅವರು, ಹಲವು ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿದ ಕೀರ್ತಿ ಹೊಂದಿದ್ದಾರೆ. ಪ್ರಸ್ತುತ ಅವರು ಭಾರತೀಯ ಮಧ್ಯಸ್ಥಿಕೆ ದಾರರ ಸಂಘದ ಅಧ್ಯಕ್ಷರಾಗಿದ್ದಾರೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಸಂಸ್ಥೆಯ ನಿರ್ದೇ ಶಕರೂ ಹೌದು. 2005ರಲ್ಲಿ ಕೋರ್ಟ್ ಮಾನ್ಯತೆ ಪಡೆದ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸಿದರು. ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಪಾಂಚು ಅವರ ಮಧ್ಯಸ್ಥಿಕೆ ಹೆಸರು ವಾಸಿಯಾಗಿದೆ. ದೇಶಾದ್ಯಂತ ಹಲವು ವಾಣಿಜ್ಯ, ಕಾಪೆರ್Çರೇಟ್ ಮತ್ತು ಗುತ್ತಿಗೆಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿದ ಖ್ಯಾತಿ ಹೊಂದಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವೆ 500 ಚದರ ಕಿ.ಮೀ ಭೂ ವಿವಾದ ಬಗೆಹರಿಸಲು ಪಾಂಚು ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್ ನೇಮಿಸಿತ್ತು. ಮುಂಬಯಿಯಲ್ಲಿ ಪಾರ್ಸಿ ಸಮುದಾಯದ ಸಾರ್ವಜನಿಕ ವಿವಾದವೊಂದನ್ನು ಬಗೆಹರಿಸುವಲ್ಲೂ ಮಹತ್ವದ ಪಾತ್ರ ವಹಿಸಿದ್ದರು.

Translate »