ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಡುಗೆ `ರಾಮ’ ಎಂದರೆ ಮಾನವ ಮತ
ಮೈಸೂರು

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಡುಗೆ `ರಾಮ’ ಎಂದರೆ ಮಾನವ ಮತ

February 11, 2021

ಮೈಸೂರು,ಫೆ.10(ಆರ್‍ಕೆಬಿ)- ಅಯೋ ಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೈಸೂರಿನ ಗಣಪತಿ ಆಶ್ರಮದ ಅವ ಧೂತ ದತ್ತಪೀಠದ ವತಿಯಿಂದ 10 ಲಕ್ಷ ರೂ.ಗಳ ಚೆಕ್ ಅನ್ನು ಗಣಪತಿ ಸಚ್ಚಿದಾ ನಂದ ಸ್ವಾಮೀಜಿ ಅವರು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯ ದರ್ಶಿ ಬಸವರಾಜು ಅವರಿಗೆ ನೀಡಿದರು.

ಆಶ್ರಮದ ದತ್ತಾತ್ರೇಯ ಸನ್ನಿಧಿಯಲ್ಲಿ ಬುಧವಾರ ಚೆಕ್ ವಿತರಿಸಿದ ಬಳಿಕ ಮಾತ ನಾಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, `ರಾ’ ಎಂದರೆ ಎಲ್ಲಾ ಪಾಪವ ಅನುಭವಿ ಸುವ ಎಂದರ್ಥ. `ಮ’ ಎಂದರೆ ಮತ್ತೊ ಳಗೆ ಬರದಿರಲಿ ಎಂದರ್ಥ. ರಾಮ ಎನ್ನುವ ಶಬ್ದ, ಆನಂದ, ಸುಖ ತರುವಂಥದ್ದು, ರಾಮ ನಾಮವೇ ಒಂದು ಅತ್ಯದ್ಭುತ ಎಂದರು.

ರಾಮ ನಮಗೆಲ್ಲ ಆದರ್ಶಮೂರ್ತಿ. ಮನುಷ್ಯರಾಗಿ ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟಿದ್ದು ರಾಮ, ತಮ್ಮನಾಗಿ, ಲಕ್ಷ್ಮಣ, ಭರತ, ಶತೃಘ್ನರು ಹೇಗಿರಬೇಕು? ಸೀತಾ ಮಾತೆ, ಮಕ್ಕಳು, ಮಂತ್ರಿಗಳು, ಸ್ನೇಹಿತರು ಬದು ಕಿದ್ದ ವಿಧಾನ ಹೇಗೆ? ಪ್ರಜೆಗಳು ಸುಖವಾಗಿದ್ದ ಪರಿ ಹೇಗೆ? ಈ ಎಲ್ಲವನ್ನು ರಾಮಾ ಯಣ ನಮಗೆ ಹೇಳಿಕೊಟ್ಟಿದೆ ಎಂದರು.

ರಾಮಾಯಣ ಎಂಬುದು ಕೇವಲ ಹಿಂದೂ ಮತವಷ್ಟೇ ಅಲ್ಲ. ರಾಮ ಎಂಬುದು ಮಾನವ ಮತಕ್ಕೆ ಸಂಬಂಧಿಸಿದ್ದು, ಅತ್ಯ ದ್ಭುತವಾದ ರೀತಿಯಲ್ಲಿ ಅಯೋಧ್ಯೆಯಲ್ಲಿ ನೆಲೆಸಿದ್ದಾನೆ. ಸುಮಾರು ವರ್ಷಗಳಿಂದ ಪರಿಶ್ರಮ ಪಡುತ್ತಿದ್ದ ದೊಡ್ಡ ಸಂಕಲ್ಪ ಇಂದು ನೆರವೇರುತ್ತಿದೆ. ಎಲ್ಲಾ ಜಾತಿಯಲ್ಲೂ ರಾಮಭಕ್ತರಿದ್ದಾರೆ. ಕೇವಲ ಹಿಂದುಗಳೇ ಎಂದುಕೊಳ್ಳಬಾರದು. ಎಲ್ಲರೂ ಇದ್ದಾರೆ. ರಾಮಭಕ್ತರಿಲ್ಲದ ಜಾಗವೇ ಇಲ್ಲ ಎಂದ ಅವರು, ರಾಮಮಂದಿರ ನಿರ್ಮಾಣ ಕಾರ್ಯ ಅತ್ಯಂತ ಶೀಘ್ರವಾಗಿ ನಡೆಯಲಿ. ರಾಮ ಜನ್ಮ ಭೂಮಿಯ ಕಥೆ ಕೇಳಿದ್ದೇವೆ. ಅಲ್ಲಿಗೆ ಯಾತ್ರೆಗೆ ಹೋಗಿ ನಮ್ಮ ಜೀವನವವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗಣಪತಿ ಆಶ್ರಮದ ಟ್ರಸ್ಟಿ ಎಂ.ರಾಜೇಂದ್ರ ಇನ್ನಿ ತರರು ಉಪಸ್ಥಿತರಿದ್ದರು.

Translate »