ಮೈಸೂರು

ಪ್ರತಿಭಟನೆಗಳ ಸರಣಿ; ಹಸಿರು ಶಾಲಿಗೆ ಬಲು ಬೇಡಿಕೆ

February 11, 2021

ಮೋಹನ್ ಕಾಯಕ

ಮೈಸೂರು, ಫೆ.10- ಕಳೆದ ಒಂದು ತಿಂಗಳಿಂದ ರೈತರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಹಸಿರು ಶಾಲುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ರೈತರ ಹೆಗಲ ಮೇಲೆ ರಾರಾಜಿಸುವ ಹಸಿರು ಶಾಲಿಗೆ ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ರೈತ ಮುಖಂ ಡರು ಇತ್ತೀಚೆಗೆ ನಡೆದ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ, ನಿನ್ನೆಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಗ್ರೀನ್ ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೆ ಒಳಗಾದ ಠೇವಣಿದಾರರ ಪ್ರತಿಭಟನೆ ಸೇರಿದಂತೆ ಹಲವು ಪ್ರತಿಭಟನೆಗಳ ನೇತೃತ್ವ ವನ್ನು ವಹಿಸಿಕೊಳ್ಳುತ್ತಿರುವುದು ಹಸಿರು ಶಾಲಿಗೆ ತಾನಾಗಿ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.

ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪನೆಯಾದಾಗಿ ನಿಂದ ರೈತರು ತಮ್ಮ ಹೆಗಲ ಮೇಲೆ ಹಸಿರು ಶಾಲು ಬಳಸುವ ಪರಿಪಾಠ ಬೆಳೆದು ಬಂದಿದ್ದು, ಇಂದು ರಾಜ ಕೀಯ ನಾಯಕರು ಕೂಡ ಹಸಿರು ಶಾಲು ಹಾಕಿಕೊ ಳ್ಳಲು ಮುಂದಾಗುತ್ತಿದ್ದಾರೆ. ದಿನೇ ದಿನೆ ಹಸಿರು ಶಾಲಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದ್ದು, ಮಾರುಕಟ್ಟೆಗಳಿಗೆ ಹಸಿರು ಶಾಲುಗಳ ದಾಸ್ತಾನು ಬಂದ ಕೆಲವೇ ದಿನಗಳಲ್ಲಿ ಮಾರಾಟವಾಗುವ ವಾತಾವರಣ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಮೈಸೂರು ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ನಗರವಾಗಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ರೈತರ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಮೈಸೂರಿನಲ್ಲಿ ಹಸಿರು ಶಾಲುಗಳನ್ನು ಕೊಂಡುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಂದೇ ದಿನದಲ್ಲಿ 100-150 ಹಸಿರು ಶಾಲುಗಳ ಮಾರಾಟವಾಗುತ್ತಿರುವುದು ಹಸಿರು ಶಾಲಿ ಗಿರುವ ಪ್ರಾಮುಖ್ಯತೆಯನ್ನು ಹೆಚ್ಚುವಂತೆ ಮಾಡಿದೆ.

ಗುಣಮಟ್ಟಕ್ಕೆ ತಕ್ಕಂತೆ ಕನಿಷ್ಠ 60 ರೂ.ನಿಂದ 350 ರೂ.ವರೆಗಿನ ಹಸಿರು ಶಾಲುಗಳಿವೆ. ಕಳೆದ ಒಂದು ತಿಂಗಳಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಹಸಿರು ಶಾಲುಗಳು ಮೈಸೂರಿನಲ್ಲಿಯೇ ಮಾರಾಟವಾಗಿಯೇ. ನಿನ್ನೆ ಒಬ್ಬರೇ 30 ಹಸಿರು ಶಾಲುಗಳನ್ನು ಖರೀದಿ ಮಾಡಿ ದರು. ಇಂದು ಕೂಡ ಬೆಳಿಗ್ಗೆಯಿಂದ ಮೂರ್ನಾಲ್ಕು ಮಂದಿ ಕೇಳಿದ್ದಾರೆ. ಆದರೆ ಹಸಿರು ಶಾಲುಗಳು ಖಾಲಿಯಾಗಿವೆ. ಮತ್ತೆ ದಾಸ್ತಾನು ಬರುವವರೆಗೂ ಕಾಯಬೇಕು ಎಂದು ನಗರದ ಗಾಂಧಿ ವೃತ್ತದಲ್ಲಿರುವ ಭಾವಸಾರ್ ಕುಮಾರ್ ಟೆಕ್ಸ್‍ಟೈಲ್ಸ್‍ನ ಮಾಲೀಕ ಜೈ ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇದೊಂದು ಸೀಸನ್: ಕಳೆದು ಒಂದು ತಿಂಗಳಿಂದ ಹಸಿರು ಶಾಲುಗಳ ಮಾರಾಟ ಹೆಚ್ಚಾಗಿದ್ದು, ಒಂದು ರೀತಿಯ ಸೀಸನ್ ಆಗಿದೆ. ನಮ್ಮಲ್ಲಿಯೂ ಸ್ಟಾಕ್ ಇಲ್ಲ. ಹಸಿರು ಶಾಲು ಗಳು ತಮಿಳುನಾಡಿನ ತಿರುಪೂರ್‍ನಲ್ಲಿ ತಯಾರಾಗ ಲಿದ್ದು, ಅಲ್ಲಿಂದ ಸ್ಟಾಕ್ ಬರಬೇಕು. ಒಂದು ವಾರದಿಂ ದಲೂ ಹಲವು ಗ್ರಾಹಕರು ಕೇಳುತ್ತಿದ್ದಾರೆ ಎಂದು ಹೋಲ್‍ಸೇಲ್ ಹಸಿರು ಶಾಲು ವ್ಯಾಪಾರಿ ಕಲ್ಪೇಶ್ ತಿಳಿಸಿದರೆ, ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಇತ್ತೀಚೆಗೆ ಹಸಿರು ಶಾಲುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮಕ್ಕಾಜಿ ಚೌಕದ ಬಟ್ಟೆ ಅಂಗಡಿ ವ್ಯಾಪಾರಿ ಗಂಗಾಧರ್ ಹೇಳಿದರು.

Translate »