ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಪ್ರಜಾ ಪಾರ್ಟಿ ಆಗ್ರಹ
ಮೈಸೂರು

ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಪ್ರಜಾ ಪಾರ್ಟಿ ಆಗ್ರಹ

February 12, 2021

ಮೈಸೂರು, ಫೆ.11(ಎಂಟಿವೈ)- ಹೆಚ್ಚುತ್ತಿರುವ ಜನಸಂಖ್ಯೆ, ಮೈಸೂರು ವೇಗವಾಗಿ ಬೆಳೆಯುತ್ತಿರುವುದರಿಂದ ಕಕ್ಷಿದಾರರ ಅನುಕೂಲಕ್ಕಾಗಿ ಮೈಸೂರಲ್ಲಿ ವಿಭಾಗೀಯ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯಾಧ್ಯಕ್ಷ ವಕೀಲ ಬಿ.ಶಿವಣ್ಣ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ 57 ಸಾವಿರ ಕ್ರಿಮಿನಲ್, 50 ಸಾವಿರ ಸಿವಿಲ್ ಪ್ರಕರಣ ಬಾಕಿ ಇವೆ. ಹಲವು ಕಕ್ಷಿ ದಾರರು ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸಿದರೆ ಮೈಸೂರು, ಮಂಡ್ಯ, ಚಾ.ನಗರ, ಕೊಡಗು, ಹಾಸನ ಜಿಲ್ಲೆಗಳ ಜನರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉಚ್ಛಾಟನೆ: ಈ ಹಿಂದೆ ಪಕ್ಷದ ಮೈಸೂರು ನಗರಾಧ್ಯಕ್ಷರಾಗಿದ್ದ ವ್ಯಕ್ತಿ ವಿರುದ್ಧ ದೂರು ಕೇಳಿ ಬಂದಿದ್ದರಿಂದ ನೋಟಿಸ್ ನೀಡಲಾಗಿತ್ತು. ಆದರೆ ಉತ್ತರ ನೀಡದೆ ಪಕ್ಷದ ಮುಖಂಡರಿಂದ ಅಂತರ ಕಾಯ್ದುಕೊಂಡಿದ್ದರಿಂದ ಪಕ್ಷದಿಂದ ಉಚ್ಛಾಟಿಸಲಾಗಿದೆ. ನೂತನ ನಗರಾಧ್ಯಕ್ಷರಾಗಿ ಪಿ.ಉಮೇಶ್, ನಗರ ಕಾರ್ಯದರ್ಶಿಯಾಗಿ ಜಗದೀಶ್ ನೇಮಕವಾಗಿದೆ ಎಂದರು. ಪಕ್ಷದ ಸಂಚಾಲಕ ನಾರಾಯಣ್, ಶಿಸ್ತು ಸಮಿತಿ ಅಧ್ಯಕ್ಷ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.

Translate »