ಲೋಕಸಭಾ ಚುನಾವಣೆ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಹಾಸನ

ಲೋಕಸಭಾ ಚುನಾವಣೆ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

March 10, 2019
  • 6,000 ಯುವ ಮತದಾರರು
  • 8,000 ವಿಕಲಚೇತನ ಮತದಾರರ ನೋಂದಣಿ ಬಾಕಿ
  • ಜಿಲ್ಲೆಯಲ್ಲಿ 20 ಕಡೆ ಚೆಕ್‍ಪೋಸ್ಟ್ ಸ್ಥಾಪನೆ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಬೇಕಾಗಿದ್ದು ಇಡೀ ಜಿಲ್ಲಾಡಳಿತ ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳು ವ್ಯವಸ್ಥಿತ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮತದಾರರ ನೋಂದಣಿ ಮತ್ತು ಜಾಗೃತಿ ಚಟುವಟಿಕೆಗಳನ್ನು ಚುರುಕು ಗೊಳಿಸುವುದು ಹಾಗೂ ಮತಗಟ್ಟೆಗಳ ಸುಸ್ಥಿತಿ ಸೇರಿದಂತೆ ಪರಿಶೀಲನೆ ಚುನಾವಣೆ ಪೂರ್ವ ತಯಾರಿ ಕುರಿತು ಸಿದ್ಧತಾ ಪರಿ ಶೀಲನಾ ಸಭೆ ನಡೆಸಿದ ಅವರು, ಎಲ್ಲಾ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಅತ್ಯಂತ ಜಾಗರೂಕತೆಯಿಂದ ನಡೆಸ ಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಇನ್ನೂ 6000 ಯುವ ಮತದಾರರು ಹಾಗೂ 8000 ವಿಕಲ ಚೇತನ ಮತದಾರರ ನೋಂದಣಿ ಬಾಕಿ ಇದ್ದು, ಶೀಘ್ರವಾಗಿ ಅದನ್ನು ಪರಿಣಾಮ ಕಾರಿ ಕ್ರಮಗಳ ಮೂಲಕ ಶೇ. 100ರಷ್ಟು ಗುರಿಸಾಧನೆ ಮಾಡಬೇಕು. ವಿಕಲಚೇತ ನರು ಇರುವ ಪ್ರತಿ ಮತಗಟ್ಟೆಯಲ್ಲಿ ಸಂಚಾರಿ ಯೋಜನೆ ಹಾಗೂ ಗಾಲಿ ಕುರ್ಚಿ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಂದು ಮತಗಟ್ಟೆಗಳಿಗೆ ಸಣ್ಣಪುಟ್ಟ ದುರಸ್ತಿಗಳ ಅಗತ್ಯವಿದ್ದರೆ ಕೂಡಲೇ ಪೂರ್ಣಗೊಳಿಸಿ ತಹಸೀಲ್ದಾರರು ಎಲ್ಲವನ್ನು ಪರಿಶೀಲಿಸಿ ಸುಸ್ಥಿತಿ ಖಾತರಿ ಪಡಿಸಿಕೊಳ್ಳಬೇಕು. ಮತದಾರರ ಜಾಗೃತಿ ಚಟುವಟಿಕೆಗಳು ಪ್ರತಿಯೊಂದು ಗ್ರಾಮ ದಲ್ಲೂ ನಡೆಯಬೇಕು. ಇದಕ್ಕೆ ವ್ಯವಸ್ಥಿತ ಪ್ರಚಾರವನ್ನು ನೀಡಬೇಕು. ಬಹುಮುಖ ಹಾಗೂ ಬಹು ಮಾಧ್ಯಮ ಪ್ರಚಾರಾಂದೋ ಲನವನ್ನು ನಡೆಸಬೇಕಾಗಿದೆ ಎಂದರು.

ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಹಾಗೂ ವಿವಿ ಪ್ಯಾಟ್‍ಗಳ ಬಳಕೆಯ ಬಗ್ಗೆ ಪರಿಚಯಾತ್ಮಕ ಚಟುವಟಿಕೆ ನಡೆಸಬೇಕು. ಜಿಲ್ಲಾ ಮಟ್ಟದಲ್ಲಿ ಸಿಇಓ ನೇತೃತ್ವದಲ್ಲಿ ಹಾಗೂ ತಾಲೂಕು ಮಟ್ಟದ ತಹಸೀ ಲ್ದಾರ್ ಹಾಗೂ ಇಓ ನೇತೃತ್ವದಲ್ಲಿ ಚಟುವ ಟಿಕೆಗಳು ನಡೆಯಬೇಕು ಎಂದು ತಿಳಿಸಿದರು.

ಮತಗಟ್ಟೆಗಳಲ್ಲಿ ಸಂವಹನ ಯೋಜನೆ ಗಳನ್ನು ರೂಪಿಸಬೇಕು ಯಾವುದೇ ಸ್ಥಿರ ಅಥವಾ ಸಂಚಾರಿ ದೂರವಾಣಿ ಸಂಪ ರ್ಕವೇ ಇಲ್ಲದ ಗ್ರಾಮಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸಬೇಕು. ತಾಲೂಕು ಹಂತ ದಲ್ಲಿ ಚುನಾವಣಾ ತರಬೇತಿಗಳನ್ನು ಅತ್ಯಂತ ಎಚ್ಚರಿಕೆಯಿಂದ ನೀಡಬೇಕು ಎಂದರು.

ಸೂಕ್ಷ್ಮ ಹಾಗೂ ಸಮಸ್ಯಾತ್ಮಕ ಮತಗಟ್ಟೆ ಗಳಿಗೆ ತಾವು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಜಂಟಿ ಯಾಗಿ ಭೇಟಿ ನೀಡಿ ಪರಿಶೀಲಿಸಲಾಗು ವುದು. ಜಿಲ್ಲೆಯಲ್ಲಿ 20 ಕಡೆಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗುವುದು ಅಗತ್ಯವಿರುವ ಕಡೆಗಳಲ್ಲೂ ವಿಡಿಯೋ ಕ್ಯಾಮೆರಾ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ವಿಜಯ್‍ಪ್ರಕಾಶ್ ಮಾತನಾಡಿ, ಮತದಾರರ ಜಾಗೃತಿ ನಿರಂತರ ಪ್ರಕ್ರಿಯೆ. ಎಲ್ಲಾ ಇಲಾಖೆಗಳು ತಮ್ಮ ದೈನಂದಿನ ಕಾರ್ಯದ ಜೊತೆಗೆ ಇದನ್ನೂ ಮಾಡ ಬಹುದಾಗಿದೆ. ತಮ್ಮ ಸಂಪರ್ಕಕ್ಕೆ ಬರುವ ರೈತರು, ಮಹಿಳೆಯರು ಸಾರ್ವಜನಿಕರಿಗೆ ಮತದಾನದ ಮಹತ್ವ, ನೈತಿಕ ಮತದಾನ ಹಾಗೂ ಮತದಾನದ ವಿಧಾನದ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಹೊಸ ನೋಂದಣಿಗೂ ಕ್ರಮ ವಹಿಸಬಹು ದಾಗಿದೆ ಎಂದು ತಿಳಿಸಿದರು.

ಚುನಾವಣಾ ವ್ಯವಸ್ಥೆಯಲ್ಲಿ ಸ್ವೀಪ್ ಚಟುವಟಿಕೆ ಅತ್ಯಂತ ಪ್ರಮುಖವಾಗಿದ್ದು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದರಲ್ಲಿ ಸಮರ್ಪಕವಾಗಿ ತೊಡಗಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗ ಳಾದ ಡಾ.ಎ.ಎನ್.ಪ್ರಕಾಶ್‍ಗೌಡ ಮಾತ ನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಜಂಟಿ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಬೇಕು. ಚುನಾವಣಾ ಸೌಹಾರ್ದ ಜಾಗೃತಿ ಸಭೆಗಳನ್ನು ನಡೆಸಿ ನೈತಿಕ ಮತ ದಾನದ ಬಗ್ಗೆ ಮನವರಿಕೆ ಮಾಡಿಕೊಡ ಬೇಕಿದೆ ಎಂದರು.
ರೌಡಿಶೀಟರ್‍ಗಳು ಹಾಗೂ ಈ ಹಿಂದೆ ಚುನಾವಣೆ ಅಪರಾಧದಲ್ಲಿ ತೊಡಗಿದ ಬಗ್ಗೆ ಗುರುತಿಸಲ್ಪಟ್ಟವರನ್ನು ಒಟ್ಟಿಗೆ ಕರೆಸಿ ಈ ಬಾರಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡದಂತೆ ಹಾಗೂ ಯಾವುದೇ ಅಕ್ರಮ ಗಳಿಗೆ ಕಾರಣರಾಗದಂತೆ ಎಚ್ಚರಿಕೆ ನೀಡಿ ಕಳಿಸಬೇಕಾಗಿದೆ. ತಹಸೀಲ್ದಾರರು ತಿಳಿ ಸುವ ದಿನದಂದು ಆಯಾಯ ತಾಲೂಕು ಗಳಲ್ಲಿ ಈ ಪ್ರಕ್ರಿಯೆ ನಡೆಸಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರು ತಾಲೂಕು ಹಂತದಲ್ಲಿ ಆಗಬೇಕಿರುವ ಕ್ರಮಗಳ ಬಗ್ಗೆ ಹಾಗೂ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿ ಸಲಹೆಗಳನ್ನು ನೀಡಿದರು.

ಹಾಸನ ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್.ನಾಗರಾಜ್, ಸಕಲೇಶಪುರ ಉಪವಿಭಾಗಾಧಿಕಾರಿ ಕವಿತಾ ರಾಜ ರಾಮ್ ತಮ್ಮ ವೃತ್ತಿಯಲ್ಲಿ ಆಗಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಪ್ರೊಬೆಷನರಿ ಐಎಎಸ್ ಅಧಿ ಕಾರಿ ಎಂ.ಪ್ರಿಯಾಂಗ, ನಗರಸಭೆ ಆಯುಕ್ತ ಪರಮೇಶ್, ವಿವಿಧ ಡಿವೈಎಸ್‍ಗಳು, ವಿವಿಧ ಇಲಾಖಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವಿವಿಧ ತಾಲೂಕು ತಹ ಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

ವ್ಯವಸ್ಥಿತ ಮತ್ತು ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ನೀಡಲಾಗುವುದು. ಎಲ್ಲಾ ಅಧಿಕಾರಿ ಸಿಬ್ಬಂದಿ ಅತ್ಯಂತ ಜಾಗೃತಿಯಿಂದ ಹಾಗೂ
ಭದ್ರತೆಯಿಂದ ಕೆಲಸ ಮಾಡಬೇಕು
-ಅಕ್ರಂಪಾಷ, ಜಿಲ್ಲಾಧಿಕಾರಿ

Translate »