ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ: ಸುಮಲತಾ ಅಂಬರೀಶ್
ಮಂಡ್ಯ, ಮೈಸೂರು

ರೈತರ ಹೆಸರಲ್ಲಿ ರಾಜಕೀಯ ಮಾಡಬೇಡಿ: ಸುಮಲತಾ ಅಂಬರೀಶ್

April 12, 2019

ಮಂಡ್ಯ: ರೈತರ ಆತ್ಮಹತ್ಯೆ ತಡೆಯುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ ಏಕೆ? 50 ವರ್ಷಗಳಿಂದ ಅಧಿಕಾರದಲ್ಲಿರುವ ನಿಮಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಸಾಂತ್ವನ ಹೇಳಿದರೆ ನಿಮ್ಮ ಜವಾಬ್ದಾರಿ ಮುಗಿಯಿತೆ? ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಖಾರವಾಗಿ ಪ್ರಶ್ನಿಸಿದ್ದಾರೆ.

ಇಂದು ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರೆ ಸಾಲದು. ಇಷ್ಟು ವರ್ಷ ಅಧಿಕಾರದಲ್ಲಿರುವ ತಮಗೆ ರೈತರ ಸಮಸ್ಯೆಗಳು ತಿಳಿದಿಲ್ಲವೇಕೆ? ರೈತರು ಆತ್ಮಹತ್ಯೆಯನ್ನು ತಡೆ ಯಲು ಮುಂದಾಗಿಲ್ಲವೇಕೆ? ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಕುಮಾರ ಸ್ವಾಮಿ ಹೇಳಿಕೆಗೆ ಸುಮಲತಾ ಅಂಬರೀಶ್ ನೇರವಾಗಿ ತಿರುಗೇಟು ನೀಡಿದ್ದಾರೆ.

ಪ್ರಚಾರದ ವೇಳೆ ಕಲ್ಲು ಹೊಡೆಸಿಕೊಂಡು ಅನುಕಂಪ ಗಿಟ್ಟಿಸುವ ತಂತ್ರ ರೂಪಿಸಿದ್ದಾರೆಂದು ತಮ್ಮ ಬಗ್ಗೆ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಆರೋಪಕ್ಕೆ ಉತ್ತರ ಕೊಡಬೇಕಾಗಿಲ್ಲ ಎನ್ನಿಸುತ್ತಿದೆ. ಹೋದೆಡೆಯ ಲ್ಲೆಲ್ಲಾ ಜನ ಪ್ರೀತಿಯಿಂದ ಸ್ವಾಗತ ಮಾಡಿಕೊಳ್ಳುತ್ತಿ ದ್ದಾರೆ. ಆದರೆ ಕಲ್ಲು ತೂರಾಟ ಮಾಡುವ, ದಬ್ಬಾ ಳಿಕೆಯ ಹಾಗೂ ಅಹಂಕಾರದ ಮಾತುಗಳು ಜೆಡಿಎಸ್ ಅವರ ಕಡೆಯಿಂದಲೇ ಬರುತ್ತಿವೆ ಎಂದರು. ಕಲ್ಲು ತೂರಾಟ ರೀತಿಯ ತಂತ್ರ ,ಪ್ರತಿತಂತ್ರ ನಮ್ಮ ಕಡೆಯಿಂದ ಆಗುತ್ತಿಲ್ಲ. ಒಂದು ವೇಳೆ ಅಂತಹ ಯೋಜನೆ ರೂಪಿಸಿದರೆ ಅವರಿಗೆ ತಿಳಿದೇ ತಿಳಿಯುತ್ತದೆ. ಗುಪ್ತಚರ ಇಲಾಖೆ ಅಧಿಕಾರಿಗಳು, ಪೆÇಲೀಸರನ್ನು ನಮ್ಮ ಸುತ್ತ ಛೂ ಬಿಟ್ಟು ಕೆಲಸ ಮಾಡಿಸುತ್ತಿದ್ದಾರೆ. ಪುಲ್ವಾಮ ದಾಳಿ ತಮಗೆ ಎರಡು ತಿಂಗಳ ಮೊದಲೇ ತಿಳಿದಿತ್ತು ಎಂದವರು ಅವರು. ಅದನ್ನು ತಡೆಯೋಕೆ ಯಾಕೆ ಪೆÇಲೀಸರಿಗೆ ಮಾಹಿತಿ ಕೊಡಲಿಲ್ಲ. ಈ ಬಗ್ಗೆ ಕ್ಷೇತ್ರದಲ್ಲಿ ಇಂದು ಜನ ಕೇಳುತ್ತಿದ್ದಾರೆಂದು ಟೀಕಾಪ್ರಹಾರ ನಡೆಸಿದರು.

ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲಿನಲ್ಲಿ ನಾನು ಇದ್ದೆ. ಮುಖ್ಯಮಂತ್ರಿ ಅವರು ಯಾವ ಹೋಟೆಲಿನಲ್ಲಿ ಇದ್ದಾರೆ. ಅಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಾವು ಕೇಳಿಲ್ಲ.ಅಲ್ಲಿ ಕುಳಿತುಕೊಂಡು ಇತರರ ಬಗ್ಗೆ ಏನು ಮಾಡುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆಯೇ? ಎಂದು ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ತಾವು ಸಿಂಗಾಪುರ್‍ಗೆ ಬೇಕಾದರೂ ಹೋಗುತ್ತೇನೆ, ಅಮೆರಿಕಾಗೆ ಬೇಕಾದರೂ ತೆರಳುತ್ತೇನೆ ಅದು ತಮಗೆ ಬಿಟ್ಟದ್ದು. ಯಾರಿಗೆ ಮತ ಹಾಕಬೇಕೆಂದು ಮತದಾರರು ತೀರ್ಮಾನ ಮಾಡುತ್ತಾರೆ .ಅವರು ಎಲ್ಲೆಲ್ಲಿ ಹೋಗುತ್ತಾರೆ ಎನ್ನುವುದನ್ನು ಅವರೇ ನೋಡಿಕೊಂಡರೆ ಸಾಕು ಎಂದು ಚುನಾವಣೆ ಬಳಿಕ ವಿದೇಶಕ್ಕೆ ಹಾರುವುದಾಗಿ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಆದರೆ ತಾವು ಜವಾಬ್ದಾರಿ ಅಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಮಾಧ್ಯಮದವರು ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ. ವಿದೇಶದಲ್ಲಿ ಇಂಥಹ ಘಟನೆ ನಡೆದಿದ್ದರೆ ವಿಚಾರ ಸಾಕಷ್ಟು ಗಂಭೀರ ಪಡೆದುಕೊಳ್ಳುತ್ತಿತ್ತು. ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರು ಹೀಗೆ ಬೆದರಿಕೆ ಹಾಕುತ್ತಾರೆಯೇ, ಇಂತಹ ಹೇಳಿಕೆಯನ್ನು ಮಾಧ್ಯಮ ಪ್ರತಿನಿಧಿಗಳು ಗಂಬೀರವಾಗಿ ಪರಿಗಣಿಸಬೇಕು. ವರದಿಗಾರರು, ಮಾಧ್ಯಮಗಳಿಗೆ ಬೆದರಿಕೆ ಹಾಕಿದರೆ ಸಾಮಾನ್ಯ ಜನರಿಗೆ ಎಲ್ಲಿಂದ ರಕ್ಷಣೆ ಸಿಗಲಿದೆ. ಈ ಬಗ್ಗೆ ಜಿಲ್ಲೆಯ ಜನರನ್ನೇ ಕೇಳಿ ಅವರೆಲ್ಲಾ ಏನು ಹೇಳುತ್ತಾರೆ ನೋಡಿ ಎಂದರು.

ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆತಿದ್ದಾರೆ. ಮೊದಲಿಗೆ ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕಿದರು. ಈಗ ಮಾಧ್ಯಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ದಯವಿಟ್ಟು ಇದನ್ನ ಕಡೆಗಣಿಸಬೇಡಿ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮಂಥವರಿಗೆ ಏನೆಲ್ಲಾ ಬೆದರಿಕೆ ಹಾಕಿದ್ದಾರೆ ಅನ್ನೋದು ನಿಮಗೆ ಈಗ ಅರ್ಥ ಆಗಿರಬೇಕು ಎಂದರು. ಕರ್ನಾಟಕದಲ್ಲಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೋ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೇವೆಯೋ ತಿಳಿಯದಾಗಿದೆ. ಇದಕ್ಕೆ ಮುಖ್ಯಮಂತ್ರಿ ಅವರೇ ಉತ್ತರ ನೀಡಬೇಕು ಎಂದರು. ಇಂದು ಸುಮಲತಾ ಅವರು ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ಹಲವು ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು.

Translate »