ಎ.ಮಂಜು ಕಳ್ಳೆತ್ತು:ಸಿದ್ದರಾಮಯ್ಯ
ಮೈಸೂರು, ಹಾಸನ

ಎ.ಮಂಜು ಕಳ್ಳೆತ್ತು:ಸಿದ್ದರಾಮಯ್ಯ

April 12, 2019

ಹಾಸನ: ಬಿಜೆಪಿಗೆ ಹೋಗಲ್ಲ ಎಂದು ಹೇಳಿ, ಈಗ ಬಿಜೆಪಿಯಿಂದಲೇ ಸ್ಪರ್ಧಿಸಿರುವ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪಕ್ಷ ದ್ರೋಹಿ, ಕಳ್ಳೆತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರಿನಲ್ಲಿ ಗುರುವಾರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಚಾರ ಸಭೆಯಲ್ಲಿ ಮಾತ ನಾಡಿದ ಅವರು, ಈ ಗಿರಾಕಿ ಹಿಂದೆ ನಮ್ಮ ಜೊತೆ ಇದ್ದರು. ಸಚಿವ ಸ್ಥಾನವನ್ನೂ ನೀಡಿ ದ್ದೆವು. ಕಳ್ಳೆತ್ತು ಎಂಬುದು ಗೊತ್ತಿತ್ತು. ಬಿಜೆಪಿ ಸೇರುವುದಕ್ಕೂ ಮೂರು ದಿನ ಮುನ್ನಾ ನನ್ನೊಂದಿಗೆ ಮಾತನಾಡಿ, ನಿಮ್ಮನ್ನು ಬಿಟ್ಟು ಹೋಗಲ್ಲ. ನೀವು ಮಂತ್ರಿ ಮಾಡಿದ್ದೀರಿ ಎಂದು ಹೇಳಿದ ಗಿರಾಕಿ ಆಮೇಲೆ ಬಿಜೆಪಿಗೆ ಓಡಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿ ದರು. ಮಂಜು, ಎಂಎಲ್‍ಎ ಆಗಿದ್ದು ಕಾಂಗ್ರೆಸ್‍ನಿಂದ, ಸಚಿವ ಸ್ಥಾನ ನೀಡಿದ್ದು ಕಾಂಗ್ರೆಸ್. ಆದರೆ, ಇಂದು ಆತ ಪಕ್ಷದ ವಿರುದ್ಧ ನಿಂತು ಪಕ್ಷ ದ್ರೋಹಿಯಾಗಿ ದ್ದಾರೆ. ಆತನಿಗೆ ಮತ ಹಾಕಬೇಡಿ ಎಂದು ತಾಕೀತು ಮಾಡಿದರು. ಇದೇ ವೇಳೆ ವಿಧಾನಸಭೆ ಚುನಾವಣೆ ವೇಳೆ ಆನಂದ್ ಪರ ಪ್ರಚಾರಕ್ಕೆ ಯಾಕೆ ಬರಲಿಲ್ಲ? ಎಂದು ಸಭಿಕರೊಬ್ಬರು ಪ್ರಶ್ನಿಸಿದ್ದಕ್ಕೆ ಗದರಿದ ಸಿದ್ದರಾಮಯ್ಯ, ಸುಮ್ಮನೆ ಕುಳಿತುಕೊಳ್ಳಲು ಆಗಲ್ವಾ, ಕಪಾಳಕ್ಕೆ ಬಾರಿಸ್ತೀನಿ ನೋಡು. ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರಕ್ಕೆ ಆನಂದ್‍ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು, ನೀನಾ ಗೂಬೆ. ಆಗ ಸಮಯ ಇಲ್ಲದ ಕಾರಣಕ್ಕೆ ಇಲ್ಲಿಗೆ ಬರಲಾಗಲಿಲ್ಲ ಎಂದು ಜೋರು ಮಾಡಿದರು.

ಮೋದಿ ಗೆದ್ದರೆ ಹಿಟ್ಲರ್ ಆಡಳಿತ ಬರುತ್ತೆ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಗೆದ್ದರೆ ಭಾರತದಲ್ಲಿ ಹಿಟ್ಲರ್ ಆಡಳಿತ ಬರುತ್ತದೆ. ಮೋದಿ ಒಬ್ಬ ರೈತ ವಿರೋಧಿ ಪ್ರಧಾನಿ. 86 ದೇಶ ಸುತ್ತಿರೋದಷ್ಟೇ ಅವರ ಸಾಧನೆ ಎಂದು ಲೇವಡಿ ಮಾಡಿದರು. ಉದ್ಯೋಗ ಕೊಡಿ ಎಂದು ಯುವಜನರು ಕೇಳಿದರೆ ಪಕೋಡ ಮಾರಿ ಎಂದು ಮೋದಿ ಹೇಳುತ್ತಾರೆ. ಮೋದಿ ಮತ್ತೆ ಗೆದ್ದು ಬಂದರೆ ಪ್ರಜಾತಂತ್ರ ಉಳಿಯಲ್ಲ, ಅವರು ಸರ್ವಾಧಿ ಕಾರಿ, ಇನ್ನೊಬ್ಬ ಹಿಟ್ಲರ್ ಆಗುತ್ತಾರೆ. ಹುಷಾ ರಾಗಿರಬೇಕು ಎಂದು ಹೇಳಿದರು.

Translate »