ಸಿ.ಎಸ್.ಪುಟ್ಟರಾಜು ಪುತ್ರನ ಮೈಸೂರು ನಿವಾಸದ ಮೇಲೆ ಐಟಿ, ಚು.ಆಯೋಗದ ಅಧಿಕಾರಿಗಳ ದಾಳಿ
ಮೈಸೂರು

ಸಿ.ಎಸ್.ಪುಟ್ಟರಾಜು ಪುತ್ರನ ಮೈಸೂರು ನಿವಾಸದ ಮೇಲೆ ಐಟಿ, ಚು.ಆಯೋಗದ ಅಧಿಕಾರಿಗಳ ದಾಳಿ

April 12, 2019

ಮೈಸೂರು: ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಶಿವರಾಜ್ ಅವರ ಮೈಸೂರು ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮೈಸೂರಿನ ಯಾದವಗಿರಿಯ ಐಡಿಯಲ್ ಜಾವಾ ರಸ್ತೆಯಲ್ಲಿರುವ ಸಂಕಲ್ಪ ಸೆಂಟ್ರಲ್ ಪಾರ್ಕ್ ಅಪಾರ್ಟ್ ಮೆಂಟ್‍ನಲ್ಲಿರುವ ಶಿವರಾಜ್ ಅವರ ಮನೆ ಮೇಲೆ ಗುರುವಾರ ಮಧ್ಯಾಹ್ನ ದಾಳಿ ನಡೆಸಿರುವ ಐಟಿ ಅಧಿಕಾರಿ ಗಳು, ಸುಮಾರು 2 ಗಂಟೆಗಳ ಕಾಲ ತಪಾಸಣೆ ನಡೆಸಿ, ವಾಪಸ್ಸಾಗಿದ್ದಾರೆ. ದಾಳಿ ಸಂದರ್ಭದಲ್ಲಿ ಅಡುಗೆ ಭಟ್ಟರನ್ನು ಹೊರತು ಪಡಿಸಿ ಬೇರ್ಯಾರು ಇರಲಿಲ್ಲ. ಕಾರ್ಯಾಚರಣೆ ಮುಗಿಸಿ, ವಾಪಸ್ಸಾಗುವ ವೇಳೆಗೆ ಆಗಮಿಸಿದ ಶಿವರಾಜ್ ಅವರಿಗೆ ನೋಟೀಸ್ ನೀಡಿದ ಅಧಿಕಾರಿಗಳು, ಏ.25ರಂದು ವಿಚಾರಣೆಗೆ ಬರುವಂತೆ ಸೂಚಿಸಿ, ಅಲ್ಲಿಂದ ತೆರಳಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವರಾಜ್, ಇದೂ ಸಹ ರಾಜಕೀಯ ಪ್ರೇರಿತ ದಾಳಿಯಷ್ಟೇ. ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ.

ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ಐಟಿ ಹಾಗೂ ಚುನಾವಣಾ ಆಯೋ ಗದ 10-15 ಅಧಿಕಾರಿಗಳು ಬಂದಿದ್ದರು. ಮನೆಯಲ್ಲಿದ್ದ ಅಡುಗೆ ಭಟ್ಟರು ಬಾಗಿಲು ತೆಗೆದು, ವಿಚಾರಿಸಿದಾಗ ನಾವು ಐಟಿ ಅಧಿಕಾರಿಗಳು, ಮನೆಯನ್ನು ತಪಾಸಣೆ ನಡೆಸಬೇಕೆಂದು ಕೇಳಿದ್ದಾರೆ. ಬಳಿಕ ಅಡುಗೆ ಭಟ್ಟರ ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಎಲ್ಲಾ ಕೊಠಡಿಗಳ ಪರಿಶೀಲಿಸಿದ್ದಾರೆ. ಒಂದು ಪೇಪರ್ ಸಹ ತೆಗೆದುಕೊಂಡು ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.

ಭದ್ರತಾ ಸಿಬ್ಬಂದಿಯಿಂದ ವಿಷಯ ತಿಳಿದ ನಮ್ಮ ತಂದೆ(ಸಿ.ಎಸ್.ಪುಟ್ಟರಾಜು), ಕ್ಷೇತ್ರದಲ್ಲಿ ಪ್ರಚಾರದಲ್ಲಿದ್ದ ನನಗೆ ಕರೆ ಮಾಡಿ, ಐಟಿ ಅಧಿಕಾರಿಗಳು ಬಂದಿದ್ದಾರಂತೆ ಅಲ್ಲಿಗೆ ಹೋಗಿ, ಅವರಿಗೆ ಸಹಕರಿಸುವಂತೆ ತಿಳಿಸಿದರು. ನಾನು ಬರುವಷ್ಟರಲ್ಲಿ ಐಟಿ ಅದಿಕಾರಿಗಳು ತಪಾಸಣೆ ಮುಗಿಸಿ, ಮನೆಯಿಂದ ಹೊರ ಬರುತ್ತಿದ್ದರು. ಆವರೆಗೆ ಹೊರಗಿದ್ದ ಚುನಾವಣಾ ಆಯೋಗದ ಅಧಿಕಾರಿಗಳು ನನ್ನ ಸಮ್ಮುಖದಲ್ಲೇ ಮತ್ತೊಮ್ಮೆ ಮನೆಯನ್ನೆಲ್ಲಾ ಪರಿಶೀಲಿಸಿದರು. ಕೊನೆಗೆ ಏ.25ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನಲ್ಲಿ ರುವ ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಿ, ನೋಟೀಸ್ ನೀಡಿ, ವಾಪಸ್ಸಾದರು. ಯಾವ ಕಾರಣಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಲಿಲ್ಲ ಎಂದು ಶಿವರಾಜ್ ಹೇಳಿದರು.

ಮತ್ತೆ ಮತ್ತೆ ಬರಲಿ: ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಸಾಗಾಣೆ ತಡೆಯುವುದಾದರೆ ಎಲ್ಲಾ ಕಡೆಗಳಲ್ಲಿ ದಾಳಿ ನಡೆಸಬೇಕು. ನಮ್ಮದು ಕೂಡು ಕುಟುಂಬ. ಇತ್ತೀಚೆಗೆ ನಮ್ಮ ಚಿಕ್ಕಪ್ಪನ ಮನೆ ಮೇಲೆ ದಾಳಿ ಮಾಡಿ ದ್ದರು. ಈಗ ನಮ್ಮ ಮನೆಗೆ ಬಂದು ಹೋಗಿದ್ದಾರೆ. ಮಂಡ್ಯ ದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲ್ಲಿಸ ಬೇಕೆಂದು ಇಂತಹ ರಾಜಕೀಯ ಪ್ರೇರಿತ ದಾಳಿಯಿಂದ ಭಯಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣಾ ಉಸ್ತುವಾರಿಯಾಗಿರುವ ಪುಟ್ಟರಾಜು ಅವರ ಮನೆ ಮೇಲೆ ದಾಳಿ ನಡೆಸಿದರೆ ಹೆದರಬಹುದೆಂದು ತಿಳಿದಿ ದ್ದಾರೆ. ಮತ್ತೆ ಮತ್ತೆ ದಾಳಿ ನಡೆಸಿ ಎಂದು ಐಟಿಯ ವರನ್ನು ಸ್ವಾಗತಿಸುತ್ತೇನೆ. ಇಂತಹ ಸಾವಿರ ದಾಳಿ ನಡೆದರೂ ನಮ್ಮ ತಂದೆ, ಪಕ್ಷದ ಕಾರ್ಯಕರ್ತರನ್ನು ಕುಗ್ಗಿಸಲು ಸಾಧ್ಯವಿಲ್ಲ. ಸೈನಿಕರಂತೆ ಕೆಲಸ ಮಾಡುತ್ತಿರುವ ನಮ್ಮ ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಪ್ರತಿ ಐಟಿ ದಾಳಿಯಿಂದ 25-30 ಸಾವಿರ ಮತಗಳು ಹೆಚ್ಚುತ್ತವೆ. ಏ.18ರ ಜನರ ತೀರ್ಮಾನ ಮೇ.23ರಂದು ತಿಳಿಯಲಿದೆ. ಈ ರೀತಿ ದಾಳಿಯಿಂದ ನಿಖಿಲ್ ಕುಮಾರಸ್ವಾಮಿ ಅವರ ಗೆಲುವನ್ನು ತಪ್ಪಿಸಲು ಸಾಧ್ಯವಿಲ್ಲ. ನಾವೆಲ್ಲಾ ಇನ್ನಷ್ಟು ಚೈತನ್ಯದಿಂದ ಕೆಲಸ ಮಾಡಿ, ನಿಖಿಲ್ ಅವರನ್ನು ಸಂಸದರಾಗಿ ಆಯ್ಕೆ ಮಾಡುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

Translate »