ಮತದಾರರ ದಿಕ್ಕು ತಪ್ಪಿಸುವ ಗುರುತಿನ ಚೀಟಿ ವಿತರಣೆ
ಮೈಸೂರು

ಮತದಾರರ ದಿಕ್ಕು ತಪ್ಪಿಸುವ ಗುರುತಿನ ಚೀಟಿ ವಿತರಣೆ

April 12, 2019

ಮೈಸೂರು: ಲೋಕಸಭಾ ಚುನಾವಣೆಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಭಾರತ ಚುನಾವಣಾ ಆಯೋಗ ವಿತರಿ ಸುತ್ತಿರುವ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳು ಹಲವು ವ್ಯತ್ಯಾಸಗಳಿಂದ ಕೂಡಿದ್ದು, ಗೊಂದಲಕ್ಕೆ ಕಾರಣವಾಗುವಂತಿದೆ ಎಂದು ಎನ್.ಆರ್.ಕ್ಷೇತ್ರ ಶಾಸಕ ತನ್ವೀರ್‍ಸೇಠ್ ಇಂದಿಲ್ಲಿ ಚುನಾ ವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದರು.

ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯಲ್ಲಿ ರಾಜ್ಯ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ಮತದಾರರ ಹೆಸರು, ಲಿಂಗ, ಗುರುತಿನ ಚೀಟಿಯ ಸಂಖ್ಯೆ, ತಂದೆಯ ಹೆಸರು, ಭಾಗದ ಸಂಖ್ಯೆ, ಭಾಗದ ಹೆಸರು ಹಾಗೂ ಕ್ರಮ ಸಂಖ್ಯೆ ಇರುವುದು ಇದೆ. ಆದರೆ ಅತಿ ಮುಖ್ಯವಾದ `ಮತ ಗಟ್ಟೆಯ ವಿಳಾಸ’ ಮಾತ್ರ ತಪ್ಪಾಗಿ ಮುದ್ರಿತವಾಗಿದೆ ಎಂದು ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಅವರು ದೂರಿದರು.

ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ಭಾಗದ ಸಂಖ್ಯೆ 265ರ ಮತಗಟ್ಟೆ ವಿಳಾಸ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಕೊಠಡಿ ಸಂಖ್ಯೆ 03, ಕಲ್ಯಾಣಗಿರಿ ಆಗಿದ್ದು, ಇದನ್ನು ಭಾಗದ ಹೆಸರಿನಲ್ಲಿ ತಿಳಿಸಲಾಗಿದೆ. ಮತ ಗಟ್ಟೆ ವಿಳಾಸದ ಕಾಲಂನಲ್ಲಿ ಆರ್‍ಜಿಎ ಹಿರಿಯ ಪ್ರಾಥಮಿಕ ಶಾಲೆ, ಗೌಸಿಯಾ ನಗರ ಎಂದು ತಪ್ಪಾಗಿ ತೋರಿಸಲಾಗಿದೆ.

261ನೇ ಭಾಗದ ಸಂಖ್ಯೆಯ ಮತಗಟ್ಟೆಯ ವಿಳಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಹದೇವಪುರ ರಸ್ತೆ, ನೆಹರು ನಗರ, ಕೊಠಡಿ ಸಂಖ್ಯೆ 02, ಆದರೆ ಮತ ಗಟ್ಟೆ ವಿಳಾಸ ಕಾಲಂನಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾಣಗಿರಿ ನಗರ ಎಂದು ತಪ್ಪಾಗಿ ಪ್ರಕಟಿಸಲಾಗಿದೆ. ಅದೇ ರೀತಿ, 222ನೇ ಭಾಗದ ಸಂಖ್ಯೆ ಮತ ಗಟ್ಟೆಯ ವಿಳಾಸವನ್ನು ಫಾರೂಕಿಯಾ ಉರ್ದು ಬಾಲಕಿಯರ ಪ್ರೌಢಶಾಲೆ, ಕೊಠಡಿ ಸಂಖ್ಯೆ 03, ಅಜೀಜ್‍ಸೇಠ್‍ನಗರ ಎಂದಾ ಗಿದ್ದು, ಮತಗಟ್ಟೆಯ ವಿಳಾಸದ ಜಾಗದಲ್ಲಿ ತಪ್ಪಾಗಿ ಸೇಂಟ್‍ಪಾಲ್ಸ್ ಹಿರಿಯ ಪ್ರಾಥ ಮಿಕ ಪ್ರೌಢಶಾಲೆ, ರಾಜೀವ್‍ನಗರ ಎಂದು ಪ್ರಕಟಿಸಲಾಗಿದೆ ಎಂದು ದೂರಿದರು.

ಇವು ಒಂದೆರಡು ಉದಾಹರಣೆಯಾ ಗಿದ್ದು, ಇಡೀ ನರಸಿಂಹರಾಜ ಕ್ಷೇತ್ರದಲ್ಲಿ ಇಂತಹುದೇ ಲೋಪ ಕಂಡು ಬಂದಿದೆ. ಇದು ಮೈಸೂರು ನಗರ, ಜಿಲ್ಲೆ, ರಾಜ್ಯಾ ದ್ಯಂತ ವಿತರಣೆಯಾಗಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯಲ್ಲಿ ಇರುವ ಸಾಧ್ಯತೆ ಇದೆ ಎಂದರು. ಮತದಾರ ಮತಗಟ್ಟೆಯ ವಿಳಾಸದಲ್ಲಿ ಗುರುತಿನ ಚೀಟಿ ತೋರಿಸಿ ದರೆ, ನಿಮ್ಮ ಓಟು ಇಲ್ಲಿಲ್ಲವೆಂದು ಮತದಾರ ರನ್ನು ದಿಕ್ಕು ತಪ್ಪಿಸುವ ಕ್ರಮವಾಗಿದೆ. ಮತ ಗಟ್ಟೆ ವಿಳಾಸ ಹುಡುಕುವುದಕ್ಕೆ ಬಿರು ಬಿಸಿಲಿ ನಲ್ಲಿ ಅಲೆದಾಡಿ ಮತ ಚಲಾಯಿಸದೆ ವಾಪ ಸಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಕಡಿಮೆ ಪ್ರಮಾಣದ ಮತದಾನದ ಸಾಧ್ಯತೆ ಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಷಯವನ್ನು ಮೈಸೂರು ಜಿಲ್ಲಾ ಚುನಾ ವಣಾಧಿಕಾರಿ, ಸಹಾಯಕ ಚುನಾವಣಾಧಿ ಕಾರಿ, ನಗರಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೇವೆ. ತಾಂತ್ರಿಕ ದೋಷದಿಂದ ತಪ್ಪು ಮುದ್ರಿತವಾಗಿದೆ. ಸರಿಯಾದ ಗುರುತಿನ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಡಿಸಿ ನೀಡಿದ್ದಾರೆ ಎಂದು ತನ್ವೀರ್‍ಸೇಠ್ ತಿಳಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಹೆಚ್.ಎ.ವೆಂಕಟೇಶ್, ಪಾಲಿಕೆ ಸದಸ್ಯ ಶೌಕತ್ ಅಲಿ, ಮಾಜಿ ಮೇಯರ್ ಆರ್.ಜಿ.ನರಸಿಂಹ ಐಯ್ಯಂ ಗಾರ್, ಕೆಪಿಸಿಸಿ ಕಾರ್ಯದರ್ಶಿ ಅಕ್ಬರ್ ಅಲೀಂ, ತಿವಾರಿ ಉಪಸ್ಥಿತರಿದ್ದರು.

Translate »