ಸಿ.ಹೆಚ್.ವಿಜಯಶಂಕರ್ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ
ಮೈಸೂರು

ಸಿ.ಹೆಚ್.ವಿಜಯಶಂಕರ್ ಪರ ಮುಖ್ಯಮಂತ್ರಿ ಚಂದ್ರು ಪ್ರಚಾರ

April 12, 2019

ಮೈಸೂರು: ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ದೇಶದ ಜನತೆಗೆ ನಾಮ ಹಾಕಲು ಹೊರಟಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ವಿಸ್ತರಣೆ ಮಾಡಲು ಹವಣಿಸುತ್ತಿದೆ ಎಂದು ಹಿರಿಯ ನಟ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

ಮೈಸೂರಿನ ಪುರಭವನ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಗುರು ವಾರ ಪುಷ್ಪ ನಮನ ಸಲ್ಲಿಸುವ ಮೂಲಕ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಆತ್ಮವೇ ಭಾರತವಾಗಿದ್ದು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ದೇಶವನ್ನು ಕಟ್ಟಿ ಬೆಳೆಸಿದ್ದರ ಪರಿಣಾಮ ವಾಗಿ ಇಂದು ಬಿಜೆಪಿ ಅಧಿಕಾರ ನಡೆಸಲು ಸಾಧ್ಯವಾಯಿತು. ಕಾಂಗ್ರೆಸ್‍ನ ಯೋಜನೆ ಗಳಿಗೆ ಸುಣ್ಣ-ಬಣ್ಣ ಬಳಿದು ಮೋದಿ ತಮ್ಮದೆಂದು ಬಿಂಬಿಸಿಕೊಂಡಿರುವ ಸುಳ್ಳಿನ ಸರದಾರ. ಈ ಹಿಂದೆ ನೀಡಿದ್ದ ಒಂದೇ ಒಂದೂ ಭರವಸೆಯನ್ನೂ ಬಿಜೆಪಿ ಈಡೇ ರಿಸಿಲ್ಲ. ಸರ್ಜಿಕಲ್ ಸ್ಟ್ರೈಕ್ ಇವರಿಗೆ ರಾಜ ಕೀಯ ದಾಳವಾಗಿದೆ ಎಂದು ಟೀಕಿಸಿದರು.

ಯುಪಿಎ ಸರ್ಕಾರ ಜಿಎಸ್‍ಟಿ ಜಾರಿಗೆ ತರಲು ಹೊರಟಾಗ ಖಂಡಿಸಿದ್ದ ಎನ್‍ಡಿಎ, ತನ್ನ ಅಧಿಕಾರಾವಧಿಯಲ್ಲಿ ಅದನ್ನೇ ಜಾರಿ ಗೊಳಿಸಿತು. ಅಧಿಕ ಮುಖಬೆಲೆ ನೋಟು ಅಪಮೌಲ್ಯೀಕರಣದಿಂದ ಸಾರ್ವಜನಿಕ ರಿಗೆ ಸಮಸ್ಯೆ ಉಂಟು ಮಾಡಿತು. ಯುಪಿಎ ಸರ್ಕಾರ ಆಧಾರ್ ಕಾರ್ಡ್ ವ್ಯವಸ್ಥೆ ಜಾರಿ ಗೊಳಿಸಿದಾಗ ಬೊಬ್ಬೆ ಹೊಡೆದಿದ್ದ ಇವರು ಅಧಿಕಾರ ಸಿಕ್ಕಾಗ ಇದನ್ನೂ ತಮ್ಮದೇ ಸಾಧನೆ ಎಂದು ಬಿಂಬಿಸಿಕೊಂಡರು. ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿ ಸುವ ಮೂಲಕ ವಿಚಾರಣೆ ನಡೆಸಲು ಆದೇ ಶಿಸಿ ಸುಳ್ಳಿನ ಸರದಾರ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಉತ್ತರ ನೀಡಿದೆ ಎಂದು ಕಿಡಿಕಾರಿದರು. ಸಂವಿಧಾನ ಬದಲು ಮಾಡುತ್ತೇವೆ ಎನ್ನುವ ಸಂಸದರನ್ನು ಇಟ್ಟುಕೊಂಡಿದ್ದಾರೆ. ಇನ್ನು ಇದೇ ಕ್ಷೇತ್ರದ ಸಂಸದರ ಬಾಯಿ ಸರಿಯಿಲ್ಲ. ಅಲ್ಪಸಂಖ್ಯಾ ತರ ಮತವೇ ಬೇಡ ಎನ್ನುವ ಇವರಿಗೆ ಜನ ತಕ್ಕ ಪಾಠ ಕಲಿಸಬೇಕಿದೆ. ಸಜ್ಜನ, ಸೌಜನ್ಯದ ವ್ಯಕ್ತಿತ್ವ ಹೊಂದಿರುವ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವ ರನ್ನು ಜನತೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪಾಲಿಕೆ ಸದಸ್ಯ ರಮೇಶ್ (ರಮಣಿ), ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಗ್ರಾಮಾಂತರ ಅಧ್ಯಕ್ಷ ಜಾಕೀರ್ ಹುಸೇನ್, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »