ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ
ಮಂಡ್ಯ

ಮಳವಳ್ಳಿ ಕ್ಷೇತ್ರದಲ್ಲಿ ಅಮ್ಮ-ಮಗನ ಭರ್ಜರಿ ಪ್ರಚಾರ

March 14, 2019
  • ಸಿಎಂಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್?
  • ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು

ಮಂಡ್ಯ: ದೋಸ್ತಿ ನಾಯಕರ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಇಂದು ಕೂಡ ಮಳವಳ್ಳಿ ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಯಿ ಸುಮಲತಾ ಪರ ಪುತ್ರ ಅಭಿಷೇಕ್ ಅಖಾಡಕ್ಕೆ ದುಮುಕಿದ್ದು ಪ್ರಚಾರ ನಡೆಸಿದರು. ಇವತ್ತು ಅಮ್ಮ- ಮಗನ ಜುಗಲ್ ಬಂದಿ ಜೋರಾಗಿತ್ತು.

ಮಳವಳ್ಳಿ ತಾಲೂಕಿನ ಹಲಗೂರು, ಹಾಡ್ಲಿ ಸರ್ಕಲ್, ಮಳವಳ್ಳಿ ಟೌನ್ ಸೇರಿ ದಂತೆ ವಿವಿಧೆಡೆಗಳಲ್ಲಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಬಿರುಸಿನ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಪುತ್ರ ಅಭಿಷೇಕ್ ತಮ್ಮ ತಂದೆ ಅಂಬಿಯ ಧ್ವನಿ ಅನುಕರಣೆಯೊಂದಿಗೆ ಜನರನ್ನು ಸೆಳೆ ಯುವ ಮೂಲಕ ತಾಯಿಯನ್ನು ಬೆಂಬಲಿಸಿ ಅಂತ ಮನವಿ ಮಾಡುತ್ತಿದ್ದುದು ಕಂಡು ಬಂತು.

ಬಹಿರಂಗ ಬೆಂಬಲ: ಸುಮಲತಾ ಮನವಿ ಹಾಗೂ ಅಭಿಷೇಕ್ ಹೋದ ಕಡೆಯೆಲ್ಲಾ ಅಭಿಮಾನಿಗಳು ಸೇರುವ ಮೂಲಕ ಅವರ ಸ್ಪರ್ಧೆಗೆ ಒತ್ತಾಯಿಸುತ್ತಿದ್ದರು. ಕಾಂಗ್ರೆಸ್ ಇಲ್ಲವೇ ಪಕ್ಷೇತರವಾಗಿ ಸ್ಪರ್ಧೆ ಮಾಡಿ, ನಿಮಗೆ ನಮ್ಮ ಬೆಂಬಲವಿದೆ ಎಂದು ಬಹಿ ರಂಗವಾಗೇ ಹೇಳುತ್ತಿದ್ದು ಕೇಳಿಬಂತು.

ಒಳ್ಳೆಯತನದಿಂದ ರಾಜಕೀಯ ಪ್ರೂವ್ ಮಾಡಬೇಕು: ಮಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ಪ್ರಚಾರದ ವೇಳೆ ಮಾತ ನಾಡಿದ ಸುಮಲತಾ, ದ್ವೇಷ, ಮೋಸ ಮತ್ತು ಜಾತಿ ರಾಜಕಾರಣದಿಂದ ಜನ ಗಳಿಗೂ ಬೇಸರವಾಗಿದೆ. ಅದನ್ನು ಮೀರಿ ಒಳ್ಳೆಯ ರಾಜಕಾರಣ ಮಾಡಬಹುದು ಅನ್ನೋ ದನ್ನ ನಾವು ತೋರಿಸಬೇಕಿದೆ. ಒಳ್ಳೆತನದಿಂದ ರಾಜಕೀಯ ಸಾಬೀತು ಪಡಿಸಬೇಕಾಗಿದೆ. ಹೀಗಾಗಿ ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದೀನಿ ಅನ್ನೋ ಮೂಲಕ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಎಲ್ಲೆಡೆ ರೆಸ್ಪಾನ್ಸ್ ಅದ್ಭುತವಾಗಿದ್ದು, ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದನ್ನು ಮರಿಯೋಕೆ ಆಗಲ್ಲ,ನಿಮ್ಮ ಋಣತೀರಿಸುವ ಕೆಲಸಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಮನವಿ ಮಾಡಿದರು.

ಪ್ರಚಾರ ಹೊಸದಲ್ಲ: ಪುತ್ರ ಅಭಿಷೇಕ್ ಮಾತನಾಡಿ, ಎಲ್ಲಾ ಕಡೆಯ ರೆಸ್ಪಾನ್ಸ್ ನಿಮಗೇ ಕಾಣ್ತಿದೆ. ಜನ ಹಿಂದೆ ಹೆಜ್ಜೆ ಇಡಬೇಡಿ, ಮುಂದೆ ಇಡಿ ಅಂತಿದ್ದಾರೆ. ನನಗೆ ಪ್ರಚಾರ ಹೊಸದಲ್ಲ. ಅಪ್ಪನ ಜೊತೆ ಕೂಡ ಬರುತ್ತಿದ್ದೆ. ಈ ಊರಿನಲ್ಲಿ ಅಪ್ಪನ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ನಮ್ಮ ತಾತ ಕೂಡ ಮಳವಳ್ಳಿಯವರು. ಅವರ ಆಶೀರ್ವಾದ ಕೂಡ ಇದೆ. ನಾವು ಏನೇ ತೀರ್ಮಾನ ಕೈಗೊಂಡರೂ ಜನರ ಮುಂದೆಯೇ ಆ ತೀರ್ಮಾನ ಮಾಡ್ತೀವಿ. ನನಗೆ ರಾಜಕೀಯ ಗೊತ್ತಿಲ್ಲ. ನಮ್ಮ ತಂದೆ ಮತ್ತು ತಾಯಿ ಗೋಸ್ಕರ ಇಲ್ಲಿಗೆ ಬಂದಿದ್ದೀನಿ ಎಂದರು.

ಮಳವಳ್ಳಿಯಲ್ಲಿ ಸುಮಲತಾಗೆ ಅದ್ದೂರಿ ಸ್ವಾಗತ: ಮಳವಳ್ಳಿ ಪಟ್ಟಣಕ್ಕೆ ಪ್ರಚಾರಕ್ಕೆ ಬಂದ ಸುಮಲತಾ ಮತ್ತು ಅಭಿಷೇಕ್‍ಗೆ ಅಭಿಮಾನಿಗಳು ಬೃಹತ್ ಗುಲಾಬಿ ಹಾರ ಹಾಕಿ ಅದ್ದೂರಿ ಸ್ವಾಗತಕೋರಿದರು.

ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸ್ವಾಗತ ಕೋರಿದರು. ಕಾರ್ಯ ಕರ್ತರು, ಅಭಿಮಾನಿಗಳ ಅದ್ದೂರಿ ಸ್ವಾಗತ ಕಂಡು ಸುಮಲತಾ, ಅಭಿಷೇಕ್ ಫುಲ್ ಖುಷ್ ಆಗಿದ್ದು ಕಂಡು ಬಂತು,ಸ್ವಾಗತದ ವೇಳೆ ಸುಮಲತಾ, ಅಂಬರೀಶ್, ಅಭಿಷೇಕ್‍ಗೆ ಅಭಿಮಾನಿಗಳು ಜೈಕಾರ ಕೂಗುತ್ತಿದ್ದು ಕಂಡು ಬಂತು.

ಈ ವೇಳೆ ಸ್ಥಳಿಯ ಕಾಂಗ್ರೆಸ್ ಕಾರ್ಯ ಕರ್ತರು ಅಂಬರೀಶ್ ಅಭಿಮಾನಿಗಳು ಹಾಜರಿದ್ದರು, ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೈರು ಹಾಜರಾಗಿದ್ದರು.

Translate »