ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ
ಕೊಡಗು

ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ

March 11, 2019

ಗೋಣಿಕೊಪ್ಪಲು: ಕಾಕೋ ಟುಪರಂಬು ಶಾಲಾ ಮೈದಾನದಲ್ಲಿ ಏ.14 ರಿಂದ ಎರಡು ಪ್ರತ್ಯೇಕ ಹಾಕಿ ಟೂರ್ನಿ ನಡೆಯಲಿದ್ದು, ಕೂರ್ಗ್ ಹಾಕಿ ಚಾಂಪಿಯ ನ್‍ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿ ಟೂರ್ನಿ ಮೂಲಕ ಹಾಕಿ ಪ್ರಿಯರಿಗೆ ಹಾಕಿ ರಸದೌತಣ ನೀಡಲು ಹಾಕಿ ಕೂರ್ಗ್ ಸಮಿತಿ ನಿರ್ಧರಿಸಿತು.

ಕಾಕೋಟುಪರಂಬು ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಟೂರ್ನಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, 2 ಹಂತಗಳ ಟೂರ್ನಿ ನಡೆಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕೊಡವ ಕುಟುಂಬಗಳ ನಡುವೆ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್, ಎರಡನೇ ಹಂತದಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿ ನಡೆ ಸುವಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಕಾಕೋಟುಪರಂಬು ಶಾಲೆಯ ಎರಡು ಮೈದಾನಗಳನ್ನು ಬಳಸಿಕೊಂಡು ಟೂರ್ನಿ ನಡೆಸುವಂತೆಯೂ, ಗ್ಯಾಲರಿ ನಿರ್ಮಾಣ, ಹಣಕಾಸು, ಮೈದಾನ ದುರಸ್ತಿ ಮಾಡಲು ಹಲವು ಉಪಸಮಿತಿ ರಚಿಸಲು ನಿರ್ಧರಿಸಲಾಯಿತು.

ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಟೂರ್ನಿಯು ನಾಕೌಟ್ ಮಾದರಿಯಲ್ಲಿ ನಡೆ ಸುವಂತೆ ನಿರ್ಧರಿಸಲಾಯಿತು. ಚಾಂಪಿಯನ್ ಶಿಪ್ ಮುಗಿದ ನಂತರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಸುವುದು, ಲೀಗ್ ಮಟ್ಟದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಜಿಲ್ಲೆಯ ಕೊಡವ ಹಾಕಿಯಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದ ತಂಡ ಗಳನ್ನು ಸೇರಿಸಿಕೊಂಡು ನಡೆಸುವಂತೆ ತೀರ್ಮಾನಿಸಲಾಯಿತು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಚೇಂದಂಡ, ಅಂಜಪರವಂಡ, ಕೂತಂಡ, ಪಳಂಗಂಡ, ಪರದಂಡ, ಕಲಿಯಂಡ, ಮಂಡೇಪಂಡ, ನೆಲ್ಲಮಕ್ಕಡ, ಕರಿನೆರವಂಡ, ಕುಲ್ಲೇಟೀರ ಹಾಗೂ ಚೆಪ್ಪುಡೀರ ತಂಡಗಳು ಪಾಲ್ಗೊ ಳ್ಳುತ್ತಿವೆ. ಒಂದು ತಂಡ ಯಾವುದು ಎಂದು ಇನ್ನೂ ನಿರ್ಧರಿಸಬೇಕಿದೆ ಎಂದರು.

ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸಮಿತಿ ಮುಖ್ಯಸ್ಥ ಎಂ.ಪಿ.ಸುಬ್ಬಯ್ಯ ಮಾತನಾಡಿ, ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಸುಮಾರು 150-200 ತಂಡಗಳು ಪಾಲ್ಗೊ ಳ್ಳುವ ನಿರೀಕ್ಷೆ ಇದೆ. ಈಗಾಗಲೇ ಸಾಕಷ್ಟು ತಂಡಗಳು ನೋಂದಣಿ ಮಾಡಿ ಕೊಂಡಿದ್ದು, ಉತ್ತಮ ಹಾಕಿ ಟೂರ್ನಿ ಹಾಕಿ ಪ್ರಿಯರಿಗೆ ದೊರೆಯಲಿದೆ ಸುಮಾರು 1 ತಿಂಗಳ ಕಾಲ ಟೂರ್ನಿ ನಡೆಯಲಿದೆ ಎಂದರು. ಟೂರ್ನಿ ಯಶಸ್ವಿಗೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಚರ್ಚಿಸಲಾಯಿತು.

ನೋಂದಣಿ: ತಂಡಗಳ ನೋಂದಣಿಗೆ ಜಿಲ್ಲೆಯಲ್ಲಿ ನೋಂದಣಿ ಕೇಂದ್ರ ಸ್ಥಾಪಿಸ ಲಾಗಿದ್ದು, ತಂಡಗಳು ಸಮೀಪದ ಕೇಂದ್ರ ಗಳಲ್ಲಿ ತಂಡದ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ಮಾಹಿತಿಗೆ 953554 6955, 9483394515 ಸಂಪರ್ಕಿಸಬಹುದು.
ಈ ಸಂದರ್ಭ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಹಾಗೂ ಚಾಂಪಿ ಯನ್ಸ್ ಟ್ರೋಫಿ ಸಮಿತಿ ಖಜಾಂಚಿ ಪಾರ್ಥ ಚೆಂಗಪ್ಪ, ಕಾರ್ಯದರ್ಶಿ ಬುಟ್ಟಿ ಯಂಡ ಚೆಂಗಪ್ಪ, ಪ್ರಮುಖರುಗಳಾದ ಪಳಂಗಂಡ ಲವ, ಉತ್ತಪ್ಪ, ನೆಲ್ಲಮಕ್ಕಡ ಪವನ್, ಕೊಕ್ಕಂಡ ರೋಶನ್, ಲಾಲಾ ಅಯ್ಯಣ್ಣ, ಮೇವಡ ಅಯ್ಯಣ್ಣ, ಗೌತಂ, ಧೀರಜ್, ಮೇವಡ ಬೆಳ್ಯಪ್ಪ, ವಿನೋದ್, ಬೇರೇರ ಬೆಳ್ಯಪ್ಪ, ನಾಚಪ್ಪ, ಕುಪ್ಪಂಡ ದಿಲನ್, ಕೆ.ಪಿ. ಉಷಾ ಉಪಸ್ಥಿತರಿದ್ದರು.

Translate »