ರಾಷ್ಟ್ರಮಟ್ಟದ 4 ಚಕ್ರ ಟ್ರ್ಯಾಕ್ ರೇಸ್ವೇಗದ ಚಾಲಕ ಪ್ರಶಸ್ತಿ ಪಡೆದ ಡೆನ್ ತಿಮ್ಮಯ್ಯ
ಕೊಡಗು

ರಾಷ್ಟ್ರಮಟ್ಟದ 4 ಚಕ್ರ ಟ್ರ್ಯಾಕ್ ರೇಸ್ವೇಗದ ಚಾಲಕ ಪ್ರಶಸ್ತಿ ಪಡೆದ ಡೆನ್ ತಿಮ್ಮಯ್ಯ

May 8, 2019

ಗೋಣಿಕೊಪ್ಪಲು: ಬೇಗೂರುಕೊಲ್ಲಿಯ ಗದ್ದೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ನಾಲ್ಕುಚಕ್ರ ಟ್ರ್ಯಾಕ್ ರೇಸ್‍ನಲ್ಲಿ ಡೆನ್ ತಿಮ್ಮಯ್ಯ ವೇಗದ ಚಾಲಕ ಬಹುಮಾನ ಗಿಟ್ಟಿಸಿಕೊಂಡರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ರೋಚಕ ರೇಸ್‍ನಲ್ಲಿ 850 ಮೀಟರ್ ಉದ್ದದ ಟ್ರ್ಯಾಕ್‍ನ್ನು 2.02 ನಿಮಿಷದಲ್ಲಿ ಕ್ರಮಿಸುವ ಮೂಲಕ ವೇಗದ ಚಾಲಕ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು. ಉಳಿದಂತೆ ಕೂರ್ಗ್ ಲೋಕಲ್ ಓಪನ್, 1400-1600 ಸಿಸಿ, ಇಂಡಿಯನ್ ಓಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ 3 ಪ್ರಥಮ ಬಹುಮಾನ ಪಡೆದ ಸಾಧನೆಯನ್ನು ಮಾಡಿದರು.

ಕೂರ್ಗ್ ಲೋಕಲ್ ಓಪನ್ ವಿಭಾಗದಲ್ಲಿ ಡೆನ್ ತಿಮ್ಮಯ್ಯ ಪ್ರಥಮ, ಕೊಕ್ಕೇಂಗಡ ದರ್ಶನ್ ದ್ವಿತೀಯ, ಕರವಂಡ ತಿಮ್ಮಯ್ಯ ತೃತೀಯ ಸ್ಥಾನ ಪಡೆದರು. 800 ಸಿಸಿ ವಿಭಾಗದಲ್ಲಿ ಮೊಹಮ್ಮದ್ ಶೇಕ್ ಪ್ರಥಮ, ಶ್ರೀಹರಿ ದ್ವಿತೀಯ, ಸಿ.ಕೆ. ಸೋಮಣ್ಣ ತೃತೀಯ. 1001-1400 ಸಿಸಿ ವಿಭಾಗದಲ್ಲಿ ಇಸ್ಮಾಯಿಲ್‍ಖಾನ್ ಪ್ರಥಮ, ಹರ್ಷದ್ ಪಾಶಾ ದ್ವಿತೀಯ, ಸ್ಪರ್ಶ್ ನಂಜಪ್ಪ ತೃತೀಯ. 1400-1600 ಸಿಸಿ ವಿಭಾಗದಲ್ಲಿ ಡೆನ್ ತಿಮ್ಮಯ್ಯ ಪ್ರಥಮ, ಧ್ರುವ ಚಂದ್ರಶೇಖರ್ ದ್ವಿತೀಯ, ಕೊಕ್ಕೇಂಗಡ ದರ್ಶನ್ ತೃತೀಯ ಸ್ಥಾನ ಪಡೆದುಕೊಂಡರು.

ಇಂಡಿಯನ್ ಓಪನ್ ಕ್ಲಾಸ್ ವಿಭಾಗದಲ್ಲಿ ಡೆನ್ ತಿಮ್ಮಯ್ಯ ಪ್ರಥಮ, ಧ್ರುವ ಚಂದ್ರಶೇಖರ್ ದ್ವಿತೀಯ, ರೂಪೇಶ್ ತೃತೀಯ. ಎಕ್ಸ್‍ಯುವಿ ಕ್ಲಾಸ್ ವಿಭಾಗದಲ್ಲಿ ಮೇಕೇರಿರ ಕಾರ್ಯಪ್ಪ ಪ್ರಥಮ, ಶ್ರೀಗಣೇಶ್ ದ್ವಿತೀಯ, ಮಹಿಳಾ ವಿಭಾಗದಲ್ಲಿ ಪುಟ್ಟಿಚಂಡ ಡಯಾನ್ ಸೋಮಯ್ಯ ಪ್ರಥಮ, ಪೂಜಾ ಕರುಂಬಯ್ಯ ದ್ವಿತೀಯ ಸ್ಥಾನ ಪಡೆದರು. ಸುಮಾರು 40 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಮಾಂಡವಿ ಮೋಟಾರ್ಸ್ ಗೋಣಿಕೊಪ್ಪ ಶೋರೂಮ್ ವ್ಯವಸ್ಥಾಪಕ ಮನೋಜ್, ಜೆಸಿಐ ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಜೆಸಿಐ ಪ್ರಮುಖರುಗಳಾದ ಕೊಟ್ಟಂಗಡ ಸುಬ್ಬಯ್ಯ, ಅರಸು ನಂಜಪ್ಪ, ಕಾಟಿಮಾಡ ಗಿರಿ, ನಿರನ್ ಮೊಣ್ಣಪ್ಪ, ರಾಬಿನ್ ಸುಬ್ಬಯ್ಯ, ದಿಲನ್ ಚೆಂಗಪ್ಪ, ಪುಳ್ಳಂಗಡ ನಟೇಶ್ ಬಹುಮಾನ ವಿತರಣೆ ಮಾಡಿದರು.

Translate »