ಮೈಸೂರಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ
ಮೈಸೂರು

ಮೈಸೂರಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ

May 8, 2019

ಮೈಸೂರು: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ತಿಂಗಳ ಉಪವಾಸ ಇಂದಿನಿಂದ ಆರಂಭವಾಗಿದೆ. ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲಿಮರು ಪ್ರತಿದಿನ ಸಂಜೆ ಸೂರ್ಯಾಸ್ತದ ಬಳಿಕ ಆ ದಿನದ ಉಪ ವಾಸ ವ್ರತ ಕೈಬಿಡುವಾಗ ಮೊದಲಿಗೆ ಖರ್ಜೂರ ತಿಂದು ಬಳಿಕ ಊಟ, ಉಪಾ ಹಾರ ಸೇವಿಸುವುದು ನಡೆದು ಬಂದಿರುವ ಪವಿತ್ರ ಧಾರ್ಮಿಕ ಸಂಪ್ರದಾಯ.

ರಂಜಾನ್ ಉಪವಾಸ ಸಂದರ್ಭದಲ್ಲಿ ಖರ್ಜೂರದ ಮಾರಾಟವೂ ಭರ್ಜರಿ ಯಾಗಿಯೇ ಆರಂಭವಾಗಿದೆ. ಉಪವಾಸ ಆರಂಭಕ್ಕೂ ಮೊದಲೇ ಖರ್ಜೂರದ ಸಹಸ್ರಾರು ಕಾರ್ಟೂನ್‍ಗಳು ಮಾರಾಟ ಗೊಂಡಿವೆ. ಸಗಟು ವ್ಯಾಪಾರಿಯೊಬ್ಬರ ಪ್ರಕಾರ ಕಳೆದ 5 ದಿನದಲ್ಲಿ 5 ಲೋಡ್ ನಷ್ಟು ಖರ್ಜೂರದ ಕಾರ್ಟೂನ್‍ಗಳು ಭರ್ಜರಿಯಾಗಿಯೇ ಮಾರಾಟವಾಗಿದೆ.

ಮೈಸೂರಿನಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ವಿವಿಧ ಪ್ರಭೇದದ ಒಟ್ಟಾರೆ 20,000 ಕೆಜಿಗೂ ಹೆಚ್ಚಿನ ಖರ್ಜೂರ ಮಾರಾಟವಾಗಲಿದೆ. ಹಲವು ಕೋಟಿ ಗಳಷ್ಟು ವಹಿವಾಟು ನಡೆಯುತ್ತದೆ.

ಈ ಹಿನ್ನೆಲೆಯಲ್ಲಿ ರಂಜಾನ್ ಉಪ ವಾಸ ವ್ರತದ ತಿಂಗಳಲ್ಲಿ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ಖರ್ಜೂರಕ್ಕೆ ಧಾರ್ಮಿ ಕವಾಗಿಯೂ ಮೌಲ್ಯ ನೀಡಲಾಗಿದೆ. ಮದೀನಾದಲ್ಲಿ ಮುಸ್ಲಿಂ ಧರ್ಮಗುರುಗಳು ಖರ್ಜೂರದ ಗಿಡವನ್ನು ನೆಟ್ಟು ಬೆಳೆಸಿದ ರೆಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಖರ್ಜೂ ರದ ಹಣ್ಣು ಉಪವಾಸ ವ್ರತ ಸಂದರ್ಭದಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ.

ಸೌದಿ ಅರಬ್, ಇರಾನ್, ಇರಾಕ್ ಇನ್ನಿತರ ಮುಸ್ಲಿಂ ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯುವ ಖರ್ಜೂರವನ್ನು ಇತರೆ ದೇಶಗಳು ಆಮದು ಮಾಡಿಕೊಳ್ಳುತ್ತವೆ. ಅದೇ ರೀತಿ ಭಾರತದ ಮುಂಬೈ, ತಮಿಳು ನಾಡು ಇನ್ನಿತರ ಕಡೆಗಳಿÀಗೂ ರವಾನೆ ಯಾಗಿ ಅಲ್ಲಿಂದ ಇತರೆ ಪ್ರದೇಶಗಳಿಗೆ ಸಗಟು ವ್ಯಾಪಾರಿಗಳು ಮಾರಾಟಕ್ಕೆ ತರು ತ್ತಾರೆ. ಅಂತೆಯೇ ಇದೀಗ ಯಥೇಚ್ಛ ವಾಗಿ ಖರ್ಜೂರದ ಹಣ್ಣು ಮೈಸೂರಿನ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ.

ಮೈಸೂರಿನ ಸಂತೇಪೇಟೆ, ಮಂಡಿ ಮೊಹಲ್ಲಾ, ದೇವರಾಜ ಮಾರುಕಟ್ಟೆ, ಚಿಕ್ಕ ಮಾರುಕಟ್ಟೆ, ರಾಜೀವನಗರ, ಉದಯಗಿರಿ ಸೇರಿದಂತೆ ನಾನಾ ಕಡೆಗಳಲ್ಲಿ ನಾನಾ ಜಾತಿಯ ಖರ್ಜೂರದ ಹಣ್ಣುಗಳು ಮಾರಾಟ ವಾಗುತ್ತಿವೆ. ಪವಿತ್ರ ರಂಜಾನ್ ಹಬ್ಬದ ಎರಡು ದಿನ ಮೊದಲು ಸಹ ಖರ್ಜೂ ರದ ವ್ಯಾಪಾರ ಬಲು ಜೋರಾಗಿಯೇ ಆರಂಭವಾಗಿದೆ. ಖರ್ಜೂರದ ಅಂಗಡಿ ಗಳ ಮುಂದೆ ಜನಜಂಗುಳಿ ಸಾಕಷ್ಟು ಕಂಡು ಬರುತ್ತಿದೆ.

ಮೈಸೂರಿನ ಸಂತೆಪೇಟೆ ಬಳಿಯ ಖರ್ಜೂರದ ಹಣ್ಣುಗಳ ಸಗಟು ವ್ಯಾಪಾರಿ ಪದ್ಮಾವತಿ ಟ್ರೇಡಿಂಗ್ ಕಂಪ ನಿಯ ಶ್ರೀಪಾಲ್ ಛೋಪ್ರಾ ಮತ್ತು ಶ್ರೀಕಾಂತ್ ಛೋಪ್ರಾ ಅವರ ಪ್ರಕಾರ, ನಮ್ಮಲ್ಲಿ ಈ ಬಾರಿ ಸಾಕಷ್ಟು ಖರ್ಜೂರದ ದಾಸ್ತಾನಿದೆ. ಸಾಮಾನ್ಯವಾಗಿ ಉಪವಾಸ ವ್ರತ ಆರಂ ಭದ ನಂತರ ಖರ್ಜೂರ ಖರೀದಿಯಾಗು ತ್ತಿತ್ತು. ಆದರೆ ಈ ವರ್ಷದ ವಿಶೇಷ ವೆಂದರೆ ಹಬ್ಬದ 2-3 ದಿನಗಳಲ್ಲಿಯೇ ಖರ್ಜೂರಕ್ಕೆ ಬೇಡಿಕೆ ಬಂದಿದ್ದು, ಬಂದ ಸರಕು ಅಂದಂದೇ ಖಾಲಿಯಾಗುತ್ತಿದೆ ಎನ್ನುತ್ತಾರೆ.

ರಂಜಾನ್ ಮಾಸವಾಗಿರುವುದರಿಂದ ಹೆಚ್ಚು ವ್ಯಾಪಾರದ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿದ್ದು, ಹಂತ ಹಂತವಾಗಿ ವ್ಯಾಪಾರ ದಲ್ಲಿ ಏರಿಕೆ ಕಾಣುತ್ತಿದ್ದೇವೆ. ಮಾಮೂಲಿ ದಿನಗಳಿಗಿಂತ ರಂಜಾನ್ ಮಾಸದಲ್ಲಿ ಖರ್ಜೂರದ ಹಣ್ಣುಗಳ ವ್ಯಾಪಾರ ಶೇ.40ರಿಂದ 50ರಷ್ಟು ಹೆಚ್ಚಾಗಿರುತ್ತದೆ ಎನ್ನುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಖರ್ಜೂರದ ಬೆಲೆ ಅಧಿಕವಾಗಿದೆ. ಕಳೆದ ವರ್ಷ 1100 ರೂ. ಇದ್ದ ಖರ್ಜೂರ ಈ ವರ್ಷ 1600ರ ಗಡಿ ದಾಟಿದೆ. ಕ್ರಮೇಣ ರಂಜಾನ್ ಹಬ್ಬದ ಸನಿಹದಲ್ಲಿ ಈ ಬೆಲೆ ಕಡಿಮೆಯಾಗಬಹುದು ಎನ್ನಲಾಗಿದೆ.

ಖರ್ಜೂರದ ದರ ಆಯಾ ಪ್ರಭೇದಕ್ಕೆ ತಕ್ಕಂತೆ ಪ್ರತಿ ಕೆಜಿಗೆ ಕನಿಷ್ಠ ರೂ.180ರಿಂದ ಗರಿಷ್ಟ ರೂ.1800 ವರೆಗೂ, ಇನ್ನೂ ಅತ್ಯು ತ್ತಮ ಜಾತಿಯ ಖರ್ಜೂರವು ಇದೆ. ಇನ್ನೂ ಕನಿಷ್ಠ ಎಂದರೆ ಕೆಜಿಗೆ ರೂ.100ರ ಖರ್ಜೂರವು ದೊರೆಯುತ್ತದೆ. ಆದರೆ ಸಗಟು ವ್ಯಾಪಾರಿ ಶ್ರೀಪಾಲ್ ಛೋಪ್ರಾ ಪ್ರಕಾರ, ನಾವು ಗ್ರಾಹಕರಿಗೆ ಉತ್ತಮ ಗುಣಮಟ್ಟದ ರುಚಿಯಾದ ಖರ್ಜೂರದ ಹಣ್ಣುಗಳನ್ನೇ ಮಾರಾಟಕ್ಕಿಟ್ಟಿದ್ದೇವೆ. ಈ ಕಾರಣಕ್ಕಾಗಿ ಗ್ರಾಹಕರು ನಮ್ಮ ಬಳಿಯೇ ಹೆಚ್ಚಾಗಿ ಬರುತ್ತಾರೆ.

ರಂಜಾನ್ ಹಬ್ಬದ ಸಂದರ್ಭದಲ್ಲಿ ಸಿಹಿ ತಯಾರಿಸಲು ಅಥವಾ ಅಡುಗೆಗೆ ಖರ್ಜೂರವನ್ನು ಬಳಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಖರ್ಜೂರದ ಹಣ್ಣಿಗೆ ಭಾರೀ ಬೇಡಿಕೆ ಬರುವುದರಿಂದ ಬೆಲೆಯಲ್ಲಿಯೂ ಸ್ವಲ್ಪ ಹೆಚ್ಚಾಗಲಿದೆ. ಮೈಸೂರಿನ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿಯೂ ಖರ್ಜೂರದ ಖರೀದಿ ಜೋರಾಗಿಯೇ ಆರಂಭ ವಾಗಿದೆ. ಈ ಕಾರಣಕ್ಕಾಗಿ ಸೂಪರ್ ಮಾರ್ಕೆಟ್‍ಗಳು, ಮಾಲ್‍ಗಳಲ್ಲಿ ತಿಂಗಳ ಮೊದಲೇ ನಾನಾ ಜಾತಿಯ ಖರ್ಜೂ ರದ ಹಣ್ಣುಗಳ ದಾಸ್ತಾನು ಮಾಡಿಕೊಂಡಿ ರುತ್ತೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿ ಸದ ಪ್ರತಿಷ್ಠಿತ ಮಾಲ್‍ನ ಮುಖ್ಯಸ್ಥ.

ಪವಿತ್ರ ರಂಜಾನ್ ಉಪವಾಸ ಆರಂಭ ಗೊಳ್ಳುತ್ತಿದ್ದಂತೆ ಉದಯಗಿರಿ, ರಾಜೀವ್ ನಗರ, ಶಾಂತಿನಗರ, ಮಂಡಿ ಮೊಹಲ್ಲಾ, ಅಕ್ಬರ್ ರಸ್ತೆ ಇನ್ನಿತರೆ ಕಡೆಗಳಲ್ಲಿ ಬೀದಿ ಬದಿಗಳಲ್ಲಿಯೂ ತಳ್ಳು ಗಾಡಿಗಳಲ್ಲಿ ಖರ್ಜೂ ರದ ಹಣ್ಣುಗಳ ಮಾರಾಟ ನಡೆಯುತ್ತಿದೆ.
ರಾಜಕುಮಾರ್ ಭಾವಸಾರ್

Translate »