ಶಂಕರ ಜಯಂತಿಯೊಂದಿಗೆ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರಕ್ಕೆ ಒತ್ತಾಯ
ಮೈಸೂರು

ಶಂಕರ ಜಯಂತಿಯೊಂದಿಗೆ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರಕ್ಕೆ ಒತ್ತಾಯ

May 8, 2019

ಮೈಸೂರು: ರಾಜ್ಯ ಸರ್ಕಾರ ಶಂಕರ ಜಯಂತಿ ಜೊತೆಯ ಲ್ಲಿಯೇ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಗಳ ವಾರ ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಮಾನುಜರ ಸಹಸ್ರಮಾನೋತ್ಸವ ಸಮಿ ತಿಯ ವಿಪ್ರ ಮುಖಂಡರು ಕೈಗೊಂಡರು.

ರಾಮಾನುಜಾಚಾರ್ಯರ ಸಹಸ್ರಮಾ ನೋತ್ಸವ ವರ್ಷದ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ, ಶಂಕರ ಜಯಂತಿ ಆಚರಣೆ ಜಾರಿ ಸೇರಿ ದಂತೆ ಹಲವು ಯೋಜನೆಗಳು ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂಪಿಸಿದೆ. ಅಂತೆಯೇ ರಾಮಾ ನುಜರ ಜಯಂತಿಯನ್ನೂ ರಾಜ್ಯ ಸರ್ಕಾರ ಆಚರಿಸಲು ಆದೇಶ ನೀಡಬೇಕು ಎಂದು ಸಭೆ ಆಗ್ರಹಿಸಿತು.

ಈ ವೇಳೆ ಮಾತನಾಡಿದ ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಆಧ್ಯಾ ತ್ಮಿಕ ಗೊಂದಲಗಳಿಂದ ಬಿಡುಗಡೆಗೊಳಿಸಿ, ಭಕ್ತಿ ಸಿದ್ಧಾಂತದ ಮೂಲಕ ಸಮಾನತೆ ಸಾರುವ ಸಂದೇಶದೊಂದಿಗೆ ಕರ್ನಾಟಕ ದಲ್ಲಿದ್ದ ಎಲ್ಲಾ 58 ಜನಾಂಗದವರಿಗೂ ಮಂತ್ರ, ಸಂಸ್ಕಾರ ನೀಡಿದವರು ರಾಮಾ ನುಜಾಚಾರ್ಯರು. ದಾಸಯ್ಯರನ್ನು ಧರ್ಮ ಪ್ರಚಾರಕ್ಕೆ ಮತ್ತು ಸಮಾನತೆಗೆ ಹರಿಕಾರರನ್ನಾಗಿ ನೇಮಿಸಿ ರಾಜ ವಿಷ್ಣು ವರ್ಧನನ ಮೂಲಕ ಹೊಯ್ಸಳ ವಂಶದ ಕಲಾಶೈಲಿಯನ್ನು ಭಾರತೀಯ ಇತಿಹಾಸ, ಪುರಾಣ, ಆಗಮಗಳ ದೃಶ್ಯ ಪರಂಪರೆಗೆ ಬಳಸಿ, ಕರ್ನಾಟಕದ ಕೀರ್ತಿ ಪತಾಕೆ ವಿಶ್ವಾ ದ್ಯಂತ ವ್ಯಾಪಿಸಲು ಕಾರಣರಾದವರು. ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಸಾಹಿತ್ಯಗಳಿಗೆ ಪ್ರೇರಕರಾಗಿದ್ದಾರೆ ಎಂದರು.
ಹೀಗಾಗಿ ಶಂಕರ ಜಯಂತಿ ಜೊತೆ ಯಲ್ಲಿಯೇ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಆಚರಣೆಗೂ ಸರ್ಕಾರ ಆದೇಶಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೆಚ್.ಜಿ ಗಿರಿಧರ್, ಪುಟ್ಟಸ್ವಾಮಿ, ವಿಕ್ರಂ ಅಯ್ಯಂಗಾರ್, ರಾಜ ಗೋಪಾಲ್ ಅಯ್ಯಂಗಾರ್, ಕಲ್ಕರೆ ನಾಗ ರಾಜ್, ಯೋಗಾ ನರಸಿಂಹ ಮುರಳಿ, ಅರುಣ್, ಕೇಶವ ಮೂರ್ತಿ, ಚಕ್ರಪಾಣಿ, ಅನಂತಕೃಷ್ಣ, ಶೇಷಾದ್ರಿ, ಸಂಪತ್ ಅಯ್ಯಂಗಾರ್, ಸುಮಂತ್, ಮುರಳಿ, ಗಿರೀಶ್ ಇನ್ನಿತರರು ಭಾಗವಹಿಸಿದ್ದರು.

Translate »