ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಆರಾಧನೆ
ಮೈಸೂರು

ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಆರಾಧನೆ

April 25, 2019

ಗೋಣಿಕೊಪ್ಪ: ಅತ್ತೂರು ಗ್ರಾಮ ದಲ್ಲಿರುವ ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಸಮಾಧಿ ಸ್ಥಾನದಲ್ಲಿ ನಡೆದ ನಾರದ ಮುನಿಗಳ ಆರಾಧನಾ ಮಹೋತ್ಸವ ಭಾರತ ಹಾಗೂ ಇಸ್ರೇಲ್ ಭಾಂಧವ್ಯ ಬೆಸೆಯುವ ದಿಕ್ಕಿನಲ್ಲಿ ಮಹತ್ವ ಪಡೆಯಿತು.
ಸಮಾಧಿಯ ಸಮೀಪದಲ್ಲಿ 2 ಎಕರೆ ಪ್ರದೇಶದಲ್ಲಿ ಭಾರತ ಹಾಗು ಇಸ್ರೇಲ್ ನಡುವೆ ಭಾಂದವ್ಯ ವೃದ್ದಿಸುವ ದಿಕ್ಕಿನಲ್ಲಿ ಅಧ್ಯ ಯನ ಕೇಂದ್ರವನ್ನು ಸ್ಥಾಪಿಸುವುದಾಗಿ ಸಮಾಧಿ ಸ್ಥಳದ ದಾನಿ ಚಾಯಾ ನಂಜಪ್ಪ ಘೋಷಿ ಸಿದರು. ನಾರದ ಮುನಿಗಳ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ದಿಯಾ ಮಿನೋರ ಫೌಂಡೇಶನ್ ಆಶ್ರಯ ದಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಗೊಳ್ಳ ಲಿದೆ. ಫೌಂಡೇಶನ್ ಸದಸ್ಯರುಗಳಾದ ಉದ್ಯ ಮಿಗಳಾದ ಬ್ರಿಜೇಶ್ ರೆಡ್ಡಿ, ಪ್ರಕಾಶ್ ಕಾಮತ್ ಹಾಗೂ ಅಮಿತ್ ಶೆಟ್ಟಿ ಅವರು ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಸಮಾಧಿ ಸ್ತಾನದಲ್ಲಿ ದೀಪ ಬೆಳಗುವ ಮೂಲಕ ನಾರದ ಮುನಿಗಳಿಗೆ ಗೌರವ ಸೂಚಿ ಸಲಾಯಿತು. ದೀಪ ಬೆಳಗಿಸುವ ಸಂದರ್ಭ ಶಂಖನಾದದ ಮೂಲಕ ಪ್ರಾರ್ಥಿಸಲಾ ಯಿತು. ನಾರದ ಮುನಿಗಳ ಇಸ್ರೇಲಿ ಅನುಯಾ ಯಿಗಳು ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ನಡೆಸಿ ಕೊಟ್ಟರು. ಮಾಜಿ ಸಂಸದ ಸಿ.ಹೆಚ್.ವಿಜಯ ಶಂಕರ್ ಮಾತನಾಡಿ, ಮೋದಿ ಪ್ರಧಾನಿ ಯಾದ ನಂತರ ಭಾರತದಲ್ಲಿ ಭಯೋ ತ್ಪಾದಕ ಚಟುವಟಿಕೆಗೆ ಕಡಿವಾಣ ಬಿದ್ದಿದೆ. ಹಿಂದೂ ಜನಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ನಮ್ಮ ಪೂರ್ವ ಜರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಕೂಡು ಸಂಸಾರದಲ್ಲಿ 12 ಮಕ್ಕಳಿರುತ್ತಿ ದ್ದರು. ಆದರೆ ಇಂದಿನ ಪೀಳಿಗೆ ವೃತ್ತಿಗೆ ಪ್ರಾಮುಖ್ಯತೆ ನೀಡಿ ನಾಲ್ಕೈದು ವರ್ಷಗ ನಂತರ ಒಂದು ಅಥವಾ ಎರಡು ಮಕ್ಕ ಳಿಗೆ ತಮಗೆ ತಾವೇ ಕಡಿವಾಣ ಹಾಕಿ ಕೊಳ್ಳುತ್ತಿರುವುದು ಎಚ್ಚರಿಕೆ ಗಂಟೆಯಾ ಗಿದೆ. ಈ ಬಗ್ಗೆ ಹಿಂದೂ ಪ್ರಮುಖರು ಹಾಗೂ ಸಂಘನೆಗಳು ಗಮನ ಹರಿಸ ಬೇಕಾಗಿದೆ ಎಂದು ತಿಳಿಸಿದರು.

ಭಾಷಣಕಾರರಾಗಿ ಭಾಗವಹಿಸಿ ಮಾತ ನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹ ಮುಕುಂದ್, ಭಾರತ ಹಾಗೂ ಇಸ್ರೇಲ್ ದೇಶಗಳು 2000 ವರ್ಷ ಮುಸ್ಲಿಮ್ ಭಯೋತ್ಪಾದನೆಗೆ ಗುರಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಭಾರತ ಅರಬ್ ದೇಶಗಳಲ್ಲಿ ಇಸ್ರೇಲ್ ಶಾಂತಿಗಾಗಿ ಹೋರಾಡುತ್ತಿದೆ. ಸೋವಿಯತ್ ಯೂನಿಯನ್ ವಿಭಜನೆ ನಂತರ 1992 ರಲ್ಲಿ ಭಾರತ ಇಸ್ರೇಲ್ ಜೊತೆ ವಿವಿದ ಕ್ಷೇತ್ರಗಳಲ್ಲಿ ಕೈಜೋಡಿಸಲು ಅಣಿಯಾ ಯಿತು ಎಂದರು.

ಹಿಂದೂಗಳು ಹಾಗೂ ಯಹೂದಿಗಳು ಧಾರ್ಮಿಕ ವಿಚಾರದ ಗುರು-ಶಿಷ್ಯ ಪರಂ ಪರೆ, ಧ್ಯಾನ ಹಾಗೂ ಜನಗಳ ಮಧ್ಯೆ ಸಂವಹನ ಕಾರ್ಯದಲ್ಲಿ ಒಂದೇ ರೀತಿಯ ಸಾಮಥ್ರ್ಯವನ್ನು ಒಂದೇ ರೀತಿಯ ಸಾಮ್ಯತೆ ಕಾಣಬಹುದು. ಇತ್ತೀಚಿನ ಪುಲ್ವಾಮ ಆತ್ಮಾಹುತಿ ದಾಳಿಯ ನಂತರ ಇಸ್ರೇಲ್ ಭಾರತಕ್ಕೆ ತನ್ನದೇ ಆದ ರಕ್ಷಣಾ ಕಾರ್ಯ ತಂತ್ರವನ್ನು ಒದಗಿಸುವ ಮೂಲಕ ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಕೈಜೋಡಿ ಸಿರುವುದು ಶ್ಲಾಘನೀಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಭಾರತ ಹಾಗೂ ಇಸ್ರೇಲ್ ನಡುವಿನ ಭಾಂದವ್ಯವನ್ನು ವೃದ್ದಿಸುವ ನಿಟ್ಟಿವಲ್ಲಿ ಎರಡು ಹಂತದ ಸಂವಾದ ಕಾರ್ಯಕ್ರಮ ನಡೆಯಿತು. ‘ಭಾರತ ಹಾಗೂ ಇಸ್ರೇಲ್ ನಡುವಿನ ಬಾಂದವ್ಯ ವೃದ್ದಿ ಸವಾಲುಗಳು ಹಾಗೂ ಸಾಂಸ್ಕøತಿಕ ಹಾಗೂ ಆರ್ಥಿಕ ನೆಲೆಗಟ್ಟಿ ನಲ್ಲಿ ಭಾಂದವ್ಯ ವೃದ್ಧಿ’ ವಿಷಯದಲ್ಲಿ ಸಂವಾದ ನಡೆಯಿತು.

ಎಡಿಜಿಪಿ ಭಾಸ್ಕರ್ ರಾವ್, ನಟಿ ಮಾಳ ವಿಕ, ಮಾಜಿ ರಕ್ಷಣಾ ಕಾರ್ಯದರ್ಶಿ ಶೇಖರ್, ವಿಹೆಚ್‍ಪಿ ರಾಷ್ಟ್ರೀಯ ಸಹ ಕಾರ್ಯ ದರ್ಶಿ ವಿಜ್ಞಾನಂದ, ವಿಹೆಚ್ ಕ್ಷೇತ್ರ ಪ್ರಮುಖ್ ಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರವಾರಕ ಗಿರಿಧರ್ ಉಪಾಧ್ಯಾಯ, ವಿಶ್ವಹಿಂದೂ ಫೌಂಡೇ ಶನ್ ಪರಿಪೂರ್ಣನಂದಾಜಿ, ಬಾರ್ ಕ್ಲೇಸ್ ಬ್ಯಾಂಕ್‍ನ ಮಾಜಿ ಸಿಇಓ ಸತ್ಯ ಬನ್ಸಲ್ ಶಾಸ್ತ್ರಿ ಭಾಗವಹಿಸಿದ್ದರು.

Translate »