ಸಿದ್ದಗಂಗಾ ಶ್ರೀಗಳು ಜೀವನ ಮೌಲ್ಯಗಳ ಪ್ರತೀಕ
ಕೊಡಗು

ಸಿದ್ದಗಂಗಾ ಶ್ರೀಗಳು ಜೀವನ ಮೌಲ್ಯಗಳ ಪ್ರತೀಕ

March 11, 2019

ಮಡಿಕೇರಿ: ರಾಮಕೃಷ್ಣ ಪರ ಮಹಂಸರ ತರುವಾಯ ಕಣ್ಣಿಗೆ ಕಾಣುವ ದೇವರಾಗಿ ಜೀವಿಸಿದ್ದವರು ತುಮಕೂರಿನ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳು ಎಂದು ಅರಮೇರಿ ಕಳಂ ಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು.

ನಗರದ ಮಹದೇವಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಅಕ್ಕನ ಬಳಗದ ವತಿಯಿಂದ ಆಯೋಜಿ ಸಿದ್ದ ಶ್ರೀ ಸಿದ್ದಗಂಗಾ ಶಿವಕುಮಾರ ಮಹಾ ಸ್ವಾಮೀಜಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅರಮೇರಿ ಕಳಂಚೇರಿ ಮಠಾ ಧೀಶರು, ಸಾಮಾಜಿಕ ಕ್ರಾಂತಿ, ಜೀವನ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದ ಸಿದ್ದ ಗಂಗಾ ಶ್ರೀಗಳು ಇತಿಹಾಸದ ದೊಡ್ಡ ಬಂಡಾರದಂತೆ, ಮಹಾನ್ ವಿಶ್ವವಿದ್ಯಾಲಯ ದಂತೆ ಇದ್ದವರು. ಅವರಿಗೆ ದೊರಕದಿರುವ ಬಿರುದುಗಳೇ ಇಲ್ಲ. ಹೀಗಿದ್ದರೂ ಅಹಂ ಇಲ್ಲದೇ ಸಾರ್ಥಕ ಜೀವನ ಸಾಗಿಸಿದ ಹಿರಿಮೆ ಸ್ವಾಮೀಜಿಗಳದ್ದು ಎಂದು ಸ್ಮರಿಸಿದರು.

ದೀನದಲಿತರ, ಶೋಷಿತರ ಮನಸ್ಸಲ್ಲಿ ದೇವರನ್ನು ಕಂಡ ಸಿದ್ದಗಂಗಾ ಸ್ವಾಮೀಜಿ ಗಳ ಚಿಂತನೆಯನ್ನು ಜೀವನದಲ್ಲಿ ನಾವೆಲ್ಲಾ ಅಳವಡಿಸಿಕೊಂಡು ಅವರೆತ್ತರಕ್ಕೆ ಬೆಳೆಯಲು ಪ್ರಯತ್ನಿಸೋಣ ಎಂದು ಶಾಂತ ಮಲ್ಲಿಕಾರ್ಜುನರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಸ್ವಾಮೀಜಿಗಳಿಗೆ ಭಾರತ ರತ್ನ ದೊರಕಲೇಬೇಕಿತ್ತು ಎಂಬ ಅನಿಸಿಕೆ ಹಲವರದ್ದಾಗಿತ್ತು. ಇದಕ್ಕಾಗಿ ಪ್ರಯತ್ನಗಳು ಮುಂದುವರೆದಿದ್ದು ಮರ ಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತರತ್ನ ದೊರಕುವಂತಾಗಲಿ ಎಂದು ಹಾರೈಸಿದರು. ಸಿದ್ದಗಂಗಾ ಮಠವನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ವಾಗಿ ಬೆಳೆಸದೇ ಮನುಕುಲದ ಮಠವಾಗಿ ಬೆಳೆಸಿದ ಹಿರಿಮೆ ಸ್ವಾಮಿಗಳದ್ದು ಎಂದು ಹರ್ಷ ವ್ಯಕ್ತಪಡಿಸಿದ ಬೋಪಯ್ಯ, ಪ್ರತೀ ನಿತ್ಯ ಮಠದಲ್ಲಿನ 10 ಸಾವಿರಕ್ಕೂ ಅಧಿಕ ಮಕ್ಕಳನ್ನು ಮುತ್ತಜ್ಜನ ರೀತಿಯಲ್ಲಿ ಪಾಲನೆ ಮಾಡುತ್ತಿದ್ದ ಹಿರಿಯ ಜೀವ ವದು ಎಂದು ಸ್ಮರಿಸಿಕೊಂಡರು.

ರಾಜ್ಯ ಸರ್ಕಾರಿ ಅಭಿಯೋಜಕ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಶ್ರೀಗಳು ಇಹ ಲೋಕ ತ್ಯಜಿಸಿದ್ದರೂ ಕೋಟ್ಯಾಂತರ ಭಕ್ತರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ಶ್ರೀಗಳು ಶಿವೈಕ್ಯರಾದಾಗ 16 ಲಕ್ಷಕ್ಕೂ ಅಧಿಕ ಮಂದಿ ಮಠಕ್ಕೆ ಬಂದದ್ದು ಸ್ವಾಮೀಜಿಗಳ ಬಗೆಗಿನ ಭಕ್ತರ ಭಾವನೆಗೆ ನಿದರ್ಶನ ವಾಗಿದೆ. ಮಠ ಎಂದರೆ ಅದು ಸಿದ್ದಗಂಗಾ ಮಠ, ಸ್ವಾಮೀಜಿ ಎಂದರೆ ಶಿವಕುಮಾರ ಸ್ವಾಮೀಜಿ ಎಂದೇ ಮಾದರಿಯಾಗಿದ್ದ ಪರಂ ಪರೆ ಅದಾಗಿತ್ತು. ಸ್ವತಃ ವಾಜಪೇಯಿ ಅವರೇ ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದಗಂಗಾ ಎಂದು ವ್ಯಾಖ್ಯಾನಿಸಿದ್ದರು. ಸ್ವಾಮೀಜಿ ಸದಾ ಸಮಾಜಮುಖಿಯಾ ಗಿದ್ದರಿಂದಲೇ ಇಷ್ಟೆಲ್ಲಾ ಸಾಧನೆ ಸಾಧ್ಯ ವಾಯಿತು ಎಂದು ಹೇಳಿದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತ ನಾಡಿ, ಕಾಯಕಮಠವಾಗಿ ಸಿದ್ದಗಂಗಾ ಮಠವನ್ನು ಶ್ರೀಗಳು ರೂಪಿಸಿದ್ದರು. ತಾನು ರಾಜ್ಯದ ಸಚಿವನಾಗಿದ್ದಾಗ ಮುಖ್ಯಮಂತ್ರಿಗ ಳೊಂದಿಗೆ ಅನೇಕ ಬಾರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಕಾಯಕ ಕಂಡು ಮೂಕ ವಿಸ್ಮಿತನಾಗಿದ್ದೆ. ರಾಮಕೃಷ್ಣ ಪರಮಹಂ ಸರು, ವಿವೇಕಾನಂದರ ಬಳಿಕ ನಿಸ್ವಾರ್ಥ ಸಂತ ಎಂಬುವವರಿದ್ದರೆ ಆ ಖ್ಯಾತಿ ಸಿದ್ದ ಗಂಗಾ ಶ್ರೀಗಳಿಗೆ ಸಲ್ಲಬೇಕು ಎಂದರು.
ಸಿದ್ದಗಂಗಾ ಮಠದಲ್ಲಿನ ಶ್ರೀ ಸಿದ್ದಲಿಂಗೇ ಶ್ವರ ಕನ್ನಡ ಪಂಡಿತ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಪಿ.ಎಸ್.ನಿರಂಜನ್ ಮಾತ ನಾಡಿ, ಕಣ್ಣಿಗೆ ಕಾಣುತ್ತಿದ್ದ, ನಡೆದಾಡುತ್ತಿದ್ದ ದೇವರಾಗಿ ಭಕ್ತಕೋಟಿಯ ಪಾಲಿಗಿದ್ದ ಶಿವಕುಮಾರಸ್ವಾಮೀಜಿಗಳು ದೇವರನ್ನು ನೋಡದವರ ಪಾಲಿಗೆ ಸಾಕ್ಷಾತ್ ದೇವ ರಂತಿದ್ದರು ಎಂದು ಹೇಳಿದರು.

ಶಿಕ್ಷಣದಲ್ಲಿಯೂ ಸಮಾನತೆಯನ್ನು ಪ್ರತಿ ಪಾದಿಸಿದ ಶ್ರೀಗಳು ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದರು. ಮಠದಲ್ಲಿನ ಸಣ್ಣ ಮಕ್ಕಳ ಮಾತನ್ನು ತಾಳ್ಮೆಯಿಂದ ಕೇಳುವ ಸ್ವಭಾವ ಶ್ರೀಗಳಿಗಿತ್ತು. ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿದ್ದ ಶ್ರೀಗಳು ಅನಾ ರೋಗ್ಯದಿಂದ ಇದ್ದಾಗಲೂ ರಾಷ್ಟ್ರಗೀತೆಗೆ ಎದ್ದುನಿಂಲ್ಲುತ್ತಿದ್ದರು.

ಕಾರ್ಯಕ್ರಮಕ್ಕೆ ಮುನ್ನ ಗಣ್ಯರು ಗೆಜ್ಜೆ ಸಂಗಪ್ಪ ಸಭಾಂಗಣದಲ್ಲಿದ್ದ ಶ್ರೀಗಳ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿದರು. ಶ್ರೀ ಬಸ ವೇಶ್ವರ ದೇವಾಲಯದಿಂದ ಮಡಿಕೇರಿಯ ಮುಖ್ಯರಸ್ತೆಯಲ್ಲಿ ಶ್ರೀಗಳ ಭಾವಚಿತ್ರದ ಮೆರ ವಣಿಗೆ ಸಾಗಿದ ಸಂದರ್ಭ ಮಹಿಳೆಯರು ಪೂರ್ಣ ಕುಂಭದೊಂದಿಗೆ ಪಾಲ್ಗೊಂಡಿದ್ದರು. ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡ ಗಳೂ ಮೆರವಣಿಗೆಯಲ್ಲಿ ಗಮನ ಸೆಳೆದವು.

Translate »