ನೆರೆ ಸಂತ್ರಸ್ತರಿಗೆ ಮುಸ್ಲಿಂ ಸಂಘದ ನೆರವು
ಕೊಡಗು

ನೆರೆ ಸಂತ್ರಸ್ತರಿಗೆ ಮುಸ್ಲಿಂ ಸಂಘದ ನೆರವು

March 11, 2019

ವಿರಾಜಪೇಟೆ: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರ ಸ್ತರಿಗೆ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಿಂದ 1,25,000 ರೂ. ನೆರವಿನ ಚೆಕ್ಕನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ಮೊಹ್ಮದ್ ಶುಹೇಬ್, ಉಪಾಧ್ಯಕ್ಷ ಕನ್ನಡಿಯಂಡ ಎ.ಜುಬೇರ್, ನಿರ್ದೇಶಕರುಗಳಾದ ಎಸ್.ಹೆಚ್.ಮೈನೂದ್ಧಿನ್, ಎಂ.ಎಸ್.ಮೊಹ್ಮದ್ ಶಫಿ, ಎಂ.ಎ.ಜಿಯಾವುಲ್ಲಾ, ಎಂ.ಎ.ಯೂಸುಫ್, ಜೆ.ಎಸ್.ಸಮೀವುಲ್ಲಾ, ಎ.ಕೆ.ಜಬೀವುಲ್ಲಾ, ತಸ್ನಿಂ ಅಕ್ತರ್, ಡಿ.ಎಂ.ಮನ್ಸೂರ್ ಆಲಿ, ವ್ಯವಸ್ಥಾಪಕ ಕೆ.ಐ.ಮುಕ್ತಾರ್ ಅಹ್ಮದ್, ಲೆಕ್ಕಿಗರಾದ ಎಂ.ಜಿ.ಜಾವಿದ್ ಅವರುಗಳು ಹಾಜರಿದ್ದರು.

Translate »