ಮನೆ ಬೀಗ ಒಡೆದು 54 ಸಾವಿರ ರೂ. ಚಿನ್ನಾಭರಣ ಕಳವು
ಮೈಸೂರು

ಮನೆ ಬೀಗ ಒಡೆದು 54 ಸಾವಿರ ರೂ. ಚಿನ್ನಾಭರಣ ಕಳವು

March 11, 2019

ಮೈಸೂರು: ಮನೆಯ ಬೀಗ ಒಡೆದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದ ಹೆಚ್ ಬ್ಲಾಕ್, 8ನೇ ಮುಖ್ಯರಸ್ತೆ ನಿವಾಸಿ ಮೈತ್ರಿ ಡಿ.ಸಿಲ್ವ ಮನೆ ಯಲ್ಲಿ 54 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಮೈತ್ರಿ ಅವರು ಮಾ.6ರಂದು ಬೆಳಿಗ್ಗೆ 11 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೊರಹೋಗಿ, ಮಧ್ಯಾಹ್ನ ವಾಪಸ್ಸಾಗುವಷ್ಟರಲ್ಲಿ ಕಳ್ಳತನವಾಗಿತ್ತು. ಖದೀಮರು 2 ಸೂಟ್‍ಕೇಸ್‍ನಲ್ಲಿದ್ದ ಚಿನ್ನದ ಜುಮುಕಿ, ಓಲೆ, ರಿಂಗ್, ಸರ, ಶಿಲುಬೆ ಆಕಾರದ ಪೆಂಡೆಂಟ್ ಅನ್ನು ಕಳ್ಳತನ ಮಾಡಿದ್ದಾರೆಂದು ಮೈತ್ರಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »