ವಿರಾಜಪೇಟೆಯಲ್ಲಿ ಮಾದರಿ ನ್ಯಾಯಾಲಯ ಕಾರ್ಯಕ್ರಮ
ಕೊಡಗು

ವಿರಾಜಪೇಟೆಯಲ್ಲಿ ಮಾದರಿ ನ್ಯಾಯಾಲಯ ಕಾರ್ಯಕ್ರಮ

March 11, 2019

ವಿರಾಜಪೇಟೆ: ದೇಶದಲ್ಲಿ ಕಾನೂನಿಗೆ ಸಂವಿಧಾನವೇ ಶ್ರೇಷ್ಠ. ನಾವು ಗಳು ಸಂವಿಧಾನದ ಆಶಯಕ್ಕೆ ಪೂರಕವಾ ಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ, ಕೆವಿಜಿ ಕಾನೂನು ಕಾಲೇಜು ಸುಳ್ಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಮಾದರಿ ನ್ಯಾಯಾ ಲಯ ಕಾರ್ಯಕ್ರಮ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನ್ಯಾಯಾಧೀಶ ಜಯಪ್ರಕಾಶ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾನೂನಿನ ಅರಿವು ಇದ್ದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರಿಗೂ ಕಾನೂನಿನ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕಾನೂನಿನ ಅರಿವು ಪಡೆದುಕೊಳ್ಳುವುದು ಉತ್ತಮ. ನ್ಯಾಯ ವಾದಿಗಳು ಕಾನೂನಿನ ದೃಷ್ಠಿಯಲ್ಲಿ ನ್ಯಾಯ ದೊರಕಿಸಬೇಕು. ನ್ಯಾಯಾಲಯದಲ್ಲಿ ಶಿಸ್ತು ಸೂಕ್ಷ್ಮತೆ ಹಾಗೂ ಭಾಷೆಯನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಲಕ್ಷ್ಮಿ ಮಾತ ನಾಡಿ, ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಬೇಕು. ವಿದ್ಯಾರ್ಥಿ ಜೀವನ ದಲ್ಲಿ ದುಶ್ಚಟಗಳನ್ನು ದೂರಮಾಡಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಗುರಿ ಯನ್ನು ಮುಂದಿಟ್ಟುಕೊಂಡು ಶಿಸ್ತು ಮತ್ತು ಛಲದಿಂದ ಜೀವನದಲ್ಲಿ ಕಲಿಯುವಂತ ದನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಡಾ, ಟಿ.ಕೆ.ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾ ರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕಾನೂನಿನ ಮಹತ್ವವನ್ನು ತಿಳಿದುಕೊಳ್ಳುವಂತಾ ಗಬೇಕು ಎಂದರು.
ವೇದಿಕೆಯಲ್ಲಿ ವಿರಾಜಪೇಟೆ ವಕೀಲ ರಾದ ಎಂ.ಎಂ.ಪೂವಣ್ಣ, ಸುಳ್ಯದ ಕೆವಿಜಿ ಕಾನೂನು ಕಾಲೇಜಿನ ಪ್ರಾಂಶುಪಾಲ ಉದ ಯಕೃಷ್ಣ, ಪ್ರೊ.ವೈ.ಜಯರಾಂ, ವಿರಾ ಜಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಎಚ್.ಬಿ.ವೇಣುಗೋ ಪಾಲ್, ಪ್ರೊ.ಎಂ.ಬಿ.ದಿವ್ಯ ಇತರರು ಉಪ ಸ್ಥಿತರಿದ್ದರು. ಉಪನ್ಯಾಸಕ ಎಂ.ಎಸ್.ವನೀತ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿ ಜರೀಟಾ ಮತ್ತು ಸಂಗೀತ ನಿರೂಪಿಸಿದರೆ, ಪ್ರೊ.ಆರ್. ದಿವ್ಯ ವಂದಿಸಿದರು. ಬಳಿಕ ಮಾದರಿ ನ್ಯಾಯಾಲಯ ಕಾರ್ಯಕ್ರಮ ನಡೆಯಿತು.

Translate »