ಮಕ್ಕಳ ವಿಕಲತೆ ದೂರ ಮಾಡಲು  ಪೋಲಿಯೋ ಲಸಿಕೆ ಪೂರಕ
ಕೊಡಗು

ಮಕ್ಕಳ ವಿಕಲತೆ ದೂರ ಮಾಡಲು ಪೋಲಿಯೋ ಲಸಿಕೆ ಪೂರಕ

March 11, 2019

ಮಡಿಕೇರಿ: ಐದು ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ವಿಕಲತೆಯಿಂದ ದೂರ ಮಾಡಿ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕರೆ ನೀಡಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಶಿಶುಗಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನು ಕಡ್ಡಾಯ ವಾಗಿ ಹಾಕಿಸಬೇಕು ಎಂದು ಕಾವೇರಮ್ಮ ಸೋಮಣ್ಣ ಅವರು ಮನವಿ ಮಾಡಿದರು. ಪೋಲಿಯೋ ಸಂಬಂಧಿಸಿದಂತೆ 2007 ರಿಂದ ರಾಜ್ಯದಲ್ಲಿ ಹಾಗೂ 2011 ರಿಂದ ದೇಶದಲ್ಲಿ ವರದಿಯಾಗಿಲ್ಲ. ಆದರೂ ಸಹ ಭಾರತದ ನೆರೆ ಹೊರೆಯ ರಾಷ್ಟ್ರಗಳಲ್ಲಿ ಪೋಲಿಯೋ ಕಂಡು ಬರುತ್ತಿರುವುದ ರಿಂದ ಈ ಕಾರ್ಯಕ್ರಮ ಮುಂದುವರಿಸಲಾ ಗಿದೆ ಎಂದು ನಗರಸಭಾ ಅಧ್ಯಕ್ಷರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತ ನಾಡಿ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ 39,015 ಮಕ್ಕಳು ಇದ್ದು, ಇವರಲ್ಲಿ 4,602 ನಗರ ಮತ್ತು 34,413 ಗ್ರಾಮೀಣ ಪ್ರದೇ ಶದ ಮಕ್ಕಳಿದ್ದಾರೆ. ಇವರಲ್ಲಿ 2,662 ವಲ ಸಿಗ ಮಕ್ಕಳಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಒಟ್ಟು 465 ಬೂತ್‍ಗಳನ್ನು ತೆರೆಯಲಾಗಿದೆ. ಅಲ್ಲದೆ 20 ಟ್ರಾನ್ಸಿಸ್ಟ್ ತಂಡ ಗಳು, 6 ಸಂಚಾರಿ ಲಸಿಕಾ ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ. 1,950 ಮಂದಿ ಲಸಿಕೆ ಹಾಕುವವರು, 87 ಮಂದಿ ಮೇಲ್ವಿಚಾರ ಕರು, 966 ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಅವರು ಮಾಹಿತಿ ನೀಡಿದರು.
ಮಾರ್ಚ್ 11 ಮತ್ತು 12 ರಂದು ಬಿಟ್ಟು ಹೋದ 5 ವರ್ಷದೊಳಗಿನ ಮಕ್ಕಳಿಗೆ ಮನೆ ಮನೆ ಭೇಟಿ ನೀಡಿ ಪೊಲಿಯೋ ಹನಿ ಹಾಕಲಾಗುತ್ತದೆ ಎಂದು ಡಾ.ಮೋಹನ್ ಅವರು ತಿಳಿಸಿದರು.

ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಐದು ವರ್ಷದೊ ಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸಲು ಮರೆಯಬಾರದು ಎಂದು ಕೋರಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಶ್ವಿನಿ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ಕುಲಕರ್ಣಿ, ರೋಟರಿ ಮಿಸ್ಟಿಹಿಲ್ಸ್‍ನ ರವಿಶಂಕರ್, ರೋಟರಿ ಮಡಿಕೇರಿ ವಿಭಾಗದ ಅಜಯ್ ಸೂದ್, ಮಾತಂಡ ಸುರೇಶ್ ಚಂಗಪ್ಪ, ಪಲ್ಸ್ ಪೊಲಿಯೋ ಕಾರ್ಯಕ್ರಮ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಮೇಶ್, ಆರ್‍ಸಿಎಚ್ ಅಧಿಕಾರಿ ಡಾ.ಆನಂದ್, ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಧಿಕಾರಿ ಡಾ.ಶಿವಕುಮಾರ್, ಡಾ.ಮಂಜು ನಾಥ್, ಡಾ.ಪುರುಷೋತ್ತಮ, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ದೇವರಾಜು, ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ದಿವಾಕರ ಇತರರು ಇದ್ದರು.

Translate »