ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದದ್ದು ಕೇವಲ ಪ್ರಚಾರ ತಂತ್ರ
ಮೈಸೂರು

ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದದ್ದು ಕೇವಲ ಪ್ರಚಾರ ತಂತ್ರ

March 11, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದಲ್ಲಿ ಪೌರ ಕಾರ್ಮಿಕರ ಪಾದ ತೊಳೆದದ್ದು ಕೇವಲ ಪ್ರಚಾರ ತಂತ್ರವಾಗಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಇಂದಿಲ್ಲಿ ಟೀಕಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ವಾಸ್ತವವಾಗಿ ಪೌರ ಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ಏಳಿಗೆಗೆ ಮೋದಿ ಏನನ್ನೂ ಮಾಡಿಲ್ಲ. ಪೌರ ಕಾರ್ಮಿಕರ ಪಾದ ತೊಳೆದು ದರಿಂದ ಈ ವರ್ಗ ಶೋಷಣೆಯಿಂದ ಮುಕ್ತವಾಗ ಲಿಲ್ಲ. ಶೋಚನೀಯ ಪರಿಸ್ಥಿತಿಯೂ ದೂರಾಗ ಲಿಲ್ಲ. ಹೀಗಾಗಿ ಅವರ ಉದ್ಧಾರಕ್ಕೆ ಏನನ್ನೂ ಮಾಡದೇ ಕೇವಲ ಈ ರೀತಿಯ ಪ್ರಚಾರ ತಂತ್ರ ಅನುಸರಿಸುವುದಕ್ಕೆ ಈ ವರ್ಗ ಮರುಳಾಗುವುದಿಲ್ಲ ಎಂದು ಹೇಳಿದರು.

ದೇಶದಲ್ಲಿನ 1.20 ಲಕ್ಷ ಮಲ ಹೊರುವ ಕಾರ್ಮಿಕರು, 12 ಲಕ್ಷ ಸಫಾಯಿ ಕರ್ಮಚಾರಿಗಳ ಮತ್ತು ಅವರ ಅವಲಂಬಿತರನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ಅವರ ಸಾಮಾಜಿಕ, ಆರ್ಥಿಕ ಮತ್ತು ಜೀವನ ಭದ್ರತೆಗೆ ಏನೂ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ ಎಂದರು.

ರಾಜ್ಯ ಸರ್ಕಾರವೂ ಸಹ ಇಲ್ಲಿನ ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಇನ್ನು ಒಂದು ತಿಂಗಳೊಳಗೆ ಅದನ್ನು ಈಡೇರಿಸದಿದ್ದಲ್ಲಿ ಎಲ್ಲಾ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು. ವಕೀಲ ಆರ್.ಲಕ್ಷ್ಮಣ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »