ಆನೆ ಸಾವು
ಕೊಡಗು

ಆನೆ ಸಾವು

July 16, 2018

ಗೋಣಿಕೊಪ್ಪಲು: ಬೆಮ್ಮತ್ತಿ ಕಾಫಿ ಬೆಳೆಗಾರ ಪಾರುವಂಗಡ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಸೆರೆಯಾಗಿದ್ದ ಕಾಡಾನೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಭಾನುವಾರ ಬೆಳಗ್ಗೆ ಸಾವನ್ನಪ್ಪಿದೆ.

ಸೆರೆಯಾಗಿದ್ದ 40 ವರ್ಷ ಪ್ರಾಯದ ಗಂಡಾನೆಯ ಕಾಲಿನ ಊದಿಕೊಂಡಿರುವ ಜಾಗದಲ್ಲಿ ಕೀವನ್ನು ಶನಿ ವಾರ ವೈದ್ಯರು ಹಾಗೂ ಸಿಬ್ಬಂದಿ ಸಹಾಯ ದಲ್ಲಿ ಹೊರ ತೆಗೆದಿದ್ದರು. ಕಾಲಿನ ಮೇಲ್ಪದರ ಕೊಳೆತಿರುವುದರಿಂದ ಕಾಲಿಗೆ ಬಲವಿಲ್ಲದಾ ಗಿತ್ತು. ಗಾಯದ ಒಳಭಾಗದಲ್ಲಿ ಕೊಳೆತು ಕಾಲಿನ ಮೇಲಿನವರೆಗೂ ಆಕ್ರಮಿಸಿಕೊಂಡು ಹೊಟ್ಟೆಗೆ ಸೇರಿದ್ದೇ ಸಾವಿಗೆ ಕಾರಣವಾಗಿದೆ. ಕಳೆದ ಗುರುವಾರ ಸಂಜೆ 6 ಗಂಟೆಗೆ ಸೆರೆ ಹಿಡಿಯಲಾಗಿತ್ತು. ಪಶು ವೈದ್ಯಾಧಿಕಾರಿ ಮುಜಿಬ್ ರೆಹಮನ್ ಶವ ಪರೀಕ್ಷೆ ನಡೆಸಿದರು.

 

Translate »