ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದ ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಪ್ರವಾಹ ಪೀಡಿತರ ಸಂಕಷ್ಟ ಆಲಿಸಿದ ಸಚಿವ ಹೆಚ್.ಡಿ.ರೇವಣ್ಣ

August 19, 2018

ರಾಮನಾಥಪುರ: ಪಟ್ಟಣದಲ್ಲಿ ತೆರೆದಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತರ ಸಂಕಷ್ಟ ಆಲಿಸಿದರು.
ಕಾವೇರಿ ನದಿ ಪ್ರವಾಹ ಸಂತ್ರಸ್ತರಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರುವ ತೆರೆದಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಹಾಲು, ಬಿಸ್ಕತ್ ವಿತರಿಸಿ ಸಾಂತ್ವನ ಹೇಳಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು. ನಂತರ ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ನೀರಿನ ರಭಸಕ್ಕೆ ಮನೆಗಳು ಕುಸಿದಿರುವ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಮಾತನಾಡಿದರು.

ಕಾವೇರಿ ನದಿ ದಂಡೆಯಲ್ಲಿರುವ ಮನೆ ಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಹಾಗೂ ತಾಲೂಕು ಅಧಿಕಾರಿಗಳು ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಪ್ರ್ರವಾಹದಿಂದ 200 ಮನೆಗಳು ಜಲಾವೃತವಾಗಿವೆ. ಅವರೆಲ್ಲರಿಗೂ ತಾತ್ಕಾಲಿಕ ವಸತಿ ಊಟೋ ಪಚಾರ ಮಾಡಲಾಗಿದ್ದು, ಮುಂದಿನ ಒಂದು ತಿಂಗಳಿಗಾಗುವಷ್ಟು ಪಡಿ ತರ ವಿತರಣೆಗೆ ಸೂಚಿಸಲಾಗಿದೆ. ಪ್ರವಾಹ ತಗ್ಗಿದ ನಂತರ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿ ಅಂದಾಜಿಸಿ ಪರಿಹಾರ ವಿತರಿಸಲಾಗು ವುದು ಎಂದರು.

ಈ ಭಾಗದಲ್ಲಿ 10,000 ಎಕರೆ ಪ್ರದೇಶ ಅತಿ ವೃಷ್ಟಿಯಿಂದ ಹಾನಿಗೀಡಾಗಿರುವ ಅಂದಾ ಜಿದೆ. ಮಳೆ ಕಡಿಮೆಯಾದ ನಂತರ ಪರಿಹಾರ ವಿತರಣೆ ಆಗಲಿದೆ. ಸಕಲೇಶಪುರ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ ರಸ್ತೆ ಕಾಫಿ, ಏಲ್ಲಕ್ಕಿ ತೋಟಗಳು ಭೂಕುಸಿತ ದಿಂದ ಹಾನಿಗೊಳಗಾಗಿವೆ. ಸಕಲೇಶಪುರ ಸೋಮ ವಾರಪೇಟೆ ರಸ್ತೆ ದುರಸ್ತಿಗೆ 25 ಕೋಟಿ ರೂ.ಗೂ ಅಧಿಕ ವೆಚ್ಚವಾಗಲಿದೆ. ಮೊದಲಿಗೆ ಜನ, ಜಾನುವಾರು, ಜೀವ ರಕ್ಷಣೆಗೆ ನಮ್ಮ ಆದ್ಯತೆ. ಆ ನಂತರ ರಸ್ತೆಗಳನ್ನು ತ್ವರಿತವಾಗಿ ದುರಸ್ತಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಾಮಸ್ವಾಮಿ, ಹೊನ್ನವಳ್ಳಿ ಸತೀಶ್, ತಹಶೀಲ್ದಾರ್ ನಂದೀಶ್ ಇತರರು ಹಾಜರಿದ್ದರು

Translate »