ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: 62 ಸದಸ್ಯ ಸ್ಥಾನಗಳಿಗೆ 280 ಮಂದಿ ನಾಮಪತ್ರ ಸಲ್ಲಿಕೆ
ಚಾಮರಾಜನಗರ

ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: 62 ಸದಸ್ಯ ಸ್ಥಾನಗಳಿಗೆ 280 ಮಂದಿ ನಾಮಪತ್ರ ಸಲ್ಲಿಕೆ

August 19, 2018

ಚಾ.ನಗರ-163 ಮಂದಿ, ಕೊಳ್ಳೇಗಾಲ 117 ಮಂದು ಉಮೇದುವಾರಿಕೆ
ಚಾಮರಾಜನಗರ:  ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಒಟ್ಟು 62 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟು 280 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಚಾಮರಾಜನಗರ ನಗರಸಭೆಯ 31 ಸ್ಥಾನಗಳಿಗೆ 163 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೊಳ್ಳೇಗಾಲ ನಗರಸಭೆಯ 31 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ 117 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿತ್ತು. ಹೀಗಾಗಿ ಬಹುತೇಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಇದುವರೆವಿಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇಂದು ನೂರಾರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದರಿಂದ ನಾಮಪತ್ರ ಸ್ವೀಕರಿಸುವ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಸ್ಪರ್ಧಾಳುಗಳು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರೊಡನೆ ಮೆರವಣಿಗೆಯಲ್ಲಿ ತೆರಳಿ ನಿಗದಿಪಡಿಸಿದ್ದ ಸ್ಥಳದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಚಾಮರಾಜನಗರ ನಗರಸಭೆ 1ನೇ ವಾರ್ಡ್‍ನಿಂದ 16ನೇ ವಾರ್ಡ್‍ವರೆಗೆ ತಾಪಂ ಕಾರ್ಯಾಲಯದ ಪಕ್ಕದಲ್ಲಿರುವ ಸಾಮಥ್ರ್ಯಸೌಧ ಕೊಠಡಿಯಲ್ಲಿ ನಾಮಪತ್ರ ಸ್ವೀಕರಿಸಲಾಯಿತು. 9 ರಿಂದ 16ನೇ ವಾರ್ಡ್‍ವರೆಗೆ ನಾಮಪತ್ರ ಸಲ್ಲಿಸಲು ಹೆಚ್ಚು ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಸಂಜೆ 5.15ರವರೆಗೂ ನಾಮಪತ್ರ ಸ್ವೀಕರಿಸಲಾಯಿತು. 17ರಿಂದ 31ನೇ ವಾರ್ಡ್‍ವರೆಗೆ ಸಿಡಿಎಸ್ ಸಮುದಾಯ ಭವನದಲ್ಲಿ ನಾಮಪತ್ರ ಸ್ವೀಕರಿಸಲಾಯಿತು. ಇಲ್ಲಿ ಉಮೇದುವಾರಿಕೆ ಸ್ವೀಕಾರ ನಿಗದಿಪಡಿಸಿದ್ದ ಸಮಯ ಅಂದರೆ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಂಡಿತ್ತು.

31 ವಾರ್ಡ್‍ಗೆ 163 ನಾಮಪತ್ರ: ಚಾಮರಾಜನಗರ ನಗರಸಭೆಯ 1ನೇ ವಾರ್ಡ್‍ಗೆ 3 ಮಂದಿ, 2ನೇ ವಾರ್ಡ್‍ಗೆ 3, 3ನೇ ವಾರ್ಡ್‍ಗೆ 10, 4ನೇ ವಾರ್ಡ್‍ಗೆ 7, 5ನೇ ವಾರ್ಡ್‍ಗೆ 4, 6ನೇ ವಾರ್ಡ್‍ಗೆ 7, 7ನೇ ವಾರ್ಡ್‍ಗೆ 2, 8ನೇ ವಾರ್ಡ್‍ಗೆ 4, 9ನೇ ವಾರ್ಡ್‍ಗೆ 10, 10ನೇ ವಾರ್ಡ್‍ಗೆ 3, 11ನೇ ವಾರ್ಡ್‍ಗೆ 10, 12ನೇ ವಾರ್ಡ್‍ಗೆ 10, 13ನೇ ವಾರ್ಡ್‍ಗೆ 7, 14ನೇ ವಾರ್ಡ್‍ಗೆ 4, 15ನೇ ವಾರ್ಡ್‍ಗೆ 13, 16ನೇ ವಾರ್ಡ್‍ಗೆ 5, 17ನೇ ವಾರ್ಡ್‍ಗೆ 7, 18ನೇ ವಾರ್ಡ್‍ಗೆ 3, 19ನೇ ವಾರ್ಡ್‍ಗೆ 5, 20ನೇ ವಾರ್ಡ್‍ಗೆ 3, 21ನೇ ವಾರ್ಡ್‍ಗೆ 3, 22ನೇ ವಾರ್ಡ್‍ಗೆ 2, 23ನೇ ವಾರ್ಡ್‍ಗೆ 5, 24ನೇ ವಾರ್ಡ್‍ಗೆ 4, 25ನೇ ವಾರ್ಡ್‍ಗೆ 3, 26ನೇ ವಾರ್ಡ್‍ಗೆ 7, 27ನೇ ವಾರ್ಡ್‍ಗೆ 3, 28ನೇ ವಾರ್ಡ್‍ಗೆ 3, 29ನೇ ವಾರ್ಡ್‍ಗೆ 4, 30ನೇ ವಾರ್ಡ್‍ಗೆ 6, 31ನೇ ವಾರ್ಡ್‍ಗೆ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ 31 ಸದಸ್ಯ ಸ್ಥಾನಗಳಿಗೆ ಒಟ್ಟು 163 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

15ನೇ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ವಾರ್ಡ್‍ನಿಂದ ಅತಿ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡ್‍ನಿಂದ 13 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗ ‘ಎ’ (ಮಹಿಳೆ)ಗೆ ಮೀಸಲಾಗಿರುವ 7ನೇ ವಾರ್ಡ್‍ನಿಂದ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 22ನೇ ವಾರ್ಡ್‍ನಿಂದ ಇಬ್ಬರು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ವಾರ್ಡ್‍ನಲ್ಲಿದ್ದ ಆಯ್ಕೆ ಬಯಸಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಈ ವಾರ್ಡ್‍ಗಳಲ್ಲಿ ಪ್ರಮುಖ ಪಕ್ಷಗಳ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ.

ಕಾಂಗ್ರೆಸ್, ಬಿಜೆಪಿ ಮಾತ್ರ ಸ್ಪರ್ಧೆ: ಚಾಮರಾಜನಗರ ನಗರಸಭೆಯ ಎಲ್ಲಾ 31 ವಾರ್ಡ್‍ಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಈ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಉಳಿದ ಪಕ್ಷಗಳಿಂದ ಜೆಡಿಎಸ್, ಬಿಎಸ್‍ಪಿ, ಎಸ್‍ಡಿಪಿಐ ಸೇರಿದಂತೆ ಇನ್ನಿತರ ಪಕ್ಷಗಳು ಕೆಲವು ವಾರ್ಡ್‍ಗಳಿಗೆ ಮಾತ್ರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ.

ನಾಳೆ ನಾಮಪತ್ರ ಪರಿಶೀಲನೆ
ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಸಲ್ಲಿಕೆ ಆಗಿರುವ ನಾಮಪತ್ರಗಳ ಪರಿಶೀಲನಾ ಕಾರ್ಯ ಆ. 20ರಂದು ನಡೆಯಲಿದೆ.

ನಾಮಪತ್ರ ಸ್ವೀಕರಿಸಿದ ಸ್ಥಳದಲ್ಲಿ ನಿಯೋಜನೆಗೊಂಡಿರುವ ಚುನಾವಣಾಧಿಕಾರಿಗಳು ಉಮೇದುವಾರಿಕೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹಾಜರಿರುವಂತೆ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವಾಗಲೇ ಸೂಚಿಸಲಾಗಿದೆ. ಆ. 23 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಆ. 31ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಮರು ಮತದಾನದ ಅಗತ್ಯ ಇದ್ದಲ್ಲಿ ಸೆ. 2ರಂದು ನಡೆಯಲಿದೆ. ಸೆ. 3ರಂದು ಮತ ಎಣಿಕಾ ಕಾರ್ಯ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.

Translate »