ಜಿಲ್ಲಾಧಿಕಾರಿ ವರ್ಗಾವಣೆಗೆ ಸಚಿವ ರೇವಣ್ಣ ಒತ್ತಾಯ
ಮೈಸೂರು

ಜಿಲ್ಲಾಧಿಕಾರಿ ವರ್ಗಾವಣೆಗೆ ಸಚಿವ ರೇವಣ್ಣ ಒತ್ತಾಯ

April 30, 2019

ಹಾಸನ: ಪಾರದರ್ಶಕ ಮತ ಎಣಿಕೆ ಆಗಬೇಕಾದರೆ ಈಗಿರುವ ಜಿಲ್ಲಾಧಿ ಕಾರಿ ಅವರನ್ನು ಕೂಡಲೇ ವರ್ಗಾವಣೆ ಮಾಡ ಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬಿಜೆಪಿ ಪಕ್ಷದ ಏಜೆಂಟ್ ರೀತಿ ನಡೆದುಕೊಳ್ಳುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ಪಾರ ದರ್ಶಕವಾಗಿ ಮತ ಎಣಿಕೆ ಕಾರ್ಯ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಪ್ರಿಯಾಂಕ ಅವರನ್ನು ವರ್ಗಾವಣೆ ಮಾಡಬೇಕು ಎಂದು ಸಚಿವರು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದರು. ಪ್ರಿಯಾಂಕ ಜಿಲ್ಲಾಧಿಕಾರಿಯಾಗಿ ಅಧಿ ಕಾರ ವಹಿಸಿಕೊಂಡ ಬಳಿಕ ವರ್ಗಾವಣೆಗೊಂಡಿರುವ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿ, ಮಾರ್ಗದರ್ಶನ ಪಡೆದಿದ್ದಾರೆ. ಅವರನ್ನು ತಮ್ಮ ಮನೆಯಲ್ಲಿಯೇ ಎರಡು ದಿನ ಇರಿಸಿಕೊಂಡಿದ್ದರು. ಇದಕ್ಕೆ ಆಯೋಗದ ಅನು ಮತಿ ಪಡೆದಿದ್ದರೇ? ಡಿಸಿ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ನಡೆದಿರುವ ಎಲ್ಲಾ ಘಟನೆಗಳ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು. ಹೊಳೆ ನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 244ರಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸುತ್ತಿರುವವರು ಏಜೆಂಟರು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದೂರು ನೀಡಬಹುದಿತ್ತು. ಆಗ ಯಾವುದೇ ದೂರು ನೀಡದವರು ನಂತರ ದೂರು ನೀಡಲು ಕಾರಣ ಏನು? ಮತದಾನ ನಡೆದು ಆರು ದಿನಗಳ ಬಳಿಕ ದೂರು ನೀಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಒತ್ತಡ ಹೇರಿ, ಇದೇ ರೀತಿ ದೂರು ನೀಡುವಂತೆ ಬಿಜೆಪಿಗೆ ಹೇಳಿ ಬರೆಸಿದ್ದಾರೆ? ಎಂದು ದೂರಿದರು.

ನಕಲಿ ಮತದಾನ ಸಂಬಂಧ ದೂರುದಾರರ ಸಮ್ಮುಖದಲ್ಲಿ ಪ್ರಿಯಾಂಕ ಅವರು ತಮ್ಮ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ತರಿಸಿಕೊಂಡು ಕೂಲಂಕುಷ ಅವಲೋಕನ ಮಾಡಿದ್ದಾರೆ. ಅದೇ ರೀತಿ ನಮ್ಮ ಪಕ್ಷದವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಬೇಕಿತ್ತು. ಆ ರೀತಿ ಮಾಡದೇ ಏಕ ಪಕ್ಷೀಯ ವಾಗಿ ನಡೆದುಕೊಂಡಿದ್ದಾರೆ. ಮತಗಟ್ಟೆಯೊಳಗೆ ಹತ್ತು ನಿಮಿಷ ನನ್ನ ಪತ್ನಿಗಾಗಿ ಕಾದು ನಿಂತೆ. ನಕಲಿ ಮತದಾನ ಮಾಡಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ದೂರು ನೀಡಿರುವ ಬೂತ್ ಏಜೆಂಟರುಗಳಾದ ರಾಜು ಮತ್ತು ಮಾಯಣ್ಣ ಅವರು ಸ್ಥಳೀಯರಲ್ಲ. ಸ್ಥಳೀಯರಲ್ಲದವರಿಂದ ನಕಲಿ ಮತದಾನ ಮಾಡಿರುವವರು ಯಾರು ಎಂದು ಗುರುತಿಸಲು ಹೇಗೆ ಸಾಧ್ಯ? ನನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾಡಲಾಗುತ್ತಿದೆ? ಎಂದು ಕಿಡಿಕಾರಿದರು.

Translate »