ಮೂವರು ಸಿಬ್ಬಂದಿ ಅಮಾನತು
ಹಾಸನ

ಮೂವರು ಸಿಬ್ಬಂದಿ ಅಮಾನತು

April 30, 2019

ಹಾಸನ: ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 244ರಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಬಿಜೆಪಿ ಏಜೆಂಟರುಗಳ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತನಿಖೆ ನಡೆಸಿ ಮತಗಟ್ಟೆಯ ಮೂವರು ಸಿಬ್ಬಂದಿಯನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಮತಗಟ್ಟೆ ಯಲ್ಲಿ ಕಾರ್ಯ ನಿರ್ವಹಿಸಿದ ಯೋಗೇಶ್, ರಾಮಚಂದ್ರ ರಾವ್ ಹಾಗೂ ದಿನೇಶ್ ಅಮಾನತುಗೊಂಡ ಸಿಬ್ಬಂದಿ.

ಏನಿದು ಪ್ರಕರಣ?: ಏ.18ರಂದು ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ  ಪಡುವಲಹಿಪ್ಪೆ ಗ್ರಾಮ ದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್, ಸಚಿವ ಹೆಚ್.ಡಿ.ರೇವಣ್ಣ ಮತದಾನ ಮಾಡಿದ ನಂತರ ಕೆಲವು ಯುವಕರು ಅಕ್ರಮ ಮತದಾನ ಮಾಡಿ ದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪೆÇೀಲಿಂಗ್ ಏಜೆಂಟ್ ಆಗಿದ್ದ ಹೊಳೆನರಸೀಪುರ ತಾಲೂಕಿನ ಮಾರ ಗೋಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಎನ್. ರಾಜು ಮತ್ತು ಮಾಯಣ್ಣ ಎಂಬುವರು `ಅಕ್ರಮ ಮತದಾನ ನಡೆದಿದೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅವರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಭಾನುವಾರ ಮತಗಟ್ಟೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಅಕ್ರಮ ಮತದಾನ ನಡೆದಿರುವುದು ಬೆಳಕಿಗೆ ಬಂದಿದ್ದು, ಕರ್ತವ್ಯ ಲೋಪ ಆರೋಪದಡಿ ಮೂವರು ಸಿಬ್ಬಂದಿಯನ್ನು ಅಮಾ ನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಚುನಾ ವಣಾಧಿಕಾರಿ ದೂರಿನ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಿದ ಬಳಿಕ ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ದೂರಿನ ಅನ್ವಯ ವಿಡಿಯೋ ದೃಶ್ಯಾವಳಿ ವೀಕ್ಷಿಸಿದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮೇಲ್ನೋಟಕ್ಕೆ ಆರೋಪ ವಾಸ್ತವಾಂಶದಿಂದ ಕೂಡಿದೆ ಎಂದು ತಪ್ಪಿತಸ್ಥರ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು. ಅದರಂತೆ ಚುನಾವಣಾಧಿಕಾರಿ ಗಿರೀಶ್ ಎಂ.ನಂದನ್ ಹೊಳೆನರಸೀಪುರ ಪೆÇಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮರು ಮತದಾನ ನಡೆಯುವುದೇ?: ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಅಮಾನತುಪಡಿಸಿದ ಬೆಳವಣಿಗೆಯು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ, ಈ ಮತಗಟ್ಟೆಯಲ್ಲಿ ಅಕ್ರಮ ಮತದಾನÀಕ್ಕೆ ಈ ಕ್ರಮ ಪುಷ್ಟಿ ನೀಡಿದಂತಾಗಿದ್ದು, ಇಲ್ಲಿ ಮರುಮತದಾನಕ್ಕೆ ಆದೇಶಿಸಲಾಗುವುದೇ? ಅಥವಾ ಚುನಾವಣಾ ಫಲಿತಾಂಶ ಮುಂದೂಡಲಾಗುವುದೇ ಎಂಬ ಅನುಮಾನ ಮೂಡತೊಡಗಿದೆ.

18 ಮತಗಟ್ಟೆಯಲ್ಲಿಯೂ ಅಕ್ರಮ-ಬಿಜೆಪಿ ಆರೋಪ: ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಯ ಇನ್ನೂ 18 ಮತಗಟ್ಟೆಯಲ್ಲಿಯೂ ಅಕ್ರಮ ನಡೆದಿದೆ. ಇದಕ್ಕೆ ಕುಮ್ಮಕ್ಕು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ ಎಂದು ಶಾಸಕ ಪ್ರೀತಂ ಜೆ.ಗೌಡ ತಿಳಿಸಿದರು.

Translate »