ಗುಂಪು ಘರ್ಷಣೆ: ಬೈಕ್ ಜಖಂ
ಹಾಸನ

ಗುಂಪು ಘರ್ಷಣೆ: ಬೈಕ್ ಜಖಂ

September 20, 2018

ಬೇಲೂರು: ಎರಡು ಗುಂಪುಗಳ ನಡುವೆ ಪರಸ್ಪರ ಜಗಳ ನಡೆದು, ಬೈಕ್ ಜಖಂ ಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಯುವಕರ ಗುಂಪಿನ ನಡುವೆ ಹೊಡೆದಾಟ ನಡೆದಿದೆ. ನಿಂತಿದ್ದ ಒಂದು ಗುಂಪಿನ ಮೇಲೆ ಬೈಕ್‍ನಲ್ಲಿ ಬಂದ ಮತ್ತೊಂದು ಗುಂಪು ದಾಳಿ ನಡೆಸಿದೆ. ಹೊಡೆದಾಟದ ವೇಳೆ ಬೈಕ್ ಜಖಂಗೊಂಡಿದೆ. ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಗಲಾಟೆ ನಡೆಸಿದ ಕಿಡಿಗೇಡಿಗಳ ಪತ್ತೆಗೆ ಪೆÇಲೀಸರು ಸಿಸಿ ಟಿವಿ ಫೂಟೇಜ್ ವಶಕ್ಕೆ ಪಡೆದಿದ್ದಾರೆ.

Translate »